Breaking News

ನನ್ನಿಂದಲೇ.. ಡಿ.ಕೆ.ಶಿವಕುಮಾರ್ ರಾಜಕಾರಣ ಅಂತ್ಯ ಆಗೋದು. ನೋಡ್ತಾ ಇರೀ- ರಮೇಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಕ್ಷರಶಃ ಇಲೆಕ್ಷನ್ ಶುರುವಾಗಿದೆ.ಈ ಕ್ಷೇತ್ರದಲ್ಲಿ ಸರಣಿ ಸಭೆಗಳನ್ನು,ಸಮಾವೇಶಗಳನ್ನು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವತ್ತು ಬೆಳಗಾವಿಯ ಹೊರ ವಲಯದಲ್ಲಿರುವ ರೆಜೇಂಟಾ ರಿಸಾರ್ಟ್ ನಲ್ಲಿ ಗ್ರಾಮೀಣ ಕ್ಷೇತ್ರದ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೇ ಆರಂಭವಾಗಿದೆ. ರಾಜ್ಯ ರಾಜಕಾರಣದ ಕಡುವೈರಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟಾಕ್ ಫೈಟ್ ಜೋರಾಗಿದೆ. ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಶತಾಯ ಗತಾಯ ಸೋಲಿಸಬೇಕೆಂದು ಶಪಥ ಮಾಡಿರುವ ರಮೇಶ್ ಜಾರಕಿಹೊಳಿ ಮೊನ್ನೆಯಷ್ಟೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲಿಗರ ಸಮಾವೇಶ ಮಾಡಿದ್ದರು. ಈ ವೇಳೆ ಭಾಷಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಟಿಫನ್ ಬಾಕ್ಸ್, ಮಿಕ್ಸರ್ ಹಂಚಿಕೆ ಕುರಿತು ಮಾತನಾಡುತ್ತಾ ಅವರು ಎಲ್ಲಾ ಸೇರಿ ಒಂದು ಮೂರು ಸಾವಿರ ರೂಪಾಯಿ ಮೌಲ್ಯದ ಗಿಫ್ಟ್ ನೀಡಬಹುದು. ನಾನು ಆರು ಸಾವಿರ ರೂಪಾಯಿ ನೀಡಿದರಷ್ಟೇ ಮತ ಹಾಕಿ ಎಂದಿದ್ರು. ಅಲ್ಲದೇ ಅವರು ಖರ್ಚು ಮಾಡುವುದಕ್ಕಿಂತ ಹತ್ತು ಕೋಟಿ ರೂಪಾಯಿ ಹೆಚ್ಚು ಖರ್ಚು ಮಾಡೋದಾಗಿ ಹೇಳಿಕೆ ನೀಡಿದ್ರು. ಇದರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಾಯಕರು ದೂರು ನೀಡಿದ್ರು. ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ ತಾವು ಅಭಿವೃದ್ಧಿ ವಿಚಾರವಾಗಿ ಹೇಳಿಕೆ ನೀಡಿದ್ದೀನಿ. ನನ್ನ ಹೇಳಿಕೆ ತಿರುಗಿ ನಾನು ನೋಡಿಲ್ಲ. ಆದ್ರೆ ಗ್ರಾಮೀಣ ಕ್ಷೇತ್ರದಲ್ಲಿ ಖುಲೇ ಆಮ್ ಗಿಫ್ಟ್ ಹಂಚಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ರೂಪಾಯಿ ನೀಡೋದಾಗಿ ಹೇಳೋದು ಆಮೀಷ ಅಲ್ವಾ ಅಂತಾ ಪ್ರಶ್ನಿಸಿದರು‌. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಸಿಡಿ ಷಡ್ಯಂತ್ರ ಹಿಂದೆ ಮಹಾನಾಯಕ ಇದ್ದ ಎಂಬುದಕ್ಕೆ ಸಾಕ್ಷಿ ಇದೆ. 40 ಕೋಟಿ ರೂಪಾಯಿ ನೀಡಿ ಸಿಡಿ ಮಾಡಿಸಿದ್ದರು ಎಂಬುದಕ್ಕೆ ಆಡಿಯೋ ಸಾಕ್ಷಿ ಇದೆ. ತಮ್ಮ ವಿರುದ್ಧದ ಸಿಡಿ ಷಡ್ಯಂತ್ರ ಹಾಗೂ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಕೇಸ್ ಎರಡೂ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇನ್ಹು ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ
ಕೆ.ಶಿವಕುಮಾರ್, ಅವನಿಗೆ ಪ್ಯಾಂಟ್ ಬಿಚ್ಚು ಅಂತಾ ನಾನು ಹೇಳಿದ್ದನಾ? ನಮ್ಮ ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದೇ ಅವನು. ಆಪರೇಷನ್ ಕಮಲ ಮಾಡಿ ಹಾಳು ಮಾಡಿದ. ಅದೇನೋ ಸಿಬಿಐ ತನಿಖೆ ಮಾಡಿಸೋದಾಗಿ ಹೇಳುತ್ತಿದ್ದಾನಲ್ಲ ಮಾಡಿಸಲಿ ಎಂದಿದ್ದಾರೆ. ಇದಕ್ಕೆ ಮರು ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ‘ಆ ಕೆಳಮಟ್ಟದ ಶಬ್ದಗಳ ಉಪಯೋಗ ಬೇಡ. ಮನುಷ್ಯನ ಪರ್ಸನಲ್ ಲೈಫ್ ಎಲ್ಲರಿಗೂ ಇರುತ್ತೆ. ಅದರ ಬಗ್ಗೆ ಪದೇಪದೇ ಚರ್ಚೆ ಮಾಡೋದು ಬೇಡ. ಡಿ.ಕೆ.ಶಿವಕುಮಾರ್ ತಲೆ ಔಟ್ ಆಗಿದೆ ಅವರ ತಲೆ ಸರಿ ಇಲ್ಲ. ಪದೇಪದೇ ಟೀಕೆ ಮಾಡಿದ್ರೆ ನಾವು ಸಣ್ಣವರಾಗುತ್ತೀವಿ. ಅವನು ಕೆಳಮಟ್ಟಕ್ಕೆ ಇಳಿದಿದ್ದಾನೆ, 2008ರ ಶಿವಕುಮಾರ್ ಆಗಿ ಉಳಿದಿಲ್ಲ. ಗ್ರಾಮೀಣ ಶಿವಕುಮಾರ್ ಆಗಿ ಅಷ್ಟೇ ಉಳಿದಿದ್ದಾನೆ ಅವನು.ಈಗಾಗಲೇ ಬಹಳಷ್ಟು ಮಾತನಾಡಿದ್ದೀನಿ, ಪ್ರತಿಯೊಂದು ಶಬ್ದಕ್ಕೂ ಬದ್ಧನಿದ್ದೀನಿ ಎಂದ್ರು. ಇನ್ನು ಕಾಂಗ್ರೆಸ್ ಪಕ್ಷ ಹಾಳಾಗಿದ್ದು ರಮೇಶ್ ಜಾರಕಿಹೊಳಿಯಿಂದ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ‘ಹೌದು ನಿಜ, ನಾನು ಚಾಲೇಂಜ್ ಮಾಡಿ ಮಾಡಿದೀನಿ.:ಅವನ ಹಾಗೇ ನಾನು ಮೋಸ ಮಾಡಿಲ್ಲ, ಷಡ್ಯಂತ್ರ ಮಾಡಿಲ್ಲ. ನಾನು ಚಾಲೇಂಜ್ ಮಾಡಿ ಪಕ್ಷ ಬಿಡ್ತೀನಿ ಅಂತಾ ಹೇಳಿ ರಾಜೀನಾಮೆ ಕೊಟ್ಟಿದ್ದೇನೆ. ನಾನೇನೂ ಡೊಕ್ಕೊಂಡು, ಯಾವುದಾದರೂ ಹುಡುಗಿ ಕಳಿಸಿ ಕುತಂತ್ರ ಮಾಡಿಲ್ಲ. ಅದನ್ನ ಷಂಡರು ಮಾಡ್ತಾರೆ, ಮನುಷ್ಯರು ಮಾಡಲ್ಲ ಎಂದ್ರು.‌ರಮೇಶ್ ಜಾರಕಿಹೊಳಿಯನ್ನೇ ಡಿಕೆಶಿ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾವಾಗಿದ್ದರೂ ಗಟ್ಟಿ ಮನುಷ್ಯ, ಸ್ಟ್ರಾಂಗ್ ಮನುಷ್ಯನನ್ನೇ ಮಾಡ್ತಾರೆ. ಅವನಕ್ಕಿಂತ ತಾಕತ್‌ವಾನ್ ಇದ್ರೆ ವೀಕ್ ಮಾಡಲು ಷಡ್ಯಂತ್ರ ಮಾಡ್ತಾನೆ. ನನ್ನಿಂದ ಅವನ ರಾಜಕಾರಣ ಅಂತ್ಯವಾಗೋದು. ನನ್ನಿಂದ ಡಿ.ಕೆ.ಶಿವಕುಮಾರ್ ರಾಜಕಾರಣ ಅಂತ್ಯ ಆಗೋದು. ನೋಡ್ತಾ ಇರೀ ಎಂದು ತಿಳಿಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಟಾಕ್ ವಾರ್ ಜೋರಾಗಿದ್ದು ಅದರಲ್ಲೂ ರಾಜಕೀಯ ಬದ್ಧ ವೈರಿಗಳಾದ ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಟಾಕ್ ಫೈಟ್ ಜೋರಾಗಿದೆ. ಚುನಾವಣೆ ವೇಳೆ ಇದು ಎಲ್ಲಿಯವರೆಗೆ ಹೋಗುತ್ತೆ ಎಂಬುದನ್ನು ಕಾದು ನೋಡಬೇಕು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *