Breaking News

ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಯೋಧರ ಬಲಿದಾನ ಸ್ಮರಿಸಿದ ಮಹಾಂತೇಶ ನಗರದ ಹುಡುಗರು

ಬೆಳಗಾವಿ-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರಮರಣ ಹೊಂದಿದ ವೀರಯೋಧರ ಹೆಸರಿನಲ್ಲಿ ಸಸಿನೆಟ್ಟು ಮಹಾಂತೇಶ ನಗರದ ಹುಡುಗರು ವಿನೂತನ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದರು

ಮಹಾಂತೇಶ ನಗರದ ಪ್ರಗತಿ ಗಾರ್ಡನ್ ದಲ್ಲಿ ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಗಾರ್ಡನ್ ದಲ್ಲಿಯೇ ಮೌನ ಆಚರಿಸಿ ಶೃದ್ಧಾಂಜಲಿ ಅರ್ಪಿಸಿದರು

ವ್ಯುಹ ಪೌಂಡೇಶನ್ ಕರವೇ ಹುಡುಗರು ಕೂಡಿಕೊಂಡು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದರು ಮಹಾಂತೇಶ್ ನಗರದ ನಿವಾಸಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವೀರ ಯೋಧರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ ಮಾತನಾಡಿದ ದೀಪಕ ಗುಡಗನಟ್ಟಿ ವೀರಯೋಧರ ತ್ಯಾಗ ಬಲಿದಾನವನ್ನು ಸೂರ್ಯ ಚಂದ್ರ ಇರೋವರೆಗೂ ಮರೆಯಲು ಸಾಧ್ಯವಿಲ್ಲ ಅವರ ದೇಶಸೇವೆ ಸ್ಪೂರ್ತಿದಾಯಕವಾಗಿದ್ದು ಅವರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮೀತವಾಗಬಾರದು ನಿತ್ಯ ನಿರಂತರವಾಗಿರಬೇಕು ಎನ್ನುವ ದೃಷ್ಠಿಯಿಂದ ಯೋಧರ ಹೆಸರಿನಲ್ಲಿ ಸಸಿ ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡುವ ಸಂಕಲ್ಪ ಮಾಡಲಾಗಿದೆ ವೀರ ಯೋಧರ ಹೆಸರಿನಲ್ಲಿ ನೆಟ್ಟಿರುವ ಈ ಸಸಿಗಳು ಹೆಮ್ಮರವಾಗಿ ನೆರಳು ನೀಡುವಂತಾಗಬೇಕು ಎನ್ನುವದು ನಮ್ಮೆಲ್ಲ ಹುಡುಗರ ಮಹಾದಾಸೆ ಆಗಿದೆ ಎಂದರು

ಮಹಾಂತೇಶ ನಗರದ ಪ್ರಗತಿ ಉದ್ಯಾನವನ ಅಭಿವೃದ್ಧಿಯಿಂದ ವಂಚಿತವಾಗಿದ್ದು ಮಹಾನಗರ ಪಾಲಿಕೆ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಿ ಇದಕ್ಕೆ ವೀರಯೋಧರ ಹೆಸರಿಡಬೇಕು ಎಂದು ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ ಒತ್ತಾಯಿಸಿದರು

ಯುವ ಫೌಂಡೇಶನ್ ಬಳಗ:ಆದರ್ಶ್ ಪಾಟೀಲ್ ಮಣಿಕಂಠ ಕುಲಕರ್ಣಿ:ದೀಪಕ್ ಜಾದವ್:ಅರ್ಪಿತಾ ಪಾಟೀಲ್:ತೇಜಸ್ವಿನಿ ಹಿರೇಮಠ್,, :ರಮೇಶ್ ಯರಗಣ್ಣವರ್ ಸುಮಿತ್ ಅಗಸಗಿ ಸತೀಶ್ ಗಾಡಿವಡ್ಡರ ಚೇತನ್ ಮಾಸ್ತಿಹೊಳಿ ಶಿವಾನಂದ ತಂಬಾಕೆ ವಿನಾಯಕ್ ಭೋವಿ ಮೊದಲಾದವರು ಉಪಸ್ಥಿತರಿದ್ದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *