Breaking News

ಸರ್ ನಮ್ಮ ಯಜಮಾನ್ರಿಗೆ ವಾರಕ್ಕೊಂದು ರಜೆ ಕೊಡಿ…ಡಿಜಿಪಿ ಎದುರು ಪೋಲೀಸ್ ಪತ್ನಿಯರ ಅಳಲು..!!

 
ಬೆಳಗಾವಿ- ಪೋಲೀಸ್ ಸಿಬ್ಬಂಧಿಗಳ ಕುಟುಂಬಗಳು ಡಿಜಿಪಿ ಎದುರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶವನ್ನು ಜಿಲ್ಲಾಪೋಲೀಸ್ ವರಿಷ್ಠ ರವಿಕಾಂತೇಗೌಡರು ಖಾನಾಪೂರದಲ್ಲಿ ಮಾಡಿಕೊಡುವ ಮೂಲಕ ಇಲಾಖೆಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದರು ಈ ಅಪರೂಪದ ಸಂವಾದದಲ್ಲಿ ಪೋಲೀಸ್ ಪತ್ನೀಯರು ಹಲವಾರು ಸಮಸ್ಯೆ ಹೇಳಿಕೊಳ್ಳುವ ಮೂಲಕ ಡಿಜೆಪಿ ಅನುಪ ಕುಮಾರ ದತ್ತಾ ಅವರ ಗಮನ ಸೆಳೆದರು

ಸರ್‌.. ಸರ್‌… ನಮ್ಮ ಯಜಮಾನ್ರೀಗೆ ಕನಿಷ್ಠ ವಾರಕ್ಕೊಂದು ರಜೆ ಕೊಡಿ… ನಮ್ಮದು ಫ್ಯಾಮ್ಲಿ ಇದೇ… ಸರ್ಕಾರದಿಂದ ಹಣ ಬೇಡ ನಮಗೆ ಪಡಿತರ ಕೊಟ್ಟರೇ ತುಂಬಾ ಚನ್ನಾಗಿರುತ್ತೆ ಸರ್. ಹೀಗೆಂದು ಪೊಲೀಸ್ ಸಿಬ್ಬಂಧಿಯ ಪತ್ನಿಯರು ಇಂದು ಡಿಜಿ ಐಜಿಪಿ ಆರ್.ಕೆ. ದತ್ತಾ ಅವರ ಮುಂದೆ ಪ್ರಸ್ತಾವ ಸಲ್ಲಿಸಿದ್ರು.

ಖಾನಾಪುರ ಪೊಲೀಸ್ ಸಿಬ್ಬಂಧಿಯ ಕುಟುಂಬದ ಸದಸ್ಯ ಜತೆಗೆ ಸಂವಾದ ನಡೆಸಿದ ಡಿಜಿ ಮುಂದೆ ಅನೇಕ ತೊಂದರೆಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ

ಬೆಳಗಾವಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಾವು ಪೊಲೀಸ್‌ ಒಂದೇ ಕುಟುಂಬ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ. ದತ್ತಾ ಅವರು ಪೊಲೀಸ್‌ ಸಿಬ್ಬಂದಿ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದ್ರು. ಜತೆೆಗೆ ಪೊಲೀಸ್‌ ಕುಟುಂಬ ಸದಸ್ಯರೊಂದಿಗೆ ಉಲ್ಪೋಪಹಾರ ಸೇವಿಸಿದ್ರು. ಡಿಸಿ ದತ್ತಾ ಅವರು ಸಂವಾದದ ವೇಳೆ ಖಾನಾಪುರ ಪೊಲೀಸ್‌ ಠಾಣೆ ಸಿಬ್ಬಂದಿಯ ಪತ್ನಿಯರು ಪ್ರಶ್ನೆಗಳ ಸುರಿಮಳೆ ಸುರಿಸಿದ್ರು. ಸಿಪಿಐ, ಪಿಎಸ್‌ಐ, ಪೊಲೀಸ್‌ ಪೇದೆಯ ಪತ್ನಿಯರು ಡಿಜಿ ಅವರನ್ನ ನಮ್ಮ ಯಜಮಾನ್ರೀಗೆ ರಜೆ ನೀಡಿ ಎಂದು ಕೇಳಿದ್ರು. ಜತೆಗೆ ಉತ್ತಮವಾದ ಕ್ವಾಟರ್ಸ್‌ ಸೌಲಭ್ಯ ಕಲ್ಪಿಸಿ… ಈಗೀರುವ ಸಂಬಳ ಸಾಕಾಗುತ್ತಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಂಬಳ ಹೆಚ್ಚಿಸಬೇಕು… ಸರ್ಕಾರದಿಂದ ಹಣದ ಬದಲಾಗಿ ಪಡಿತರ ವಿತರಿಸುವಂತೆ ಮನವಿ ಮಾಡಿದ್ರು.

ಇನ್ನು ಸಂವಾದಲ್ಲಿ ಪೊಲೀಸ್‌ ಪತ್ನಿಯರ ಸಮಸ್ಯೆ ಆಲಿಸಿದ ಡಿಸಿ ದತ್ತಾ ಅವರು ಅಧೀನ ಅಧಿಕಾರಿಗಳಿಗೆ ಕಡ್ಡಾಯವಾಗಿ ವಾರದ ನೀಡುವಂತೆ ಸೂಚಿಸಿದ್ರೆ. ಮತ್ತೆ ಪಡಿತರ ವಿತರಿಸುವಂತೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ರು.

 

 

 

ನಾವು ಪೊಲೀಸ್ರು ಒಂದೇ ಕುಟುಂಬದ ಸದಸ್ಯರಿದ್ದರಂತೆ.. ಕನಿಷ್ಠ ತಿಂಗಳಿಗೆ ಒಂದು ಸಾರಿ ಹೀಗೆ ಜೊತೆ ಸೇರಿದ್ರೆ ನಮ್ಮ ಕಷ್ಟ-ಸುಖಗಳು ಗೊತ್ತಾಗುತ್ತವೆ. ಯಾವುದೇ ಹಿರಿಯ ಅಧಿಕಾರಿಗಳು ಪೊಲೀಸ್‌ ಸಿಬ್ಬಂದಿಯೊಂದಿಗೆ ಅವಾಚ್ಯ ಶಬ್ಧಗಳಿಂದ ಮಾತನಾಡದಂತೆ ಸೂಚನೆ ನೀಡಿದ್ರು.

 ಖಾನಾಪುರದ ತರಬೇತಿ ಶಾಲೆಯ ವತಿಯಿಂದ 22ನೇ ತಂಡದ ಪೊಲೀಸ್ ಕಾನ್ಸ್ ಟೆಬಲ್ ಗಳ ನಿರ್ಗಮನ ಪಥ ಸಂಚಲನ ನಡೆಯಿತು. ತರಬೇತಿ ಹೊಂದಿದ ಸಿಬ್ಬಂಧಿಗೆ ಪ್ರಮಾಣ ವಚನ ಭೋದಿಸಲಾಯಿತು. ಒಟ್ಟಾರೆ ಬೆಳಗಾವಿ ಎಸ್ಪಿ ಡಾ. ಬಿ.ಆರ್‌. ರವಿಕಾಂತೇಗೌಡ ಅವರ ನಾವು ಪೊಲೀಸ್‌ ಒಂದೇ ಕುಟುಂಬ ಕಾರ್ಯಕ್ರಮಕ್ಕೆ ಡಿಜಿ ದತ್ತಾ ಮತ್ತು ಐಜಿಪಿ ರಾಮಚಂದ್ರರಾವ್‌ ಸೇರಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಡಿಜಿಪಿ ಅನುಪಕುಮಾರ ದತ್ತಾ ಪೋಲೀಸ್ ಕುಟುಂಬಗಳ ಮದ್ಯದಲ್ಲಿ ಕುಳಿತು ಉಪಹಾರ ಸೇವಿಸಿ ನಾವು ..ಪೋಲೀಸ್  ಒಂದೇ  ಕುಟುಂಬ ಎನ್ನುವ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು

Check Also

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.