ಬೆಳಗಾವಿ- ರಾಜ್ಯಸರ್ಕಾರ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ 500 ಕೋಟಿ ರೂ ಅನುದಾನ ನೀಡಿದ ಬೆನ್ನಲ್ಲಿಯೇ ಒಕ್ಕಲಿಗರ ಅಭಿವೃದ್ಧಿ ನಿಗಮವೂ ರಚಿಸಲಿ ಎಂದು ಬೆಳಗಾವಿಯಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಒಕ್ಕಲಿಗರ ಅಭಿವೃದ್ಧಿ ನಿಗಮ ಆಗಬೇಕು ಎನ್ನುವ ಒತ್ತಾಯ ಇದೆ,ಅದಕ್ಕೆ ನನ್ನ ಬೆಂಬಲವೂ ಇದೆ,ಎಂದು ಡಿಸಿಎಂ ಹೇಳಿದರು.ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ವಿನಯ್ ಕುಲಕರ್ಣಿ ಹಲವರಿಗೆ ಕರೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಗೊತ್ತಿಲ್ಲ ಅವರು ಯಾರ್ಯಾರಿಗೆ ಕರೆ ಮಾಡ್ತಿದಾರೆ ಗೊತ್ತಿಲ್ಲ ಜೈಲಿನಲ್ಲಿ ಏನ್ ಸೌಲಭ್ಯ ಇರುತ್ತೆ ಅವರಿಗೆ ನ್ಯಾಯಾಂಗದಿಂದ ಏನು ಸೌಲಭ್ಯ ಕೊಟ್ಟಿದ್ದಾರೆ ಗೊತ್ತಿಲ್ಲ,ಸಿಬಿಐ ತನಿಖೆ ನಡೆಯಬೇಕಾದರೆ ನಾವು ಇದನ್ನೆಲ್ಲಾ ಕೇಳಕ್ಕಾಗಲ್ಲ, ಕಾನೂನುಬಾಹಿರವಾಗಿ ನಡೆದುಕೊಳ್ಳಲು ಯಾವುದೇ ಅವಕಾಶ ಇರಲ್ಲ, ಜನರು ಸಮಾಜ ಉತ್ತಮವಾಗಿ ಇರಬೇಕು ಅಂತಾ ಕಾನೂನು ಇದೆ, ಅಧಿಕಾರ ದುರ್ಬಳಕೆ ಆಗಬಾರದು ಸದ್ಭಳಕೆ ಆಗಬೇಕು ಎಂಬುದಕ್ಕೆ ಕಾನೂನು ಇರುತ್ತೆ, ಕಾನೂನು ಉಲ್ಲಂಘನೆ ಎಲ್ಲಿಯೂ ಆಗಲ್ಲ, ಎಲ್ಲಿಯೂ ಆಗಲೂಬಾರದು ಎಂದು ಬೆಳಗಾವಿಯಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದರು.
ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೋಷಕರ ಒತ್ತಾಯ ಇತ್ತು ಹೀಗಾಗಿ ಆನ್‌ಲೈನ್, ಆಫ್‌ಲೈನ್ ಕ್ಲಾಸ್ ಎರಡೂ ಆರಂಭಿಸಿದ್ದೇವೆ, ಸ್ವಇಚ್ಚೆಯಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಆಫ್‌ಲೈನ್ ಕ್ಲಾಸ್ ಶುರು ಮಾಡಿದ್ದೇವೆ. ಸವಾಲಿನ ಮಧ್ಯೆ ವಿದ್ಯಾರ್ಥಿಗಳಿಗಾಗಿ ಉತ್ತಮ ಕಾರ್ಯ ಮಾಡಲಾಗುತ್ತಿದೆ. ಶಿಕ್ಷಣ, ಕೌಶಲ್ಯ ಎಲ್ಲಾ ಕ್ಷೇತ್ರಗಳಿಗೂ ಪ್ರಥಮ ಅವಶ್ಯಕತೆ ಇರುವಂತದ್ದು, ಶಿಕ್ಷಣ ಕ್ಷೇತ್ರ ಸರಿ ಮಾಡಿದ್ರೆ ಎಲ್ಲವೂ ಸರಿಯಾಗುತ್ತೆ, ಶಿಕ್ಷಣ ಕ್ಷೇತ್ರ ಉತ್ತಮಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತೀವಿ, ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ವಿಚಾರ, ಕಾಲೇಜು ವಿದ್ಯಾರ್ಥಿಗಳು ಕಾಲೇಜು ಬರುವ ಮುನ್ನ ತಪಾಸಣೆ ಮಾಡ್ತಿದೇವೆ. ತಪಾಸಣೆ ಮಾಡುವ ವೇಳೆ ಪಾಸಿಟಿವ್ ಬಂದವರಿಗೆ ಕಾಲೇಜು ಬರಲು ಅವಕಾಶವಿಲ್ಲ, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳಿಗೆ ಆದ್ಯತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ದಿನೇದಿನೇ ಹೆಚ್ಚೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ, ಎಬೆಳಗಾವಿ-