ಬೆಳಗಾವಿ,
ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತಯರ ಕಚೇರಿಗೆ ೬.೫ ಕೋಟಿ ರೂ ಅನುದಾನವನ್ನು ಸರಕಾರ ಮಂಜುರು ಮಾಡಿದ್ದು ಕಚೇರಿ ಸ್ಥಾಪನೆಗೆ ಶೀಘ್ರದಲ್ಲಿ ಜಾಗವನ್ನುವಾಂತಿಮಗೊಳಿಸಲಾಗುವುದೆಂದು ರಾಜ್ಯ ಪೊಲೀಸ್ ಮಹಾನಿರ್ಧೆಶಕ ರೂಪಕುಮಾರ ದತ್ತಾ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಟ್ರಾಫಿಕ್ ನ್ಯಾನೇಜ್ ಮೇಂಟ್ ಕೇಂದ್ರವನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಜನಸಂಖ್ಯೆ ಗೆ ತಕ್ಕಂತೆ ಹೊಸ ಪೊಲೀಸ್ ಠಾಣೆಗಳನ್ನು ತೆರೆಯುವ ಪ್ರಸ್ತಾವಣೆಗಳು ಬರುತ್ತವೆ. ಆದ್ಯತೆ ಮೇರೆಗೆ ಸರಕಾರ ಇದಕ್ಕೆ ಮಂಜೂರಾತಿ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಬೆಳಗಾವಿ ನಗರ ಹಾಗೂ ಜಿಲ್ಲೆಯಿಂದಲೂ ಹೊಸ ಠಾಣೆಗಳ ಸ್ಥಾಪಣೆಗೆ ಪ್ರಸ್ತಾವಣಡ ಬಂದಿವೆ ಅವರು ತಿಳಿಸಿದರು.
ರಾಜ್ಯದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀಟ ವ್ಯವಸ್ಥೆ ಮಢಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಮೊಬೈಲ್, ಸಿಮ್ ಕಾಡ್ರ ಹಾಗೂ ನಿರ್ವಹಣ ವೆಚ್ಚವನ್ನು ಭರಿಸಲು ಗೃಹ ಸಚಿವರು ಒಪ್ಪಿಕೊಂಡಿದ್ದಾರೆ. ಬೀಟ್ ಪೊಲೀಸರಿಗೆ ಶೀಘ್ರದಲ್ಲಿ ಸಿಮ್ ಕಾರ್ಡ ಅಲೌನ್ಸ್ ಮತ್ತು ವಾಹನ ಸೌಲಭ್ಯ ನೀಡಿ ಬೀಟ್ ವ್ಯವಸ್ಥೆ ನೀಡಿ ಇನ್ನಷ್ಟು ಉತ್ತಮ ಗೊಳಿಸಲಾಗುವುದು ಎಂದು ದತ್ತಾ ಹೇಳಿದರು.
ರಾಜ್ಯದ ಪೊಲೀಸ್ ಸಿಬ್ಬಂಧಿಗಳಿಗೆ ಖಡ್ಡಾಯವಾಗಿ ವಾರದ ರಜೆ ಕೊಡಬೇಕು ಎಂದು ರಾಜ್ಯ ಎಲ್ಲ ಜಿಲ್ಲಾ ಎಸ್ಪಿಗಳಿಗೆ ಸೂಚಿಸಲಾಗಿದೆ. ರಜೆ ಕೊಡಲು ಸಾದಗಯವಾಗದೇ ಇದ್ದರೆ ರಜಾ ದಿನದ ಭತ್ಯೆಯನ್ನು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಈ ವಿಷಯದಲ್ಲಿ ಸಿಬ್ಬಂದಿಗಳಿಗೆ ಅನ್ಯಾಯವಾದ ಬಗ್ಗೆ ದೂರುಗಳು ಬಂದಲ್ಲಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆದರೆ ಈ ಬಗ್ಗೆ ದೂರುಗಳು ಬಂದಿಲ್ಲ. ಭತ್ಯೆ ಕೊಡುವುದರಲ್ಲಿ ತಡವಾಗಿರಬಹುದು ಎಂದು ದತ್ತಾ ಹೇಳಿದರು.
ಬಾಂಗ್ಲಾದೇಶಿಗರ ವಲಸೆ ವಿಷಯ ಗಂಬೀರ ಮತ್ತು ದೇಶದ ಸುರಕ್ಷತಾ ವಿಷಯ ವಾಗಿದ್ದು, ಬಾಂಗ್ಲಾದೇಶಿಗರನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಬಾಂಗ್ಲಾದೇಶಿಗರು ಪಾಸ್ ಪೋರ್ಟ್ ಪಡೆದುಕೊಂಡಲ್ಲಿ ಪಾಸ್ ಪೋರ್ಟ ವೆರಿಪಿಕೇಶನ್ ಮಾಡಿದ ಸಿಬ್ಬಂದಿ ಮತ್ತು ಅಧಿಕಾರಿಯನ್ನು ಹೊಣೆಗರರನ್ನಾಗಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರವಾರ ನೌಕಾನೆಲೆಯಲ್ಲಿ ಆತಂಕವಾದಿಗಳು, ನುಸುಳಿದ್ದಾರೆ ಎಂಬುವುದು ವದಂತಿ. ಈ ಹಿನ್ನಲೆಯಲ್ಲಿ ಶೋಧಕಾರ್ಯ ನಡೆಸಲಾಗಿದೆ. ಇದು ಅಣುಕು ಕಾರಗಯಚರಣೆ ಅಲ್ಲ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಿಲ್ಲ ಎಂದು ನೌಕಾ ಅಧಿಕಾರಿಗಳು ತಿಳಿಸಿದರು.