ಬೆಳಗಾವಿ- ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಹಲವಾರು ಪ್ರತಿಷ್ಠಿತ ಕಾಲೇಜುಗಳಿವೆ,ಈ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೋಲೀಸರು ಬಂಧಿಸಿ ಒಂದು ಕೆಜಿ ಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಖೈಬರ್ ಹೊಟೇಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಕ್ಯಾಂಪ್ ಪೋಲೀಸರು,ಬೆಳಗಾವಿಯ ಜೇಡ ಗಲ್ಲಿ ಶಹಾಪೂರಿನ ಪ್ರದೀಪ ಲವಕುಶ ಹುಬ್ಬಳ್ಳಿ (27) ಮತ್ತು ಇದೇ ಗಲ್ಲಿಯ ವಿಜಯಕುಮಾರ್ ವೀರಭದ್ರಪ್ಪಾ ತಾಂಡೂರ (25) ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
27,424 ರೂ ಮೌಲ್ಯದ 1kg 705 ಗ್ರಾಂ ಗಾಂಜಾ ಹಾಗೂ ಬೈಕ್ ವಶವಡಿಸಿಕೊಂಡಿದ್ದು, ಕಾಲೇಜುಗಳು ಇರುವ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಜೈಲಿಗೆ ಕಳುಹಿಸುವಲ್ಲಿ ಬೆಳಗಾವಿಯ ಕ್ಯಾಂಪ್ ಪೋಲೀಸರು ಯಶಸ್ವಿ ಯಾಗಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ