ಖಾನಾಪೂರದಲ್ಲಿ ಅರವಿಂದ ಹೇಳಿಕೆಗೆ ದಶರಥ ಗರಂ…!!
ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಬೇಟಿ ಪಡಾವೋ..ಬೇಟಿ ಬಚಾವೋ ಅಂತ ಯೋಜನೆ ಮಾಡ್ತಾರೆ,ಹೆಣ್ಣು ಮಕ್ಕಳಿಗೆ ಅಧಿಕಾರ ಕೊಡುವ ನೀತಿ ಪಾಠ ಹೇಳ್ತಾರೆ,ಆದ್ರೆ ಖಾನಾಪೂರದಲ್ಲಿ ಬಿಜೆಪಿ ಮುಖಂಡ ಬಹಿರಂಗ ವೇದಿಕೆಯಲ್ಲೇ ತಮ್ಮ ಪಕ್ಷದ ನಾಯಕಿಯನ್ನೇ ಅವಮಾನ ಮಾಡ್ತಾರೆ,ಇದು ಬಿಜೆಪಿ ಪಕ್ಷದ “ಅಸಲಿ” ಸಿದ್ಧಾಂತ ಎಂದು ಖಾನಾಪೂರ ತಾಲ್ಲೂಕಿನ ಆಮ್ ಆದ್ಮಿ ಪಾರ್ಟಿ ಮುಖಂಡ,ದಶರಥ ಬನೋಶಿ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ದಶರಥ ಬನೋಶಿ, ಹಣ್ಣು ಮಕ್ಕಳು ರಾಜಕೀಯಕ್ಕೆ ಬರಬಾರ್ದು,ಮನೆಯಲ್ಲೇ ರೊಟ್ಟಿ ಮಾಡುತ್ತು ಕುಳಿತುಕೊಳ್ಳಬೇಕು,ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮೀತವಾಗಬೇಕು ಎಂದು ಬಿಜೆಪಿ ಪಕ್ಷದ ವೇದಿಕೆಯಲ್ಲೇ ಬಿಜೆಪಿ ಪಕ್ಷದ ಮಹಿಳಾ ನಾಯಕಿ ಸೋನಾಲಿ ಸರ್ನೋಬತ್ ಅವರನ್ನು ಅವಮಾನಿಸುವ ಮೂಲಕ ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದು, ಬಿಜೆಪಿ ಪಕ್ಷದವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಗೌರವ ಇದ್ದಲ್ಲಿ ಅರವಿಂದ ಪಾಟೀಲ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಿ ಎಂದು ಆಮ್ ಆದ್ಮಿ ಮುಖಂಡ ದಶರಥ ಬನೋಶಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಖಾನಾಪುರ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ದಿವಂಗತ ಉಮೇಶ್ ಕತ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ಬಿಜೆಪಿ ಮುಖಂಡ ಅರವಿಂದ್ ಪಾಟೀಲ್ ಅವರು ಹೆಣ್ಣು ಮನೆಗೆ ಸೀಮಿತವಾಗಬೇಕು ಮನೆಯಲ್ಲಿ ರೊಟ್ಟಿ ಚಪಾತಿ ಮಾಡಿಕೊಳ್ಳುತ್ತಾ ಕೂರಬೇಕು ಎಂದು ಖಾನಾಪುರ ತಾಲೂಕು ಉಸ್ತುವಾರಿ ಬಿಜೆಪಿ ಮುಖಂಡೇ ಯಾದ ಸೋನಾಲಿ ಸರ್ನೋಬತ್ ಅವರಿಗೆ ನೇರವಾಗಿ ಸಭೆಯಲ್ಲಿಯೇ ಅವಮಾನಿಸಿ ಹೀಯಾಳಿಸಿದ ಘಟನೆ ಇಂದಿನ ಪತ್ರಿಕೆಗಳಲ್ಲಿ ಗಮನಕ್ಕೆ ಬಂದಿದೆ.
ಇದರ ಜೊತೆಯಾಗಿ ಬಿಜೆಪಿ ಪಕ್ಷದವರು ರಾಷ್ಟ್ರಪ್ರೇಮ ಹಿಂದೂ ಧರ್ಮದ ಪ್ರೇಮ ಹಿಂದುತ್ವ ಎಂದು ಅಬ್ಬರದ ಭಾಷಣ ಮಾಡುತ್ತಿರುವಾಗ ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ಯಾವ ರೀತಿ ಗೌರವ ಕೊಡಬೇಕು, ರಾಷ್ಟ್ರಧ್ವಜಕ್ಕೆ ಯಾವ ರೀತಿ ಗೌರವ ಕೊಡಬೇಕು, ಹಿಂದೂ ಧರ್ಮದ ಮಹಿಳೆಗೆ ಯಾವ ರೀತಿ ಗೌರವ ಕೊಡಬೇಕು ಎಂಬುದರ ಬಗ್ಗೆ ಸ್ವಲ್ಪವೂ ಪರಿಜ್ಞಾನ ಇಲ್ವಾ..??
ಒಂದು ವೇಳೆ ಪರಿಜ್ಞಾನ ಇದ್ದಿದ್ದರೆ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರು ಹೆಣ್ಣು ಕುಲಕ್ಕೆ ಅವಮಾನಿಸುತ್ತಿರಲಿಲ್ಲ. ಹೀಗಾಗಿ ಬಿಜೆಪಿ ಮುಖಂಡೇ ಸೋನಾಲಿ ಸರ್ನೋಬತ್ ಅವರಿಗೆ ನೇರವಾಗಿ ಅವಮಾನಿಸಿ ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ ಹೀಗಾಗಿ ಇವರ ಈ ಹೇಳಿಕೆಯನ್ನು ಖಾನಾಪುರ ತಾಲೂಕು ಆಮ್ ಆದ್ಮಿ ಪಕ್ಷದ ಮುಖಂಡ ದಶರಥ್ ಬನೊಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ.