ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಚೆಲ್ಲಾಟ ಮುಂದುವರೆದಿದ್ದು,ಈ ಬಾರಿಯೂ ಕೊರೋನಾ ಕರಿನೆರಳು ಕಿತ್ತೂರು ಉತ್ಸವದ ಮೇಲೆ ಬಿದ್ದಿದೆ.
ಕಳೆದ ಬಾರಿಯೂ ಕಿತ್ತೂರು ಉತ್ಸವ ಮಹಾಪೂರದಲ್ಲಿ ತೇಲಿ ಹೋಗಿತ್ತು,.ಈ ಬಾರಿಯೂ ಮಹಾಮಾರಿ ಕೊರೋನಾ ಕಿತ್ತೂರು ಉತ್ಸವದ ಸಂಬ್ರಮಕ್ಕೆ ಬ್ರೇಕ್ ಹಾಕಿದೆ.
ಈ ವರ್ಷದ ಕಿತ್ತೂರು ಉತ್ಸವವನ್ನು ಸಿಂಪಲ್ ಅಂದ್ರೆ ಸಾಂಕೇತಿಕವಾಗಿ, ಆಚರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ,ಕಿತ್ತೂರು ಶಾಸಕ ಮಹಾಂತೇಶ್ ದೊಡಗೌಡ್ರು ಅವರು ಕಿತ್ತೂರು ಉತ್ಸವ ಆಚರಣೆ ಮಾಡುವ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ,ಸರ್ಕಾರದ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ದಸರಾ ಉತ್ಸವವನ್ನೇ ಅತ್ಯಂತ ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದ್ದು ಅದೇ ರೀತಿ ಕಿತ್ತೂರು ಉತ್ಸವವನ್ನು ಸರಳವಾಗಿ ಆಚರಣೆ ಮಾಡುವ ನಿರ್ಧಾರ ಕೈಗೊಳ್ಳುವದು ಬಹುತೇಕ ಖಚಿತವಾಗಿದೆ.
ನಾಮಕರಣ ಮಾಡಿ,ಭೂಮಿ ಪೂಜೆ,ನೆರವೇರಿಸಿ
ಬೆಳಗಾವಿ-ಉತ್ತರ ಕರ್ನಾಟದ ಸ್ವಾಭಿಮಾನದ ಉತ್ಸವವಾಗಿರುವ ಕಿತ್ತೂರು ಉತ್ಸವದ ಐತಿಹಾಸಿಕ ದಿನದಂದು ಸರ್ಕಾರ, ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮಾಜಿ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನೆರವೇರಿಸಬೇಕು ಎಂದು,ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು,ಸರ್ಕಾರ ಕಿತ್ತೂರು ಉತ್ಸವಕ್ಕೆ ಖರ್ಚು ಮಾಡುವ ಅನುದಾನವನ್ನು ಬೈಲಹೊಂಗಲ ದಲ್ಲಿ ಇರುವ ವೀರ ರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಅಭಿವೃದ್ಧಿಗೆ ಖರ್ಚು ಮಾಡಬೇಕು,ಎಂದು ಕರವೇ ಮನವಿ ಮಾಡಿಕೊಂಡಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಾ ವಿಮಾನ ನಿಲ್ಧಾಣ ಎಂದು ನಾಮಕರಣ ಮಾಡಲು ನಿರ್ಧರಿಸಿದೆ,ಆದರೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವ ವಿಷಯದಲ್ಲಿ ವಿಳಂಬ ಮಾಡುತ್ತಿದ್ದು,ಕಿತ್ತೂರು ಉತ್ಸವಕ್ಕೂ ಮೊದಲು ಎಲ್ಲ ಪ್ರಕ್ರಿಯೆ ಮುಗಿಸಿ ಉತ್ಸವದ ದಿನವೇ ನಾಮಕರಣ ಮಾಡಬೇಕು,ಎಂದು ದೀಪಕ ಗುಡಗನಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಕರವೇ ಒತ್ತಾಯಿಸಿದೆ.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶೀಘ್ರದಲ್ಲೇ ಕರವೇ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಅರ್ಪಿಸಲಿದೆ ಎಂದು ದೀಪಕ ತಿಳಿಸಿದ್ದಾರೆ.