ಬೆಳಗಾವಿ-ಬೆಳಗಾವಿಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಮೃತವ್ಯಕ್ತಿಯೊಬ್ಬರ ಅಸ್ಥಿಪಂಜರದ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪೂರ ಗ್ರಾಮದ ಮನೆಯೊಂದರಲ್ಲಿ ಅಸ್ತಿಪಂಜರ ಸಿಕ್ಕಿದೆ.ಮನೆಯಲ್ಲಿ ಪತ್ತೆಯಾಗಿರುವ ಅಸ್ತಿಪಂಜರ 8ರಿಂದ 9ತಿಂಗಳ ಹಿಂದೆ ಸಾವಾಗಿರೋ ಶಂಕೆ ವ್ಯಕ್ತವಾಗಿದೆ.
ಶಿವಾಪೂರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂಬುವವರ ಅಸ್ಥಿಪಂಜರ ಎಂದು ಶಂಕಿಸಲಾಗಿದೆ.ಮೃತಪಟ್ಟರು ಯಾರು ನೋಡದ ಪರಿಣಾಮ ಆಸ್ತಿಪಂಜರದ ರೀತಿಯಲ್ಲಿ ಕಾಣುತ್ತಿದೆ.
ಪ್ರಕಾಶ ಬುದ್ಧಿಮಾಂದ್ಯನಾಗಿದ್ದನಂತೆ ಮನೆಯಲ್ಲಿ ತಾನೊಬ್ಬನೆ ಇರುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.ಸ್ಥಳಕ್ಕೆ ಮುರಗೋಡ ಠಾಣೆಯ ಸಿಪಿಐ ಮೌನೇಶ್ವರ ಮಾಲಿಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ