Breaking News

ಅಥಣಿ ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ಧರೆಪ್ಪ ಠಕ್ಕಣ್ಣವರ

ಬೆಳಗಾವಿ :ಅಥಣಿ ಮತ ವಿಧಾನಸಭಾ ಮತಕ್ಷೇತ್ರದಲ್ಲಿ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸಾಮಾಜಿಕ ಸೇವಾ ಕಾರ್ಯಗಳಿಂದ ಹಳ್ಳ-ಹಳ್ಳಿಗೂ ಚಿರಪರಿಚಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಮಹೇಶ ಕುಮಠಳ್ಳಿ ಅವರು ಪಕ್ಷಾಂತರ ನಡೆಸಿದ್ದರಿಂದ ಅಥಣಿಯಲ್ಲಿ ಕಾಂಗ್ರೆಸ್ ಶೂನ್ಯಕ್ಕೆ ತಲುಪಿತ್ತು. ಈ ನಿಟ್ಟಿನಲ್ಲಿ ಅವರು ಪಕ್ಷ ಸಂಘಟನೆ ಜೊತೆ ಮತ್ತೆ ಹಿಂದಿನ ವರ್ಚಸ್ಸು ತರಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಇಡೀ ಜಗತ್ತು
ಕೊರೊನಾ ಪೀಡಿತವಾಗಿದ್ದ ಸಂದರ್ಭದಲ್ಲಿ ಅವರು ಜನರಿಗೆ ನೀಡಿರುವ ಸೇವೆ ಗಣನೀಯವಾಗಿದೆ. ಪ್ರತಿಯೊಂದು ಹಳ್ಳಿಹಳ್ಳಿಗೂ ಹೋಗಿ ಅವರು ಪ್ರತಿ ದಿನ 600 ಊಟದ ಪೊಟ್ಟಣ ಮತ್ತು ಅಗತ್ಯ ಮೂಲಭೂತ ಸೌಲಭ್ಯದ ವ್ಯವಸ್ಥೆ ಮಾಡಿ ಜನಸಾಮಾನ್ಯರ ಗಮನಸೆಳೆದಿದ್ದರು. ಕೊರೊನಾ ವಾರಿಯರ್ ಆಗಿಯೂ ಸೇವೆ ಸಲ್ಲಿಸಿದ್ದರು. ಕೋವಿಡ್ ಗೆ ಚಿಕಿತ್ಸೆ ನೀಡುವ ವೈದ್ಯರು, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿದಂತೆ ಇತರರಿಗೆ ಆಶಾಕಿರಣವಾಗಿ ಗೋಚರಿಸಿದ್ದರು.

ಮಹಾರಾಷ್ಟ್ರ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಾಗ ಅಥಣಿ ಮತ್ತು ಜಮಖಂಡಿ ತಾಲೂಕಿನಲ್ಲಿ ಉಂಟಾದ ನೆರೆ ಪ್ರವಾಸದಲ್ಲಿ ಸಂತ್ರಸ್ತರ ಬಳಿಗೆ ತೆರಳಿ ಆಹಾರವನ್ನು ವಿತರಿಸಿ ನೆರೆ ಸಂತ್ರಸ್ತರ ನೋವಿನಲ್ಲೂ ಭಾಗಿಯಾಗಿದ್ದರು. ಅತ್ಯಂತ ಸೇವಾ ಮನೋಭಾವದ ಯುವ ನಾಯಕರಾಗಿ ಗುರುತಿಸಿಕೊಂಡಿರುವ ಧರೆಪ್ಪ ಠಕ್ಕಣ್ಣವರ ಸಮಾಜ ಸೇವೆಯಲ್ಲಿ ಸದಾ ಮುಂದು.

ಅಥಣಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಬೆಳೆಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ದುಡಿಯುತ್ತಿದ್ದಾರೆ. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ನವಚೈತನ್ಯ ತರುವ ಅದಮ್ಯ ಉತ್ಸಾಹ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಅವರಲ್ಲಿದೆ.

ಕಾಂಗ್ರೆಸ್ ಪಕ್ಷ ಈ ಬಾರಿ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ತಮಗೆ ಟಿಕೆಟ್ ನೀಡಿದರೆ ಪಕ್ಷವನ್ನು ಮತ್ತೆ ಇಲ್ಲಿ ಬಲಾಢ್ಯವಾಗಿ ಬೆಳೆಸುವ ಹೊಂಗನಸನ್ನು ಅವರು ಕಂಡಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೇರಿದಂತೆ ಇತರ ದಿಗ್ಗಜ ನಾಯಕರ ಜೊತೆ ಅವಿನಾಭಾವ ನಂಟು ಹೊಂದಿರುವ ಧರೆಪ್ಪ ಠಕ್ಕಣ್ಣವರ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ದಿಗ್ವಿಜಯ ಸಾಧಿಸುವುದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನುವುದು ಕ್ಷೇತ್ರದ ಜನತೆಯಒಟ್ಟಾರೆ ಅಭಿಪ್ರಾಯವಾಗಿದೆ.

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *