ಮನೆಯಲ್ಲಿ ಇರ್ತಿರಾ…ಅಥವಾ ಜೈಲಿಲ್ಲಿ ಇರ್ತೀರಾ ಡಿಸೈಡ್ ಮಾಡಿ- ಸೀಮಾ ಲಾಟ್ಕರ್
ಬೆಳಗಾವಿ- ಬೆಳಗಾವಿಯಲ್ಲಿ 10 ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಲಾಕಡೌನ ಮತ್ತಷ್ಟು ಬೀಗಿ ಗೊಳಿಸಲಾಗಿದೆ,ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವದನ್ನು ನಿಲ್ಲಿಸಲು ಬೆಳಗಾವಿ ಪೋಲೀಸರು ಕಟ್ಟು ನಿಟ್ಟಿನ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಡಿಸಿಪಿ ಸೀಮಾ ಲಾಟ್ಕರ್ ಮನೆಯಲ್ಲಿ ಇರ್ತಿರಾ ಜೈಲಲ್ಲಿ ಇರ್ತಿರಾ ನೀವೇ ನಿರ್ಧರಿಸಿ.ಎಂದು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿ ಡಿಸಿಪಿ ಸೀಮಾ ಲಾಟಕರ ಖಡಕ್ಕಾಗಿ ಸಾರ್ವಜನಿಕರಿಗೆ ವಾರ್ನಿಂಗ್ ಮಾಡಿದ್ದಾರೆ.
ಲಾಕಡೌನ್ ಇದ್ದರೂ ಉಲ್ಲಂಘಿಸುತ್ತಿರುವ ಜನರು ತರಕಾರಿ ನೆಪದಲ್ಲಿ, ಔಷಧಿ ಖರೀದಿ ನೆಪವೊಡ್ಡಿ ಜನರ ಓಡಾಟ ನಿರಂತೆವಾಗಿ ನಡೆದಿದೆ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗಿದೆ.
ಯಾರು ಕೂಡಾ ಅನವಶ್ಯಕವಾಗಿ ಹೊರಗಡೆ ಬರದಂತೆ ಎಚ್ಚರಿಕೆ ನೀಡಿರುವ ಅವರು ಬೆಳಗಾವಿ ನಗರದ ಕ್ಯಾಂಪ್, ಹಿರೇಬಾಗೇವಾಡಿ ಹಾಗೂ ಬೆಳಗುಂದಿ ಪ್ರದೇಶ ವನ್ನ ಸಂಪೂರ್ಣ ಲಾಕ್ ಮಾಡಲಾಗಿದೆ.
ಜನರು ಕೊರೊನಾ ಬಗ್ಗೆ ಇನ್ನೂ ಗಂಭೀರವಾಗಿ ವರ್ತಿಸಬೇಕಿದೆ ಸುಮ್ಮನೇ ಸುಮ್ಮನೇ ಹೊರಗೆ ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಕೇಸ್ ಹಾಕಿ ಜೈಲಿಗೆ ಕಳಿಸುತ್ತೇವೆ ಎಂದು ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ