ಬೆಳಗಾವಿ
ಸಾಹೇಬ್ರ… ನಮ್ಗ ಹೊಲದಾಗ ಬೆಳೆದ ಬೆಳೆ ಕೈ ಕೊಟ್ಟೇತ್ತಿ… ಸರಕಾರದಿಂದ ಬರಬೇಕಾಗಿದ್ದೂ ಪರಿಹಾರ ಬಂದಿಲ್ಲ. ದಯಮಾಡಿ ನಮ್ಗ ಪರಿಹಾರ ಕೊಡ್ಸರಿ ಎಂದು ನೊಂದ ರೈತನೊಬ್ಬ ಬೈಲಹೊಂಗಲ ಸಮೀಪದ ಇಂಚಲ್ ಕ್ರಾಸ್ ಬಳಿ ಸಚಿವ ಆರ್.ವಿ.ದೇಶಪಾಂಡೆ ಅವರ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆ ನಡೆದಿದೆ
ಮಂಗಳವಾರ ಸಚಿವ ಸಂಪುಟದ ಉಪಸಮಿತಿಯ ಬರ ಪರಿಹಾರ ಅಧ್ಯಯನ ನಡೆಸುತ್ತಿದ್ದ ವೇಳೆ ಜೋಳ ಬೆಳೆದ ರೈತನೊರ್ವ ಸಚಿವ ದೇಶಪಾಂಡೆ ಅವರ ಕಾಲಿಗೆ ಬಿದ್ದು ಪರಿಹಾರ ಕೊಡಿಸಿ ಸಾಹೇಬ್ರ ಜೀವನಾ ನಡೆಸೋದು ಕಷ್ಟ ಆಗಾತೈತ್ತಿ. ಹಿಂಗಾರು, ಮುಂಗಾರು ಎರಡೂ ಕೈ ಕೊಟ್ವು… ಕೈ ಬಂದ ಬೆಳೆಗಳೂ ಬಂದಿಲ್ಲ ಎಂದು ಬೇಡಿಕೊಂಡನು.
ಬರಗಾಲದಿಂದ ತತ್ತರಿಸಿದ್ದೇವೆ ಈ ಭಾಗದಲ್ಲಿ ನೀರಾವರಿ ಮಾಡಿ ಶಾಶ್ವತ ಪರಿಹಾರ ದೊರಕಿಸಿ ಕೊಡಿ ಎಂದು ರೈತ ಸಚಿವರಲ್ಲಿ ಮನವಿ ಮಾಡಿಕೊಂಡ
ರೈತನನ್ನು ಸಮಾಧಾನ ಪಡಿಸಿದ ಸಚಿವ ದೇಶಪಾಂಡೆ ಬರ ಅಧ್ಯಯನ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಪರಿಹಾರದ ಹಣವನ್ನು ಜಿಲ್ಲಾಡಳಿತದ ಮೂಲಕ ನೀಡಲಾಗುವುದು ಎಂದು ಭರವಸೆ ನೀಡಿದರು.