ಪೋಲೀಸ್ ಕಮಿಷ್ನರ್ ರಾಜಪ್ಪ …ಬಾಲಕನಿಗೂ ಸಲ್ಯುಟ್ ಹೊಡೆದ್ರಪ್ಪ….!!!!!

 

ಸಮವಸ್ತ್ರದೊಳಗೆ ಸುತ್ತು ಹಾಕಿ ಹಾಕಿ ಕಮಿಷ್ನರ್ ರಾಜಪ್ಪ ಸುಸ್ತೋ ಸುಸ್ತು

ಕಾರಿನಿಂದ ಕೆಳಗಿಳಿದಾಗ ಎದುರಲ್ಲೇ ನಡೆದಿತ್ತು ಚಿಕ್ಕ ಮಕ್ಕಳ ಗಸ್ತು ಇದನ್ನು ನೋಡಿದ ಕಮಿಷ್ನರ್ ರಾಜಪ್ಪನವರ ಮೂಡ್ ಆಯ್ತು ಮಸ್ತು

ಟೆನಶನ್ ಇಲ್ಲದ ರಾಜಪ್ಪನವರು ಆದ್ರೂ ಅಟೇನಶನ್ ಬಾಲಕನ ಎದರು ನಿಂತು ಹೊಡೆದರಪ್ಪ ಸಲ್ಯುಟ್ ಇದನ್ನು ನೋಡಿ ಬಾಲಕನಿಗೂ ಆಯ್ತು ಟೇನಶನ್ ಪ್ರತಿಯಾಗಿ ಬಾಲಕನೂ ಹೊಡೆದ ಸಲ್ಯುಟ್ ಈ ಪೋಜಿಶನ್ ನೋಡಿ ಸಾರ್ವಜನಿಕರಿಗೆ ರಾಜಪ್ಪನವರ ಮೇಲೆ ಫುಲ್ ಲವ್ ಮೋಶನ್

ಬೆಳಗಾವಿ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ನವರು ಕಚೇರಿಗೆ ತೆರಳುತ್ತಿರುವಾಗ ಮೈದಾನದಲ್ಲಿ ಚಿಕ್ಕ ಮಕ್ಕಳು ಲೆಫ್ಟ್..ರೈಟ್…ಲೆಫ್ಟ್ ರೈಟ್ ಅಂತ ಪರೇಡ್ ಮಾಡುತ್ತ ಆಟವಾಡುತ್ತಿರುವದನ್ನು ನೋಡಿ ಕಾರು ನಿಲ್ಲಿಸಿ ಮಕ್ಕಳ ಹತ್ತಿರ ಹೋದರು ಮಕ್ಕಳು ಶಿಸ್ತು ಭದ್ಧವಾಗಿ ಪರೇಡ್ ನೋಡಿ ಭಾವುಕರಾದ ಡಿಸಿ ರಾಜಪ್ಪ ಬಾಲಕನ ಎದರು ನಿಂತು ಸಲ್ಯುಟ್ ಹೊಡದೇ ಬಿಟ್ರು

ಆ ಬಾಲಕ ಯಾರೋ ನನ್ನ ಎದರು ನಿಂತು ಸಲ್ಯುಟ್ ಹೊಡೆಯುತ್ತಿದ್ದಾರಲ್ಲ ಅಂತ ಆ ಬಾಲಕನೂ ಡಿಸಿ ರಾಜಪ್ಪನವರಿಗೂ ಸಲ್ಯುಟ್ ಹೊಡದೇ ಬಿಟ್ಟ ಇದನ್ನು ನೋಡಿ ರಾಜಪ್ಪ ಆ ಬಾಲಕನನ್ನು ಮುದ್ದಾಡಿದ್ದೇ ಮುದ್ದಾಡಿದ್ದು

ಈ ದೃಶ್ಯ ಕಣ್ಣಾರೆ ಕಂಡ ಸಾರ್ವಜನಿಕರು ಕಮಿಷ್ನರ್ ರಾಜಪ್ಪನವರ ಸರಳತೆಯನ್ನು ಕೊಂಡಾಡಿದ್ದೇ ಕೊಂಡಾಡಿದ್ದು

ಐಪಿಎಸ್ ಅಧಿಕಾರಿಯಾಗಿದ್ದರೂ ದರ್ಪ ಇಲ್ಲವಲ್ಲ ಇವರು ಇಷ್ಟೊಂದು ಸರಳ ಜೀವಿನಾ ಅಂತ ನೋಡುಗರು ಕೆಲ ಕಾಲ ಮೂಕ ವಿಸ್ಮಿತರಾದರು

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *