Breaking News

ಸಾಧಕರಿಗೆ ಸತ್ಕಾರ …ಸುವರ್ಣ ಸೌಧದಲ್ಲಿ ಚಮತ್ಕಾರ…ಇರಲಿ ಇದೇ ಮಮಕಾರ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ವಸತಿ ನಿಲಯಗಳಲ್ಲಿ ಇದ್ದುಕೊಂಡು sslc ಮತ್ತು PUC ಪರೀಕ್ಷೆಯಲ್ಲಿ ಶೇ 90/. ಕ್ಕಿಂತಲೂ ಹೆಚ್ಚು ಅಂಕ ಪಡೆದ ಜಾಣ ಜಾಣೆಯರಿಗೆ ಜಿಲ್ಲಾಡಳಿತದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಜಿಲ್ಲೆಯ 600 ಪ್ರತಿಭಾವಂತರಿಗೆ ಸತ್ಕರಿಸಿ ಗೌರವಿಸಿ ಪ್ರತಿಯೊಬ್ಬರಿಗೂ ತಲಾ ಹತ್ತು ಸಾವಿರ ರೂ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜಯರಾಂ ಹಾಸ್ಟೇಲ್ ಗಳಲ್ಲಿ ಇದ್ದುಕೊಂಡು ಸಾಧನೆ ಮಾಡಿರುವ ಸಾಧಕರು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಮುಂದಿನ ದಿನಗಳಲ್ಲಿ ಅಧಿಕಾರಿಗಳಾಗಿ ಜನ ಪ್ರತಿನಿಧಿಗಳಾಗಿ ಹೊರ ಹೊಮ್ಮಿ ಸಮಾಜಿಕ ಸೇವೆ ಮಾಡಲಿ ಎಂದು ಹಾರೈಸಿದರು

ಸಾಹಿತಿ ಮತ್ತು ಹಿರಿಯ ಪತ್ರಕರ್ತ ಸರಜೂ ಕಾಟ್ಕರ್ ಮಾತನಾಡಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಒಬ್ಬ ಅಧಿಕಾರಿಯಾಗಿ ಜನುಪಯೋಗಿ ಕಾರ್ಯಕ್ರಮ ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಅವರು ಆರಂಭಿಸಿದ ಈ ಅಪರೂಪದ ಕಾರ್ಯಕ್ರಮ ಅವರು ವರ್ಗಾವಣೆ ಆದ ನಂತರವೂ ಈ ಕಾರ್ಯಕ್ರಮ ಮುಂದುವರೆಯಬೇಕು ಅದಕ್ಕೆ ಜಿಲ್ಲಾಧಿಕಾರಿಗಳೇ ಒಂದು ಯೋಜನೆ ರೂಪಿಸಬೇಕು ಎಂದು ಸರಜೂ ಕಾಟ್ಕರ್ ಹೇಳಿದರು

ಬೆಳಗಾವಿ ಜಿಲ್ಲೆಯ ಸರ್ಕಾರಿ ಹಾಸ್ಟೇಲ್ ನಲ್ಲಿ ಇದ್ದುಕೊಂಡು IAS ಪರೀಕ್ಷೆ ಪಾಸ್ ಮಾಡಿದ ಚಿಕ್ಕೋಡಿ ತಾಲೂಕಿನ ಲಕ್ಕಪ್ಪ ಹಣಮನ್ನವರ ಮಾತನಾಡಿ BCM ಹಾಸ್ಟೇಲ್ ನಲ್ಲಿ ಇದ್ದುಕೊಂಡು IAS ಪಾಸ್ ಆಗಿರುವ ಸಾಧನೆಯ ಹಿಂದೆ ಹಲವರ ತ್ಯಾಗ ಅಡಗಿದೆ ನನ್ನ ಅಣ್ಣ ತಾನು ಕಲಿಯುವದನ್ನು ನಿಲ್ಲಿಸಿ ನನಗೆ ಕಲಿಸಿದ ಕುಗ್ರಾಮದಲ್ಲಿ ಜನಿಸಿದ ನನಗೆ ಅನೇಕ ಜನರು ಸಹಾಯ ಮಾಡಿದ್ದನ್ನು ನಾನೆಂದಿಗೂ ಮರೆಯೋದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು

ಸಂಸದ ಸುರೇಶ ಅಂಗಡಿ ಮಾತನಾಡಿ ನಾನೂ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದೇನೆ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಹಾಸ್ಟೇಲ್ ಸಾಧಕರನ್ನು ಗುರುತಿಸಿ ಸತ್ಕರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು

Upsc ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದ ಕನ್ನಡದ ಹೆಮ್ಮೆಯ ಪುತ್ರಿ ನಂದಿನಿ ಕೆ ಆರ್ ಮಾತನಾಡಿ ಇವತ್ತು ಬೆಳಗಾವಿಯಲ್ಲಿ ನನ್ನ ಹೃದಯ ತುಂಬಿ ಬಂದಿದೆ ಎಲ್ಲರೂ ನನ್ನನ್ನು ನಮ್ಮ ಮನೆಯ ಮಗಳೆಂದು ಒಪ್ಪಿ ಅಭಿನಂಧಿಸಿರುವದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ನಮ್ಮ ಗುರಿ ನಮಗೆ ಸವಾಲಾಗಬೇಕು ನಿಮ್ಮ ಕನಸು ಗಳು ನಿಮ್ಮನ್ನು ನಿದ್ದೆಮಾಡಲು ಬಿಡಬಾರದು ನಮ್ಮ ಮೇಲೆ ಸಮಾಜದ ಋಣ ಇದೆ ಅದನ್ನು ನಾವು ಮರುಪಾವತಿ ಮಾಡಲೇಬೇಕು ಆ ನಿಟ್ಟಿನಲ್ಲಿ ಸತತ ಪರಿಶ್ರಮ ಮಾಡಬೇಕು ಎಂದು ನಂದಿನಿ ಹೇಳಿದರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಈ ಕಾರ್ಯಕ್ರಮ ನಿಜವಾಗಿಯೂ ಅರ್ಥಪೂರ್ಣ ಮತ್ತು ಪ್ರೇರಣಾದಾಯಕ ಎಂದರು

ಸಾವಿತ್ರಿಬಾಯಿ ಪುಲೆ ದೇಶದಲ್ಲಿ 200 ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದರು ಅವರು ಮೇಲ್ಜಾತಿಯರಿಂದ ಪ್ರತಿರೋಧ ಎದುರಿಸಿ ಶಿಕ್ಷಣ ಕೊಟ್ಟರು ದೇಶದಲ್ಲಿ ಡಾ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ದಿನ ಶಿಕ್ಷಕರ ದಿನಾಚರಣೆ ಆಚರಿಸುವದು ಬೇಡ ಸಾವಿತ್ರಿ ಬಾಯಿ ಪುಲೆ ಅವರ ಅವರ ಜನ್ಮ ದಿನವಾದ ಜನೇವರಿ 3 ರಂದು ಸರ್ಕಾರ ಶಿಕ್ಷಕರ ದಿನಾಚರಣೆ ಆಚರಿಸಲಿ ಎಂದು ಗದುಗಿನ ತೋಂಟದಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯೆಕ್ತಪಡಿಸಿದರು

 

ನಾಗನೂರ ಮಠದ ಸಿದ್ಧರಾಮ ಮಹಾಸ್ವಾಮಿಗಳು ಸಾನಿದ್ಯವಹಿಸಿದ್ದರು

ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದ ಕುಮಾರಿ ನಂದಿನಿ ಎಸ್ ಪಿ ರವಿಕಾಂತೇಗೌಡ ಸಂಸದರಾದ ಸುರೇಶ ಅಂಗಡಿ,ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸೇರಿದಂತೆ ಜಿಲ್ಲೆಯಿಂದ IAS ಮತ್ತು KAS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ಇಲಾಖೆಗಳಿಗೆ ನಿಯೋಜನೆಗೊಂಡಿರುವ 48 ಜನ ಸಾಧಕರು ಸೇರಿದಂತೆ ಹಲವಾರು ಜನ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *