ಬೆಳಗಾವಿ- ಗೋಕಾಕ್ ನಗರದ ಉದ್ಯಮಿ ಮುನ್ನಾ ಉರ್ಫ್ ರಾಜು ಝಂವರ ಕೊಲೆ ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸುವಲ್ಲಿ ಬೆಳಗಾವಿ ಪೋಲೀಸ್ರು ಯಶಸ್ವಿಯಾಗಿದ್ದು,ಆರು ದಿನಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ ಕೊಲೆಯಾದ ರಾಜು ಝಂವರ್ ಶವ ಪತ್ತೆ ಮಾಡುವ ಮೂಲಕ ಕೊಲೆ ಪ್ರಕರಣ ಖೇಲ್ ಖತಂ ಮಾಡಿದ್ದಾರೆ.
ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ,ಡಾ ಸಚೀನ್ ಶಂಕರ ಶಿರಗಾವಿ,.(36) ಚನ್ನಮ್ಮ ನಗರ ಗೋಕಾಕ್,ಡಾ.ಶಿವಾನಂದ ಕಾಡಗೌಡ ಪಾಟೀಲ ಸಿಟಿ ಹಾಸ್ಪಿಟಲ್ ಗೋಕಾಕ್ ಈ ಇಬ್ವರು ಆರೋಪಿಗಳನ್ಬು ಈ ಹಿಂದೆಯೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದ ಪೋಲಿಸರು ಈಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇಯ ಆರೋಪಿಯಾದ,ಇರ್ಷಾದ್ ಅಹ್ಮದ ತ್ರಾಸಗರ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಇಬ್ಬರು ವೈದ್ಯರು ಶಾಮೀಲಾಗಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗುತ್ತಿದ್ದು ಈಗ ಮೂರನೇಯ ಆರೋಪಿ ಸಹ ಪೋಲೀಸರ ಬಲೆಗೆ ಬಿದ್ದಿದ್ದು, ಈ ಪ್ರಕರಣದಲ್ಲಿ ಮೂರನೇಯ ಆರೋಪಿಯ ಪಾತ್ರದ ಬಗ್ಗೆ ಪೋಲೀಸರು ಮಾಹಿತಿ ನೀಡಿಲ್ಲ. ಒಟ್ಟಾರೆ ತ್ರೀಮೂರ್ತಿಗಳು ಸೇರಿಕೊಂಡು ಉದ್ಯಮಿಯ ಕೊಲೆ ಮಾಡಿರುವದಕ್ಕೆ ಪ್ರಮುಖ ಕಾರಣ ಏನು, ಸ್ಕೇಚ್ ಹಾಕಿದ್ದು ಯಾತಕ್ಕೆ,ಉದ್ಯಮಿ ಬಲಿಯಾಗಿದ್ದು ಯಾವ ಕಾರಣಕ್ಕೆ,ಇಬ್ಬರು ವೈದ್ಯರು ಸೇರಿಕೊಂಡು ಮೂರನೇಯ ಆರೋಪಿಗೆ ಸುಪಾರಿ ಕೊಟ್ಟಿದ್ರಾ ? ಈ ಎಲ್ಲ ಅಂಶಗಳು ತನಿಖೆಯ ನಂತರ ಗೊತ್ತಾಗಲಿವೆ.