ಬೆಳಗಾವಿ-ಮಟಕಾ,ಗಾಂಜಾ,ಜೂಜಾಟದಿಂದ ಬೆಳಗಾವಿ ನಗರವನ್ನು ಮುಕ್ತ ಮಾಡುವತ್ತ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸದೃಡ ಸಮಾಜ ನಿರ್ಮಾಣ ಮಾಡುತ್ತಿರುವ ಬೆಳಗಾವಿ ನಗರ ಪೋಲೀಸರು ಈಗ ಸದ್ದಲ್ಲದೇ ಮತ್ತೊಂದು ಜನಸ್ನೇಹಿ ಕಾರ್ಯವನ್ನು ಮಾಡುತ್ತಿದ್ದಾರೆ.
ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕಿದ್ರೆ ಮೊದಲು ಪಾಸ್ ಪೋರ್ಟ್ ನಲ್ಲಿ ಡಾಕ್ಯುಮೆಂಟ್ ವೇರಿಪಿಕೇಶನ್ ಆದ ಬಳಿಕ,ದಾಖಲೆಗಳು ಪೋಲೀಸ್ ಇನ್ ಕ್ವಾರಿಗೆ ಬರುತ್ತವೆ. ಪಾಸ್ ಪೋರ್ಟ್ ಪೋಲೀಸ್ ಇನ್ ಕ್ವಾರಿಗೆ ಬಂದರೆ ಅರ್ಜಿ ಹಾಕಿದವರು ತಿಂಗಳು ಗಟ್ಟಲೆ ಪೋಲೀಸ್ ಠಾಣೆಗೆ ಅಲೆದಾಡುವ ಕಾಲ ಇತ್ತು,ಆದ್ರೆ ಬೆಳಗಾವಿಗೆ ಡಿಸಿಪಿ ವಿಕ್ರಂ ಅಮಟೆ ಅವರು ಬಂದ ಬಳಿಕ ಈ ವಿಚಾರದಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ ಪೋಲೀಸ್ ಇನ್ ಕ್ವಾರಿಯನ್ನು ಮತ್ತಷ್ಟು ಸುಲಭಗೊಳಿಸಿದ್ದಾರೆ.
ಸಕಾಲ ಯೋಜನೆಯ ಪ್ರಕಾರ ಪೋಲೀಸ್ ಇನ್ ಕ್ವಾರಿ 21 ದಿನದ ಒಳಗಾಗಿ ಮಾಡಬೇಕೆಂಬ ನಿಯಮ ಇದ್ದರೂ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಕೇವಲ ಮೂರೇ ಮೂರು ದಿನದಲ್ಲಿ ಪೋಲೀಸ್ ಇನ್ ಕ್ವಾರಿ ಪೂರ್ಣಗೊಳಿಸಿ,ದಾಖಲೆಗಳನ್ನು ಪಾಸ್ ಪೋರ್ಟ್ ಕಚೇರಿಗೆ ಕಳುಹಿಸುವ ವ್ಯೆವಸ್ಥೆಯನ್ನು ಮಾಡುವ ಮೂಲಕ ರಾಜ್ಯದಲ್ಲಿಯೇ ಬೆಳಗಾವಿ ಪೋಲೀಸರು ದಾಖಲೆ ಮಾಡಿದ್ದಾರೆ.
ಕೇವಲ ಮೂರು ದಿನದಲ್ಲಿ ಪಾಸ್ ಪೋರ್ಟ್ ಪೋಲೀಸ್ ಇನ್ ಕ್ವಾರಿ ರಾಜ್ಯದ ಯಾವ ನಗರ ಅಥವಾ ಜಿಲ್ಲೆಯಲ್ಲಿ ಆಗೋದಿಲ್ಲ,ಆದ್ರೆ ಬೆಳಗಾವಿಯಲ್ಲಿ ಮಾತ್ರ ಮೂರು ದಿನದಲ್ಲಿ ಇನ್ ಕ್ವಾರಿ ಮುಗಿಸಿ ದಾಖಲೆಗಳು ಕ್ರಮಭದ್ಧವಾಗಿದ್ದಲ್ಲಿ ಅವುಗಳನ್ನು ಅಂಗೀಕರಿಸಲಾಗುತ್ತದೆ.ದಾಖಲೆಗಳ ಪರಶೀಲನೆ ಸಮಯದಲ್ಲಿ ಯಾವುದೇ ರೀತಿಯ ನ್ಯುನ್ಯತೆಗಳು ,ಅಥವಾ ಅರ್ಜಿದಾರರ ಮೇಲೆ ಕ್ರಿಮಿನಲ್ ಕೇಸ್ ಇದ್ದಲ್ಲಿ ಅಂತಹ ಅರ್ಜಿಗಳನ್ಮು ತಿರಸ್ಕರಿಸಿ ಮೂರೇ ದಿನದಲ್ಲಿ ದಾಖಲೆಗಳನ್ನು ವಿಲೇವಾರಿ ಮಾಡುವ ವ್ಯೆವಸ್ಥೆ ಇರೋದು ಬೆಳಗಾವಿಯಲ್ಲಿ ಮಾತ್ರ
ಬೆಳಗಾವಿ ನಗರ ಪೋಲೀಸರ ಈ ಹೊಸ ವ್ಯೆವಸ್ಥೆ ಬೆಳಗಾವಿ ನಗರದಲ್ಲಿ ಜನರ ಮೆಚ್ವುಗೆಗೆ ಪಾತ್ರವಾಗಿದ್ದು,ಡಿಸಿಪಿ ವಿಕ್ರಂ ಅಮಟೆ ಅವರು ಪ್ರತಿ ದಿನ ತಪ್ಪದೇ ಪಾಸ್ ಪೋರ್ಟ್ ದಾಖಲೆಗಳ ಪರಶೀಲನೆಯ ಪ್ರಕ್ರಿಯೆ ಮೇಲೆ ನಿಗಾ ವಹಿಸಿ ಅಂತಿಮ ಮೊಹರು ಹಾಕುತ್ತಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಬೆಳಗಾವಿ ನಗರದಲ್ಲಿ ಈ ವ್ಯೆವಸ್ಥೆ ಜಾರಿಗೆ ಬಂದಿದ್ದು, ಫಟಾಫಟ್ ಅಂತಾ ಮೂರೇ ದಿನದಲ್ಲಿ ಪಾಸ್ ಪೋರ್ಟ್ ಪೋಲೀಸ್ ಇನ್ ಕ್ವಾರಿ ಮುಗಿಯುತ್ತಿದೆ.ಇದು ಪಾಸ್ ಅರ್ಜಿದಾರರಿಗೆ ಕಿರಿಕಿರಿ ತಪ್ಪಿದಂತಾಗಿದೆ…