ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು
ಬೆಳಗಾವಿ- ಮನೆಯವರು ಮನೆಗೆ ಕೀಲಿ ಹಾಕಿ ಬೇರೆ ಊರುಗಳಿಗೆ ಹೋಗಿರುವ ಮೂರು ಮನೆಗಳನ್ನು ಗುರುತಿಸಿದ ಚಾಲಾಕಿ ಕಳ್ಳರು ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ನಡೆದಿದೆ
ಶುಕ್ರವಾರ ಮದ್ಯರಾತ್ರಿ ಮೂರು ಮನೆಗಳ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಕಳ್ಳತನ ನಡೆದ ವಿಷಯ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ
ಮೂರು ಮನೆಗಳ ಟ್ರೇಝರಿಗಳ ಲಾಕ್ ಮುರಿದು ಬಟ್ಟೆಗಳನ್ನು ಚಲ್ಲಾಪಿಲ್ಲಿ ಮಾಡಿರುವ ಕಳ್ಳರು ಚನ್ನಾಭರಣ ದೋಚಿದ್ದಾರೆ
ಕಳ್ಳತನವಾದ ಮನೆಯ ಮಾಲೀಕರು ಬೇರೆ ಊರು ಗಳಿಗೆ ಹೋಗಿದ್ದು ಅವರು ಮರಳಿ ಬಂದ ಬಳಿಕ ಯಾರ ಮನೆಯಿಂದ ಏನೇನು ಕಳುವು ಆಗಿದೆ ಅನ್ನೋದು ಗೊತ್ತಾಗಲಿದೆ
ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ದೌಡಾಯಿಸಿದ್ದಾರೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					