ಬೆಳಗಾವಿಯಲ್ಲಿ ಚಿರತೆ ಚಲನವಲನ DFO ಹೇಳಿಕೆ…
ಬೆಳಗಾವಿ- ಕಳೆದ ಐದು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಕಣ್ಣುಮುಚ್ಚಾಲೆಯಾಟ ಆಡುತ್ತಿರುವ ಚಿರತೆಯ ಚಲನ ವಲನ ಕೊನೆಗೂ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಬೆಳಗಾವಿ DFO ಹೇಳಿದ್ದಾರೆ.
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಚಿರತೆಯ ಚಲನವಲನ ಪತ್ತೆಯಾಗಿದೆ, ಸಾರ್ವಜನಿಕರು ಅಲರ್ಟ್ ಆಗಿರಬೇಕು ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು DFO ಅಂಥೋಣಿ ಬೆಳಗಾವಿ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗಾಲ್ಫ್ ಮೈದಾನ ಬೆಳಗಾವಿಯ ಹನುಮಾನ ನಗರದ ಪಕ್ಕದಲ್ಲಿದೆ.ಈ ಮೈದಾನದ ಸುತ್ತಮುತ್ತ ವಿ ಐ ಪಿ ಬಡಾವಣೆಗಳಿದ್ದು, ಅರಣ್ಯ ಇಲಾಖೆಯ ಸಿಬ್ಬಂಧಿಗಳು ಚಿರತೆ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ