Breaking News
Home / Breaking News / ಹೆಬ್ಬಾಳಕರ ಈಗಲೇ ಮಹಾರಾಷ್ಟ್ರಕ್ಕೆ ಹೋಗಲಿ- ದೀಪಕ..

ಹೆಬ್ಬಾಳಕರ ಈಗಲೇ ಮಹಾರಾಷ್ಟ್ರಕ್ಕೆ ಹೋಗಲಿ- ದೀಪಕ..

ಬೆಳಗಾವಿ- ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವ ತೀರ್ಮಾಣ ಸುಪ್ರೀಂ ಕೋರ್ಟಿನಲ್ಲಿ ಹೊರಬಿದ್ದರೆ ಎಲ್ಲರಿಗಿಂತಲೂ ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿಯುತ್ತೇನೆ ಎಂದು ಹೇಳಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮಹಾರಾಷ್ಟ್ರದ ಮೇಲೆ ಅಷ್ಡೊಂದು ಪ್ರೀತಿ ಇದ್ದರೆ ಹೆಬ್ಬಾಳಕರ ಈಗಲೇ ಬೆಳಗಾವಿ ಬಿಟ್ಟು ತೊಲಗಲಿ ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ ಕನ್ನಡದ ಸವಾಲ್ ಹಾಕಿದ್ದಾರೆ

ಮಾದ್ಯಮಗಳ ಜೊತೆ ಮಾತನಾಡಿದ ದೀಪಕ ಗುಡಗನಟ್ಟಿ ಮನಸ್ಸು ಮಹಾರಾಷ್ಟ್ರದಲ್ಲಿಟ್ಟು ದೇಹ ನಮ್ಮ ನೆಲದಲ್ಲಿರುವದು ಬೇಡ ನಮ್ಮ ಕನ್ನಡ ತಾಯಿಯ ನೆಲ ದ್ರೋಹಿಗಳ ಭಾರವನ್ನು ಸಹಿಸುವದಿಲ್ಲ ಅದಕ್ಕಾಗಿ ಹೆಬ್ಬಾಳಕರ ಕೂಡಲೇ ಗಂಟು ಮೂಟೆ ಕಟ್ಡಿಕೊಂಡು ಮಹಾರಾಷ್ಟ್ರಕ್ಕೆ ಹೆಬ್ಬಾಳಕರ ಹೋಗಲಿ ಎಂದು ದೀಪಕ ಗುಡಗನಟ್ಟಿ ಒತ್ತಾಯ ಮಾಡಿದ್ದಾರೆ
ಬೆಳಗಾವಿ ನಮ್ಮ ನೆಲ ಈನೆಲವನ್ನು ನಮ್ಮಿಂದ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟಿನಲ್ಲಿ ನ್ಯಾಯ ನಮ್ಮ ಪರವಾಗಿ ಬರಲಿ ಎಂದು ಕನ್ನಡ ತಾಯಿಯ ಮಕ್ಕಳು ದೇವರಲ್ಲಿ ಹರಕೆ ಹೊತ್ತಿರುವಾಗ ಲಕ್ಷ್ಮೀ ಹೆಬ್ಬಾಳಕರ ತೀರ್ಪು ಮಹಾರಾಷ್ಟ್ರದ ಪರವಾಗಿ ಬಂದಲ್ಲಿ ಮೊಟ್ಟ ಮೊದಲು ನಾನೇ ಮಹಾರಾಷ್ಟ್ರಕ್ಕೆ ಜೈ ಅಂತೀನಿ ಎಂದು ಹೇಳಿಕೆ ನೀಡಿರುವ ಹೆಬ್ಬಾಳಕರ ಅವರಿಗೆ ಕನ್ನಡದ ನೆಲದಲ್ಲಿ ರಾಜಕಾರಣ ಮಾಡುವ ಹಕ್ಕಿಲ್ಲ, ಅವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸುತ್ತಾರೆ ಎಂದು ದೀಪಕ ಎಚ್ಚರಿಕೆ ನೀಡಿದ್ದಾರೆ
ಕೆಲವರು ಮರಾಠಿ ಭಾಷಿಕರನ್ನು ಓಲೈಸಲು ಕನ್ನಡ ನೆಲಕ್ಕೆ ಅವಮಾನಿಸಿದರೆ ಅದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ದೀಪಕ ಎಚ್ಚರಿಸಿದ್ದಾರೆ

About BGAdmin

Check Also

ಬರ ಪರಿಹಾರ ಕಾಮಗಾರಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದೇಶಪಾಂಡೆ

ಬೆಳಗಾವಿ ಬರಗಾಲ‌ ಬಿದಿದ್ದಿದೆ. ಅಧಿಕಾರಿಗಳು ಧನ ಕಾಯ್ತಿರೋ ಅಥವಾ ಕೆಲಸ ಮಾಡುತ್ತಿರೋ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ತರಾಟೆಗೆ …

Leave a Reply

Your email address will not be published. Required fields are marked *