ಜಲದಲ್ಲಿ ಅರಳಿದ ಜಗದ ನಾಯಕ ದೇವ..ರಾಜ..ಅರಸು

ಬೆಳಗಾವಿ – ಶನಿವಾರ ಮಾಜಿ ಮುಖ್ಯಮಂತ್ರಿ ಹಿಂದುಳಿದ ಜನಾಂಗದ ನೇತಾರ ರಾಜ್ಯ ಕಂಡ ಅಪ್ರತಿಮ ನಾಯಕ ದೇವರಾಜ ಅರಸು ಅವರ 101ನೇಯ ಜಯಂತಿಯನ್ನು ಬೆಳಗಾವಿ ನಗರದಲ್ಲಿ ಅದ್ದೂರಿಯಿಂದ ಆಚರಿಸಲಾಯಿತು ಅಥಣಿ ತಾಲೂಕಿನ ಶಿಕ್ಷಕ ಸಿದ್ದು ಇಟಗಿ ಎಂಬ ಕಲಾವಿದ ಪಾತ್ರೆಯಲ್ಲಿ ನೀರು ತುಂಬಿ ನೀರಿನಲ್ಲಿ ದೇವರಾಜು ಅರಸುರವರ ಬಾವಚಿತ್ರ ಮೂಡಿಸಿ ಎಲ್ಲರ ಗಮನ ಸೆಳೆದರು
ಬೆಳಿಗ್ಗೆ ಸಂಸದ ಸುರೇಶ ಅಂಗಡಿ ಹಾಗು ಶಾಸಕ ಸೇಠ ಅವರು ಮೆರವಣಿಗೆಗೆ ಚಾಲನೆ ನೀಡಿದರು ಜಯಂತಿ ನಿಮಿತ್ಗಯ ಹೊರಡಿಸಲಾದ ಮೆರವಣಿಗೆ ನಗರದಲ್ಲಿ ದೇವರಾಜ ಅರಸುರವರ ಬದುಕು ಹಾಗು ಸಾಧನೆಯನ್ನು ಬಿಂಬಿಸಿತು
ನಂತರ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತಮಾಡಿದ ಜಿಲ್ಲಾಧಿಕಾರಿ ಎನ್ ಜೈರಾಂ ದೇವರಾಜು ಅರಸು ಅವರಿಗಿದ್ದ ದೂರದೃಷ್ಠಿಯಿಂದ ಬಡವರಿಗೆ ಊಳಲು ಬೂಮಿ ಸಿಕ್ಕಿತು ಗ್ರಾಮೀಣ ಬಾಗದ ವಿದ್ಯಾರ್ಥಿಗಲು ದೇವರಾಜು ಅರಸು ಜಾರಿಗೆ ತಂದ ಹಾಸ್ಟೇಲ್ ಗಳಲ್ಲಿ ವಾಸ ಮಾಡಿ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಸಾದ್ಯವಾಯಿತು ಎಂದರು
ಜಯಂತಿ ನಿಮಿತ್ಯ ವಿಶೇಷ ಉಪನ್ಯಾಸ ನೀಡಿದ ಪ್ರೋಫೆಸರ್ ಗದಿಗೆಪ್ಪಗೌಡರ ದೇವರಾಜ ಻ರಸು ಅವರು ಬಡ ಕುಟುಂಬದಲ್ಲಿ ಜನಿಸಿ ಬಡವರ ಕಷ್ಟ ಸುಖಗಳನ್ನು ಸ್ವತಹ ಻ನುಭವಿಸಿ ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದರು ಉಳುವವನೇ ಒಡೆಯ ಶಾಲಾ ವಸತಿ ನಿಲಯ,ಜೀತ ಪದ್ದತಿ ನಿಷೇಧ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಈಗಲೂ ಜನಮಾನಸದಲ್ಲಿ ವಿಶೇಷವಾದ ಸ್ಥಾನ ಪಡೆದಿದ್ದಾರೆ ಎಂದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *