ಬೆಳಗಾವಿ-ಇಂದಿನ ಯುವಗದಲ್ಲಿ ಯುವಪೀಳಿಗೆಯ ಲೈಫ್ ಸ್ಟೈಲ್ ಬದಲಾಗಿದೆ,ಕಲಿತ ಶಾಲೆಯನ್ನು ಕಲಿಸಿದ ಗುರುಗಳನ್ನು ಸ್ಮರಿಸುವದು ಬಹಳ ಕಡಿಮೆ,ಆದರೂ ಇಂದಿನ ಹೈಟೆಕ್ ಜಮಾನಾದಲ್ಲಿ, ಗುರುಗಳನ್ನು ವಂದಿಸುವ ಅಪರೂಪದ ಕಾರ್ಯಕ್ರಮ ನಾಳೆ ಭಾನುವಾರ ಹುಕ್ಕೇರಿಯಲ್ಲಿ ಇಡೀ ದಿನ ನಡೆಯಲಿದೆ.
33 ವರ್ಷಗಳ ಹಿಂದೆ ಹುಕ್ಕೇರಿಯ ಕಾಡಸಿದ್ದೇಶ್ವರ ಪ್ರೌಡ ಶಾಲೆಯಲ್ಲಿ ಕಲಿತ ವಿಧ್ಯಾರ್ಥಿಗಳು ಸೇರಿ ಬಾಲ್ಯದ ಆ ದಿನಗಳನ್ನು ಸ್ಮರಿಸಲು,ಕಲಿಸಿದ ಗುರುಗಳನ್ನು ರಥದಲ್ಲಿ ಮೆರವಣಿಗೆ ಮಾಡಿಸಿ,ಕೈತುತ್ತು ಉಣಿಸಿ,ಅವರ ಪಾದಪೂಜೆ ಮಾಡುವ ಮೂಲಕ ಗುರುವಂದನೆ ಮಾಡಲು ಅಭಿಮಾನದಿಂದ ತಯಾರಿ ಮಾಡಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಗುರುವಂದನೆ ಕಾರ್ಯಕ್ರಮದ ತಯಾರಿಯಲ್ಲಿ ತೊಡಗಿರುವ ಹುಕ್ಕೇರಿಯ ಕಾಡಸಿದ್ದೇಶ್ವರ ಶಾಲೆಯ,1988-89 ,ನೇಯ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು,ವಿಧ್ಯಾರ್ಥಿನಿಯರು ಅತ್ಯಂತ ಉತ್ಸಾಹ ಮತ್ತು ಅಭಿಮಾನದಿಂದ ಗುರುವಂದನೆ ಕಾರ್ಯಕ್ರಮ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದೇ ಶಾಲೆಯಲ್ಲಿ ಕಲಿತ ಪತ್ರಕರ್ತ ದಿಲೀಪ ಕುರುಂದವಾಡೆ ನೇತ್ರತ್ವದಲ್ಲಿ ಗುರುಂದನೆ,ಸವಿಸವಿ ನೆನಪು ಕಾರ್ಯಕ್ರಮ ನಡೆಯುತ್ತಿದ್ದು ದಿಲೀಪ್ ಜೊತೆ ಅವರ ಗೆಳೆಯರೂ ಸೇರಿ ಕಳೆದ ಒಂದು ತಿಂಗಳಿನಿಂದ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದು,ನಾಳೆ ಭಾನುವಾರ ಇವರು ಮಾಡಿದ ಶ್ರಮ ಗುರುವಂದನೆ ಕಾರ್ಯಕ್ರಮದಲ್ಲಿ ಅನಾವರಣ ಗೊಳ್ಳಲಿದೆ.
ಹುಕ್ಕೇರಿಯ ಹೊಟೇಲ್ ಮನೀಷ್ ಇಂಟರ್ನ್ಯಾಷನಲ್ ಪಕ್ಕದಲ್ಲಿ ಕಾರ್ಯಕ್ರಮದ ವೇದಿಕೆ ಸಜ್ಜಾಗಿದೆ.33 ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಕಲಿತ ಗೆಳೆಯರು ನಾಳೆ ಸೇರಲಿದ್ದಾರೆ,ಕಲಿಸಿದ ಗುರುಗಳಿಗೆ ಅಭಿಮಾನದಿಂದ ರಥದಲ್ಲಿ ಬರಮಾಡಿಕೊಂಡು ಅಭೂತಪೂರ್ವ ಗುರುವಂದನೆ ನಡೆಸಲಿದ್ದಾರೆ.
ನಾಳೆ ಭಾನುವಾರ ಬೆಳಿಗ್ಗೆಯಿಂದ ಮದ್ಯಾಹ್ನದ ವರೆಗೆ ಅತಿಥಿ ಗಳ ಸಮ್ಮುಖದಲ್ಲಿ ಗುರುಗಳ ಸತ್ಕಾರ ಕಾರ್ಯಕ್ರಮ ಬಾಲ್ಯದ ಸವಿಸವಿ ನೆನಪು, ಮದ್ಯಾಹ್ನ ಪತ್ರಕರ್ತ ದಿಲೀಪ್ ಕುರುಂದವಾಡೆ ಅವರಿಂದ ಪ್ರೇರಣಾದಾಯಕ ಹಿತನುಡಿ,ನಂತರ ಪ್ರಾಣೇಶ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮೂ ನಡೆಯಲಿದೆ.