Breaking News

ಶಾಸಕರು ಹತ್ತಿರ…ಹತ್ತಿರ….ಕಾಯಿಲೆ ದೂರ…ದೂರ….!!!

” ಲಾಕ್ ಡೌನ್ ” ನಿಂದ ಆರೋಗ್ಯ ಸಂಬಂಧಿ ಪರ್ಯಾಯವಾಗಿ “ಪ್ಹೂ- ಕ್ಲಿನಿಕ್ ಭರ್ಜರಿ ಜನಸ್ಪಂದನೆ

ಬೆಳಗಾವಿ-
ಕಳೆದ ಹತ್ತಾರು ದಿನಗಳಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು, ಬಹಳಷ್ಟು ಖಾಸಗಿ ಆಸ್ಪತ್ರೆಗಳು ಕಳೆದ 15 ದಿನಗಳಿಂದ OPD ಸಂಪೂರ್ಣ ಬಂದಾಗಿರುವುದರಿಂದ ತುರ್ತು ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸುತ್ತಿರುವರಿಗೆ
ಪರ್ಯಾಯವಾಗಿ ಪ್ಹೂ- ಕ್ಲಿನಿಕ್ ನಿಜಕ್ಕೂ ತುಂಬಾ ಸಹಾಯವಾಗುತ್ತಿದೆ.
ಸಾಮಾನ್ಯ ಸಣ್ಣ ಸಣ್ಣ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ ಕೈ ನೋವು, ಬಿ. ಪಿ ಆದವರಿಗೆ
ಸಣ್ಣ ಪುಟ್ಟ ಆರೋಗ್ಯ ಸಂಬಂಧಿ ಔಷಧೀಯ, ಗುಳಿಗೆಗಳನ್ನು ನೀಡಿ, ಜನರ ತುರ್ತು ಚಿಕಿತ್ಸಾ ಕೇಂದ್ರಗಳ ಮಾದರಿಯಲ್ಲಿ “ಪ್ಹೊ ಕ್ಲಿನಿಕ್ ” ಕಾರ್ಯನಿರ್ವಹಿಸಲು
ಪ್ರಾರಂಭವಾಗಿವೆ.
ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ 26 ವಾರ್ಡ್ ಗಳಲ್ಲಿ ಬರುವ ಸರಕಾರಿ ಶಾಲೆಗಳು ಹಾಗೂ ಮಂಗಲ ಕಾರ್ಯಾಲಯಗಳನ್ನು ಬಳಸಿಕೊಳ್ಳಲಾಗಿದೆ.
ಈ ಪ್ಹೂ- ಕ್ಲಿನಿಕ್ ವಿಶೇಷವಾಗಿ ಕೊಳಗೇರಿ ಪ್ರದೇಶಗಳಲ್ಲಿ ಹಾಗೂ ಜನ ದಟ್ಟನೆ ಪ್ರದೇಶಗಳಾದ ವಡಗಾವಿ, ಖಾಸಭಾಗ, ದೇವಾಂಗ ನಗರ, ಲಕ್ಷೀನಗರ, ಅನಗೋಳ , ಹಳೇ ಬೆಳಗಾವಿ, ಭಾರತನಗರ, ನಾಝರ್ ಕ್ಯಾಂಪ್, ಮುಂತಾದ ಭಾಗಗಳಲ್ಲಿ ವಾಸಿಸುವ ಜನರಿಗೆ ಉಚಿತವಾಗಿ ದೊರಕುವ ಔಷಧೀ, ಗುಳೆಗಳಿಂದ ಉಪಯುಕ್ತವಾಗುತ್ತಿದ್ದು, ಪ್ರತಿ
ಕ್ಲಿನಿಕ್ ನಲ್ಲಿ 80 ರಿಂದ 120 ಜನ ರೋಗಿಗಳು ತಪಾಸಣೆ ಮಾಡಿಕೊಂಡಿದ್ದಾರೆ.
ಬಹು ಮುಖ್ಯವಾಗಿ ಈ
ಕ್ಲಿನಿಕ್ ನಲ್ಲಿ ಕಾರ್ಯ ನಿರ್ವಹಿಸುವ ಡಾಕ್ಟರುಗಳಿಗೆ ಉಚಿತವಾಗಿ PPE ಕಿಟ್ಸ್ ಗಳನ್ನು ಮಾನ್ಯ ಶಾಸಕರಾದ ಶ್ರೀ ಅಭಯ ಪಾಟೀಲ ರವರು ಒದಗಿಸಿರುವುದರಿಂದ ಡಾಕ್ಟರುಗಳು ಖುಷಿಯಿಂದ ಕೆಲಸ ಮಾಡುತ್ತಿದ್ದು,
ಖಾಸಗಿ ಡಾಕ್ಟರ್ ಗಳಿಗೆ ಈ PPE ಕಿಟ್ಸ್ ಒದಗಿಸಿ ಕೊಟ್ಟಿರುವುದು ರಾಜ್ಯದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ.
ಈ ಪ್ರಯೋಗದಿಂದ ಬೆಳಗಾವಿ ಜಿಲ್ಲಾಡಳಿತ ಒತ್ತಡದಿಂದ ರಿಲೀಫ್ ಸಿಕ್ಕಿದೆ.
ನಿಜಕ್ಕೂ ಶಾಸಕರ ವಿನೂತನ ಪರಿಕಲ್ಪನೆ ನೇರವಾಗಿ ಸಾರ್ವಜನಿಕರ ಮನ ಗೆದ್ದಿದೆ ಎನ್ನಬಹುದು.
ಸದ್ಯದ ಆರ್ಥಿಕ ಸ್ಥಿತಿ ಗತಿ, ಉದ್ಯೋಗ ಸರಿ ಇಲ್ಲದ ಕಾರಣ ಉಚಿತವಾಗಿ ನೀಡುತ್ತಿರುವ ಔಷಧೀಯಗಳು ಮದ್ಯಮ ವರ್ಗ, ಬಡವರಿಗೆ, ಸಾಮಾನ್ಯ ಕೂಲಿ ಕಾರ್ಮಿಕರಿಗೆ ತುಂಬಾ ಸಹಾಯವಾಗುತ್ತಿದ್ದು,
ನೂರಾರು ಸಂಖ್ಯೆಯಲ್ಲಿ ಈ ಕ್ಲಿನಿಕ್ ಗೆ ಬೇಟಿ ನೀಡುತ್ತಿರುವ ದೃಶ್ಯ ಕಂಡು ಬರುತ್ತಿವೆ.
ಒಟ್ಟಿನಲ್ಲಿ ಹೇಳುವುದಾದರೆ ಶಾಸಕರಾದ ಶ್ರೀ ಅಭಯ ಪಾಟೀಲ ರವರ ಈ ಪ್ರಯೋಗ ಮೊದಲನೆ ದಿನ ಭರ್ಜರಿ ಜನಸ್ಪಂದನ ಪಡೆದು ಕೊಂಡಿದೆ ಎಂದರೆ ತಪ್ಪಾಗಲಾರದು….!

Check Also

ಶಿಕ್ಷಣ ಕ್ಷೇತ್ರಕ್ಕೆ 1500 ಕೋಟಿ ದೇಣಿಗೆ ನೀಡಿದ ಅಜೀಂ ಪ್ರೇಮಜೀ….

“ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ” ಲೋಗೋ ಅನಾವರಣ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ: ಸಚಿವ ಮಧು ಬಂಗಾರಪ್ಪ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.