ಬೆಳಗಾವಿ- ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಲು ಹಲವಾರು ಜನ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ.ಆದ್ರೆ ಅತೀ ಶೀಘ್ರದಲ್ಲೇ ಇಬ್ಬರು ಪ್ರಬಲ ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್ ಗೆ ಕಳುಹಿಸುತ್ತೇವೆ.ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ಬೆಳಗಾವಿಯಲ್ಲಿ ನಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಹೆಸರೂ ಕೇಳಿಬರುತ್ತಿದೆಯಲ್ಲ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಸತೀಶ್ ಜಾರಕಿಹೊಳಿ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಎಂದು ಹೇಳಿದ ಅವರು,ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಅವರು ಭಾಗವಹಿಸುತ್ತಾರೋ ಇಲ್ಲವೋ ಅನ್ನೋದನ್ನ ಮಾತ್ರ ಹೇಳಲಿಲ್ಲ.
ಸಿಎಂ ಇಬ್ರಾಹಿಂ ಅವರು ಪಕ್ಷ ಬಿಡವ ವಿಚಾರದ ಕುರಿತು ಅವರ ಜೊತೆ ಮಾತಾಡಿದ್ದೇನೆ,ಕಾಂಗ್ರೆಸ್ ಪಕ್ಷ ಅವರಿಗೆ ಎರಡು ಬಾರಿ ಎಂ ಎಲ್ ಸಿ ಮಾಡಿದೆ ಮಂತ್ರಿ ಮಾಡುವದಷ್ಟೇ ಬಾಕಿ ಉಳಿದಿತ್ತು,ಸಿ ಎಂ ಇಬ್ರಾಹೀಂ ಅವರು ಪ್ರಭಾಕರ ಕೋರೆ ಅವರನ್ನು ಸಹಜವಾಗಿ ಭೇಟಿಯಾಗಿದ್ದಾರೆ.ನಾನೂ ಸಹ ಏರ್ ಪೋರ್ಟಿನಲ್ಲಿ ಬೇರೆ.ಬೇರೆ ಕಡೆ ಎಲ್ಲರನ್ನು ಭೇಟಿಯಾಗುತ್ತೇನೆ. ಸಿಎಂ ಇಬ್ರಾಹಿಂ ಅವರು ಪ್ರಭಾಕರ ಕೋರೆ ಅವರನ್ನು ಭೇಟಿಯಾಗಿದ್ದು ಸಹಜ ಇದರಲ್ಲಿ ವಿಶೇಷತೆ ಏನೂ ಇಲ್ಲಾ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.