ಬೆಳಗಾವಿ- ಸುವರ್ಣ ವಿಧಾನಸೌಧದ ಮೆಟ್ಟಿಲು ಬಳಿ ಸಿಟಿ ರವಿ ಕಾರಿಗೆ ಸಚಿವೆ ಹೆಬ್ಬಾಳ್ಕರ್ ಬೆಂಬಲಿಗರು ಮುತ್ತಿಗೆ ಹಾಕಿ. ಸಿಟಿ ರವಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸಿಟಿ ರವಿ ಕಾರಿನ ಡೋರ್ ಎಳೆದು ಹೊರ ತೆಗೆಯಲು ಯತ್ನಿಸಿದ ಹೆಬ್ಬಾಳಕರ್ ಬೆಂಬಲಿಗರು ಸಿಟಿ ರವಿ ಕುಳಿತುಕೊಂಡಿದ್ದ ಕಾರಿಗೆ ಘೇರಾವ್ ಹಾಕಿ ದಿಕ್ಕಾರದ ಘೋಷಣೆಗಳನ್ನು ಕೂಗಿದರು.ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿ ಬೆಂಬಲಗರನ್ನ ತಡೆದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೋಲೀಸರು ದೌಡಾಯಿಸಿ ಹೆಬ್ಬಾಳ್ಕರ್ ಬೆಂಬಲಿಗರನ್ನು ಹೊರ ಕಳುಹಿಸಿದ ಪೋಲೀಸರು.
ಹೆಬ್ಬಾಳಕರ್ ಬೆಂಬಲಿಗರನ್ನು ಪೋಲೀಸರು ಚದುರಿಸಿದ ಬಳಿಕ ಸಿಟಿ ರವಿ ಅವರು ಪೋಲೀಸ್ ಸರ್ಪಗಾವಲಿನಲ್ಲಿ ಸುವರ್ಣಸೌಧ ಪ್ರವೇಶಿಸಿದರು.