Breaking News
Home / Breaking News / ಹೆಬ್ಬಾಳಕರ್ ವಿರುದ್ಧ ಬಿಜೆಪಿ ನಾಯಕರು ದೂರು ಕೊಡ್ತಾರಂತೆ…!!!

ಹೆಬ್ಬಾಳಕರ್ ವಿರುದ್ಧ ಬಿಜೆಪಿ ನಾಯಕರು ದೂರು ಕೊಡ್ತಾರಂತೆ…!!!

ಬೆಳಗಾವಿ

ಕಾಂಗ್ರೆಸ್ ಏನು ಎಂಬುದರ ಕುರಿತು ಜನತೆಗೆ ಗೊತ್ತಾಗಿದೆ. ಕಾಂಗ್ರೆಸ್ ಮತದಾರರಿಗೆ ಆಮಿಷ ತೋರುತ್ತಿರುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.

ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ‌ ಕಾಂಗ್ರೆಸ್ ದೂರು ನೀಡಿದೆ. ರಮೇಶ ಅವರು ಆರು ಸಾವಿರ ರೂ. ಎಲ್ಲಿ ಕೊಟ್ಟಿದ್ದಾರೆ ಎನ್ನುವುದನ್ನು ಬಿಡುಗಡೆ ಮಾಡಲಿ. ನಾವು ಮತದಾರರನ್ನು ಎಲ್ಲಿ ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದರ ಬಗ್ಗೆ ನಾವು ಸಹ ದೂರು ನೀಡುತ್ತಿದ್ದೇವೆ. ಮತದಾರರಿಗೆ ಕುಕ್ಕರ್, ಮಿಕ್ಸರ್ ಹಂಚಿಕೆ ಮಾಡಿ ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ‌‌ ಹೆಬ್ಬಾಳ್ಕರ್ ಹೆಸರು ಹೇಳದೆ ಅವರ ವಿರುದ್ಧ ‌ದೂರು‌ ನೀಡುವ ಸುಳಿವು ‌ನೀಡಿದರು.

ರಮೇಶ ಜಾರಕಿಹೊಳಿ‌ ಅವರು ಮತದಾರರಿಹೆ ಹಣ ಕೊಟ್ಟಿರುವ ವಿಡಿಯೋ ಬಿಡುಗಡೆ ಮಾಡಲಿ. ನಾವು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಯಾವ ರೀತಿ ಕುಕ್ಕರ್, ಮಿಕ್ಸರ್ ಹಂಚಿದ್ದಾರೆ ಎನ್ನುವ ವಿಡಿಯೋ ಬಿಡುಗಡೆ ಮಾಡಿದರು.
ನಾವು ಸುಮ್ಮನೆ ಕುಳಿತಿಲ್ಲ. ಕಾಂಗ್ರೆಸ್ ‌ಮಾಡಿರುವ ಭ್ರಷ್ಟಾಚಾರದ ಬಗ್ಗೆ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಎಂದರು.

ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭಗವಂತನೇ ನಗಬಹುದು ಎಂಥ ಸ್ವಚ್ಚ ಮನುಷ್ಯ ಎಂದು. ಅವರು ಯಾಕೆ‌ ಜೈಲಿಗೆ ಹೋಗಿರುವುದು ಗೊತ್ತಿದ್ದರೂ ಕೂಡ ಮುಚ್ಚಿಟ್ಟುಕೊಂಡು ಬಿಜೆಪಿ‌ ವಿರುದ್ಧ ಬಹಳ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯನವರು ೩೫ ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಯಲು ಆಶ್ರಯದಾತ ಎಂದು ಹರಿಹಾಯ್ದರು.

Check Also

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ …

Leave a Reply

Your email address will not be published. Required fields are marked *