ಬೆಳಗಾವಿ- ಬೆಳಗಾವಿಯ ಚನ್ನಮ್ಮ ವೃತ್ತವನ್ನು ನವೀಕರಿಸಿ ರಾಜ್ತೋತ್ಸವದ ಮೆರವಣಿಗೆಯ ಮೇಲೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಠಿ ಮಾಡಲು ನಿರ್ಧರಿಸಿ ಕನ್ನಡಿಗರ ಉತ್ಸಾಹ ಇಮ್ಮಡಿ ಗೊಳಿಸಿದ ಜಿಲ್ಲಾಧಿಕಾರಿ ಮೊಮ್ಮನಹಳ್ಳಿ ಮತ್ತು ಪಾಲಿಕೆ ಆಯುಕ್ತರಿಗೆ ಕನ್ನಡ ಸಂಘಟನೆಗಳ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು
ಬೆಳಗಾವಿ ಜಿಲ್ಲಾಧಿಕಾರಿ ಗಳ ಚೇಂಬರ್ ನಲ್ಲಿ ಸೇರಿದ ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಜಿಲ್ಲಾದಿಕಾರಿ ಬೊಮನಹಳ್ಳಿ ಮತ್ತು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಕನ್ನಡದ ಪೇಟಾ ಹಾಕಿ ಮುತ್ತಿನ ಮಾಲೆ ಹಾಕಿ ಅಭಿನಂದಿಸಲಾಯಿತು
ಈ ಸಂಧರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ರಾಜ್ಯೋತ್ಸವದ ಬಗ್ಗೆ ಕಳಕಳಿ ತೋರಿದ್ದಾರೆ ಎರಡು ಬಾರಿ ರಾಜ್ಯೋತ್ಸವದ ಕುರಿತು ಸಭೆ ನಡೆಸಿ ಅದ್ಧೂರಿ ರಾಜ್ಯೋತ್ಸವದ ತಯಾರಿ ಮಾಡುವ ಮೂಲಕ ಕನ್ನಡದ ಅಭಿಮಾನ ತೋರಿಸಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡುವ ನಿರ್ಧಾರ ಕೈಗೊಂಡು ಹೊಸ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ಪ್ರಶಂಸೆ ಮಾಡಿದರು
ಪಾಲಿಕೆ ಆಯುಕ್ತ ಶಶಿಧರ ಕುರೇರ ಚನ್ನಮ್ಮ ವೃತ್ತ ನವೀಕರಿಸಿ ಕನ್ನಡಮಯವನ್ನಾಗಿ ಅಭಿವೃದ್ಧಿಪಡಿಸಿ ಚನ್ನಮ್ಮನ ಮೂರ್ತಿಗೆ ಹೊಸ ರೂಪ ಕೊಡಸಿದ್ದಾರೆ ಎಂದು ಶಶಿಧರ ಕುರೇರ ಅವರಿಗೆ ಕನ್ನಡದ ಸಮ್ಮಾನ ನೀಡಲಾಯಿತು
ಪುಷ್ಪವೃಷ್ಟಿಗೆ ಜಿಲ್ಲಾಡಳಿತ ಅಸ್ತು;
ಬೆಳಗಾವಿ:ಬೆಳಗಾವಿ ಕನ್ನಡ ರಾಜ್ಯೋತ್ಸವದ ಮೆರವಣಿಗೆ ಮೇಲೆ ಹೆಲಿಕಾಫ್ಟರ್ ಮೂಲಕ ಪುಷ್ಪವೃಷ್ಠಿ ಮಾಡಲು ಜಿಲ್ಲಾಡಳಿತ ಮತ್ತೆ ನಿರ್ಧರಿಸಿದ್ದು, ನಾಳೆ ಪುಷ್ಪವೃಷ್ಠಿ ನಡೆಯಲಿದೆ.
ನಿನ್ನೆ ತಡರಾತ್ರಿ ಒಮ್ಮೆಲೆ ಆರ್ಥಿಕ ಕೊರತೆ ಕಾರಣ ಹೆಲಿಕಾಫ್ಟರ್ ಪುಷ್ಪವೃಷ್ಠಿ ರದ್ದು ಮಾಡಿದ್ದ ಜಿಲ್ಲಾಡಳಿತ ಇಂದು ದಿಢೀರ್ ತನ್ನ ಬಳಿ ಹಣ ಇದೆ ಎಂದು ಹೇಳಿಕೊಂಡಿದೆ.
ಇಂದು ಇಡೀ ದಿನ ನಡೆದ ಬೆಳವಣಿಗೆಯಲ್ಲಿ ಜಿಲ್ಲಾಡಳಿತ ಮತ್ತೆ ತನ್ನದೇ ಪೂರ್ಣ ಹಣದಲ್ಲಿ ಹೆಲಿಕಾಫ್ಟರ್ ಹಾರಿಸುವ ದಿಢೀರ ನಿರ್ಧಾರ ಕೈಗೊಂಡಿದೆ.
ನಿನ್ನೆ ರಾತ್ರಿ ಹಣಕಾಸಿನ ತೊಂದರೆಯಿಂದ ಹೆಲಿಕಾಫ್ಟರ್ ಹಾರಾಟ ಕಾರ್ಯಕ್ರಮವನ್ನು ಜಿಲ್ಲಾಡಳಿತ ಕೈ ಬಿಟ್ಟಿತ್ತು. ಜತೆಗೆ ಈ ಬಗ್ಗೆ ಹೆಲಿಕಾಫ್ಟರ್ ಏಜೆನ್ಸಿಗೂ ರದ್ದುಪಡಿಸುವ ಬಗ್ಗೆ ತಿಳಿಸಿತ್ತು.
ಹೆಲಿಕಾಫ್ಟರ್ ಹಾರಾಟ ರದ್ದಾಗುವ ವಿಷಯ ಅರಿತ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಹೆಚ್ಚುವರಿ ಬೇಕಾದ ಆರ್ಥಿಕ ಸಹಾಯ ₹ 1.60ಲಕ್ಷ ಹಣದ ಸಮೇತ ಜಿಲ್ಲಾಧಿಕಾರಿಗಳ ಚೇಂಬರ್ ಗೆ ಆಗಮಿಸಿದಾಗ ಜಿಲ್ಲಾಡಳಿತ ಕೊನೆ ಕ್ಷಣದಲ್ಲಿ ತನ್ನ ನಿರ್ಧಾರ ಪ್ರಕಟಿಸಿತು
ನಮ್ಮ ಬಳಿ ಹೆಲಿಕಾಫ್ಟರ್ ಹಾರಾಟಕ್ಜೆ ತಗಲುವಷ್ಟು ಹಣ ಇದೆ ಎಂದು ಸ್ಪಷ್ಟಪಡಿಸಿತು
ಹೆಲಿಕಾಪ್ಟರ್ ವ್ಯವಸ್ಥೆಗೆ ಹಣ ಸಹಾಯ ಮಾಡಲು ಹಣ ಸಮೇತ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದ ಶಂಕರ ಮುನವಳ್ಳಿ ಅವರ ಕನ್ನಡ ಅಭಿಮಾನದ ಕುರಿತು ಕನ್ನಡಪರ ಸಂಘಟನೆಗಳ ನಾಯಕರು ಮೆಚ್ಚುಗೆ ವ್ಯೆಕ್ತ ಪಡಿಸಿದರು
ಕನ್ನಡ ಸಂಘಟನೆಗಳ ಮುಖಂಡರಾದ ಮಹಾದೇವ ತಳವಾರ, ಅನಂತ ಬ್ಯಾಕೂಡ, ದೀಪಕ ಗುಡಗನಟ್ಟಿ, ಶ್ರೀನಿವಾಸ ತಾಳೂಕರ, ಗಣೇಶ ರೋಕಡೆ ಸೇರಿ ವಿವಿಧ ಸಂಘಟನೆಗಳ ಮುಖಂಡರು, ರೈತ ನಾಯಕರು ಉಪಸ್ಥಿತರಿದ್ದರು.