ಬೆಳಗಾವಿ- ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಹಿರೇಬಾಗೇವಾಡಿಗೆ ಸ್ಥಳಾಂತರ ಮಾಡಲಾಗುತ್ತಿದೆ,ವಿಶ್ವವಿದ್ಯಾಲಯವನ್ನು ಕ್ರಾಂತಿಯ ನೆಲ ಚನ್ನಮ್ಮನ ಕಿತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ,ಹೋರಾಟ ನಡೆದಿರುವ ಬೆನ್ನಲ್ಲಿಯೇ ಡಿಸಿಎಂ,ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಅಶ್ವತ್ಥನಾರಾಯಣ ಅವರು ಇಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಹಿರೇಬಾಗೇವಾಡಿಯಲ್ಲಿ ಜಾಗೆಯನ್ನು ಗುರುತಿಸಲಾಗಿದೆ.ಇದಕ್ಕೆ ಕಿತ್ತೂರು ಕ್ಷೇತ್ರದ ಜನ ಅಕ್ಷೇಪ ವ್ಯೆಕ್ತಪಡಿಸಿದ್ದಾರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕ್ರಾಂತಿಯ ನೆಲ ಕಿತ್ತೂರಿಗೆ ಸ್ಥಳಾಂತರ ಮಾಡಬೇಕೆಂದು ಕಿತ್ತೂರು ಸಂಸ್ಥಾನಮಠದ ಶ್ರೀಗಳ ಸಾನಿದ್ಯದಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿದೆ.ಪರಿಸ್ಥಿತಿಯನ್ನು ಅವಲೋಕಿಸಿರುವ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥನಾರಾಯಣ ಅವರು,ಇಂದು ಸರ್ಕಾರ ಮಂಜೂರು ಮಾಡಿರುವ ಹಿರೇಬಾಗೇಡಿ ಗ್ರಾಮದ ಜಾಗೆಗೆ ಭೇಟಿ ನೀಡಿ ಪರಶೀಲನೆ ಮಾಡಲಿದ್ದಾರೆ.
ಡಿಸಿಎಂ ಅಶ್ವತ್ಥನಾರಾಯಣ ಅವರು ಬೆಳಗಾವಿಗೆ ಭೇಟಿ ನೀಡುತ್ತಿರುವ ಸುದ್ಧಿ ಕಿತ್ತೂರಿನಲ್ಲಿ ಹರಡುತ್ತಿದ್ದಂತೆಯೇ ಕಿತ್ತೂರು ಕ್ಷೇತ್ರದ ನಾಯಕರು ಶ್ರೀಗಳ ಸಾನಿದ್ಯದಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.
ಡಿಸಿಎಂ ಅಶ್ವತ್ಥ ನಾರಾಯಣ ಅವರು ಬೆಳಿಗ್ಗೆ 9-30 ಕ್ಕೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಲಿದ್ದು ರಸ್ತೆ ಮೂಲಕ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗೆಯನ್ನು ಪರಶೀಲನೆ ಮಾಡಲಿದ್ದಾರೆ ನಂತರ ಅವರು ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮತ್ತೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವಾಪಸ್ ಬಂದು ಬೆಂಗಳೂರಿಗೆ ತೆರಳಲಿದ್ದಾರೆ.
ಒಟ್ಟಾರೆ ಇಂದು ಉನ್ನತ ಶಿಕ್ಷಣ ಸಚಿವರ ಎದುರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಥಳಾಂತರದ ವಿವಾದ ಚರ್ಚೆಗೆ ಬರಲಿದೆ.