Breaking News

ತಾಕತ್ತಿದ್ದರೆ, ಎಂಈಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ- ಕರವೇ ಸವಾಲು…

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಡಿನ ಪರವಾಗಿರುವ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ, ಎಲ್ಲ ಮರಾಠಿ ಭಾಷಿಕ ಅಭ್ಯರ್ಥಿಗಳು ಎಂಈಎಸ್ ಅಭ್ಯರ್ಥಿಗಳು ಎಂದು ಹೇಳುವ ಮೂಲಕ ಎಂಈಎಸ್ ನಾಯಕರು ಮರಾಠಿ ಭಾಷಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ತಾಕತ್ತಿದ್ದರೆ ಎಂಈಎಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸವಾಲು ಹಾಕಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಬಹಳಷ್ಟು ಮರಾಠಿ ಭಾಷಿಕ ನಾಯಕರು ಚುನಾವಣೆಗೆ ಸ್ಪರ್ದೆ ಮಾಡಿದ್ದಾರೆ ಅವರೆಲ್ಲರೂ ನಾಡಿನ ಪರವಾಗಿದ್ದಾರೆ.ಆದ್ರೆ ಎಂಈಎಸ್ ನಾಯಕರು ಎಲ್ಲ ಮರಾಠಿ ಭಾಷಿಕ ಅಭ್ಯರ್ಥಿಗಳು ಎಂಈಎಸ್ ಅಭ್ಯರ್ಥಿಗಳು ಎಂದು ಪ್ರಚಾರ ಮಾಡುತ್ತಿದ್ದು, ಎಂಈಎಸ್ ಅಭ್ಯರ್ಥಿ ಯಾರು ಅನ್ನೋದನ್ನು ಅಭ್ಯರ್ಥಿಗಳಿಂದಲೇ ಘೋಷಣೆ ಮಾಡಬೇಕು ಆವಾಗ ಎಂಈಎಸ್ ಬಂಡವಾಳ ಬಯಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಲೇವಡಿ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಿಗದೇ ಎಂಈಎಸ್ ಕಂಗಾಲಾಗಿದೆ.ಕಣದಲ್ಲಿರುವ ಎಲ್ಲ ಮರಾಠಿ ಭಾಷಿಕರು ಎಂಈಎಸ್ ಅಭ್ಯರ್ಥಿಗಳು ಎಂದು ಸುಳ್ಳು ಹೇಳಿಕೆ ನೀಡಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳುವ ಷಡ್ಯಂತ್ರ ನಡೆಸಿದ್ದು ಎಂಈಎಸ್ ನಾಯಕರಿಗೆ ತಾಕತ್ತಿದ್ದರೆ ತಮ್ಮ ಅಭ್ಯರ್ಥಿಗಳನ್ನು ಈಗಲೇ ಘೋಷಣೆ ಮಾಡಲಿ,ಎಂದು ಕರವೇ ಬಹಿರಂಗ ಸವಾಲು ಹಾಕಿದೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಹಮತದಿಂದ ಕೆಲಸ ಮಾಡಬೇಕು ಎರಡೂ ರಾಜಕೀಯ ಪಕ್ಷಗಳು ನಾಡಿನ ಹಿತಕ್ಕಾಗಿ ಒಮ್ಮತದ ನಿರ್ಣಯಗಳನ್ನು ಕೈಗೊಂಡು ನಾಡವಿರೋಧಿ ಎಂಈಎಸ್ ಗೆ ಪಾಲಿಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಕರವೇ ಎಲ್ಲ ರಾಜಕೀಯ ಪಕ್ಷಗಳ ನಾಯಕರಲ್ಲಿ ಮನವಿ ಮಾಡಿದೆ.

ಫಲಿತಾಂಶದ ನಂತರ ಎಂಈಎಸ್ ನಾಯಕರು ಸ್ವತಂತ್ರ ಮರಾಠಿ ಭಾಷಿಕ ಅಭ್ಯರ್ಥಿಗಳು ಜಯಶಾಲಿ ಆದ ಬಳಿಕ ಅವರು ನಮ್ಮವರೇ ಎಂದು ಹೇಳಿ,ಅವರ ಮೇಲೆ ಒತ್ತಡ ಹಾಕಿ ,ವಿಜೇತ ಅಭ್ಯರ್ಥಿಗಳಿಗೆ ಧಮಕಿ ಹಾಕಿ ,ಹೆದರಿಸಿ ಬೆದರಿಸಿ ಗೆದ್ದೆತ್ತಿನ ಬಾಲ ಹಿಡಿಯುತ್ತ ಬಂದಿರುವ ಎಂಈಎಸ್ ನಾಯಕರ ಆಟ ಈ ಬಾರಿಯ ಚುನಾವಣೆಯಲ್ಲಿ ನಡೆಯೋದಿಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *