ಬೆಳಗಾವಿ-ಬೆಳಗಾವಿಯಲ್ಲಿ ನಾಳೆ ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆಯಲ್ಲಿದೆಹಲಿ, ದೇಶದ ಮೂಲೆ ಮೂಲೆಗಳಿಂದ ನಾಯಕರು ಬೆಳಗಾವಿಗೆ ಬರುತ್ತಿದ್ದಾರೆ.ಸುಮಾರು ಅರವತ್ತು ಜನ ಬೇರೆ ಬೇರೆ ಕಡೆಯಿಂದ ಬರುತ್ತಿದ್ದು,ಬಹುತೇಕ ಎಲ್ಲ ಶಾಸಕರು, ಎಂಎಲ್ಸಿ ಗಳು ಬರ್ತಿದ್ದಾರೆ.ಪ್ರಿಯಾಂಕಾ ಗಾಂಧಿಯವರು ಬರೋ ಟೂರ್ ಪ್ಲ್ಯಾನ್ ಪಿಕ್ಸ್ ಆಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಜೈ ಭೀಮ್, ಜೈ ಗಾಂಧಿ, ಜೈ ಸಂವಿಧಾನ ಸಮಾವೇಶ ಮಾಡುತ್ತಿರುವದು,ಮಹಾತ್ಮ ಗಾಂಧಿ, ಅಂಬೇಡ್ಕರ್ ಸ್ಮರಣೆ ಸಂವಿಧಾನ ರಕ್ಷಣೆ ಮೂಲ ಉದ್ದೇಶವಾಗಿದೆ.ದೆಹಲಿ ಚುನಾವಣೆ ಉಸ್ತುವಾರಿ ಸಿಎಂಗೆ ನೀಡದ ವಿಚಾರದ ಕುರಿತು ಮಾತನಾಡಿದ ಅವರು
ನಾನೇ ಹೋಗಿ 2500ರೂ ಪ್ಯಾರಿ ದೀದಿ ಲಾಂಚ್ ಮಾಡಿದ್ದು ನಾನೇ.ನಮ್ಮ ಸಿಎಂ ಅವರು ಬಜೆಟ್ ತಯಾರಿಯಲ್ಲಿದ್ದಾರೆ.ಎಲ್ಲಾ ಇಲಾಖೆಯವರನ್ನ ಕರೆಯಬೇಕಿದೆ.ಎಲ್ಲ ಸಚಿವರ ಜೊತೆಗೆ ಸಭೆ ಮಾಡಿ ಬಜೆಟ್ ಸಿದ್ದಪಡಿಸಬೇಕಿದೆ.ಈ ಕಾರಣಕ್ಕೆ ಉಸ್ತುವಾರಿ ಬಿಟ್ಟಿದ್ದಾರೆ ಎಂದ ಡಿಕೆಶಿ ಹೇಳಿದರು.
ಸುರ್ಜೇವಾಲ ವಿರುದ್ಧ ಕ್ರಮಕ್ಕೆ ಕೆಲ ಸಚಿವರ ಒತ್ತಾಯ ವಿಚಾರವಾಗಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಸುಳ್ಳು ಹೇಳಿ ಬಿಟ್ಟು ನಿಮ್ಮ ಇಮೇಜ್ ಹಾಳು ಮಾಡುತ್ತಿದ್ದಾರೆ.ನಿನ್ನೆ ಹಿರಯರ ಮನೆಗೆ ಭೇಟಿ ಮಾಡಿದ್ದೆ ಜಗಳ ಇತ್ತು ಅದಕ್ಕೆ ಹೋಗಿದ್ರೂ ಅಂತಾ ಹೇಳ್ತಿದೀರಿ.
ಫಿರೋಜ್ ಸೇಠ್ ಹಿರಿಯ ನಾಯಕ ಜೊತೆಗೆ ಕೆಲಸ ಮಾಡಿದ್ದೇವೆ.ಸಂಘಟನೆ ದೃಷ್ಟಿಯಿಂದ ಹೋಗಿ ಕುಳಿತುಕೊಂಡು ಬಂದಿದ್ದೆ.ಎಂದು
ಮಾಧ್ಯಮದವರ ಮೇಲೆಯೂ ಡಿಕೆಶಿ ಗರಂ ಆದರು.
ಈ ಲೋಕಲ್ ಡರ್ಟಿ ಪಾಲಿಟಿಕ್ಸ್ ಮಾಡೋದಾದ್ರೇ ನಾನು ಮಾತನಾಡುವುದಿಲ್ಲನಾನು ಇದಕ್ಕೆ ಉತ್ತರ ಕೊಡಲ್ಲ, ಬರೋದು ಇಲ್ಲ.ನ್ಯಾಷ್ನಲ್ ಇವೆಂಟ್ ಮಾಡ್ತಿದ್ದೇವೆ ನಿಮಗೂ ಬೆಸಿಕ್ ಕಾಮನ್ ಸೆನ್ಸ್ ಇರಬೇಕು.ಯಾರು ಯಾರು ಎನೂ ಹೇಳ್ತಿದ್ದಾರೆ ಸುಳ್ಳಿನ ಕಂತೆ.ಕಾಂಗ್ರೆಸ್ ನ ಶಕ್ತಿ ಹೇಗೆ ತಂದಿದ್ದೇವೆ ಎಷ್ಟು ಶ್ರಮ ಪಟ್ಟು ಹೋರಾಟ ಮಾಡಿ, ತ್ಯಾಗ ಮಾಡಿ.ಗಾಂಧಿ ಬಾವಿಯಿಂದ ನೀರು ತೆಗೆದು ಬೆಳಕು ಚೆಲ್ಲಿ ಇಲ್ಲಿಂದ ಕಾರ್ಯಕ್ರಮ ರೂಪಿಸಿದ್ದೇವೆ. ಯಾವ ಬಂಡಾಯನೂ ಇಲ್ಲ, ಯಾರ ಜೊತೆಗೆ ಭಿನ್ನಾಭಿಪ್ರಾಯ ಇಲ್ಲ.ಪೊಲಿಟಿಕಲ್ ಡಿಪ್ರೆನ್ಸ್, ಪರ್ಸನಲ್ ಭಿನ್ನಾಭಿಪ್ರಾಯ ಯಾವುದು ಇಲ್ಲಾ.
ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಲ್ಲರೂ ಒಂದೇ.
ನನ್ನ ಕಣ್ಣು, ಕಿವಿ ಸರಿಸಮಾನಾವಾಗಿ ನೋಡುತ್ತೆ.
ನಾನು ದೊಡ್ಡ ಸ್ಥಾನದಲ್ಲಿದ್ದೇನೆ ಅದ್ಯಕ್ಷ ಇದೀನಿ ನನ್ನ ಕಣ್ಣಲ್ಲಿ ಎಲ್ಲರೂ ಒಂದೇ.ನನಗೆ ಯಾವನ ಬಂಡಾಯ ಇಲ್ಲ.ನಾನುಂಟು, ಹೈಕಮಾಂಡ್ ಉಂಟು ಪಕ್ಷ ಉಂಟು ಎಂದು ಡಿಕೆ ಶಿವಕುಮಾರ್ ಹೇಳಿದರು.
ಸರ್ಕಾರ ಉಳಿಸುವುದೊಂದೇ ನನ್ನ ಡ್ಯೂಟಿ,ಯಾವುದಕ್ಕೂ ನನ್ನ ಹೆಸರು ಉಪಯೋಗಿಸಲು ಹೋಗಬೇಡಿ.ನನಗೆ ಯಾರ ಜೊತೆಗೂ ಭಿನ್ನಾಭಿಪ್ರಾಯ ಇಲ್ಲ.ಕಾರ್ಯಕರ್ತರು ಅಂದ್ರೇ ಎಲ್ಲರೂ ಒಂದೇ.ಕ್ಯಾಬಿನೆಟ್ ಸಚಿವರು ಅಂದ್ರೇ, ಶಾಸಕರು ಅಂದ್ರೇ ಎಲ್ಲರೂ ಒಂದೇ.ಯಾರು ನನ್ನ ಪಕ್ಷದ ಜೊತೆಗೆ ಕೆಲಸ ಮಾಡ್ತಾರೆ ಎಲ್ಲರೂ ಒಂದೇ.ನಾನೇ ಅವರಿಗೆ ತಲೆ ಬಾಗಿಸಿ ಸರ್ವಿಸ್ ಮಾಡುವೆ.ಪಕ್ಷ ಮುಖ್ಯ ನನಗೆ ಕೊಟ್ಟಿರುವ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ.ಮೊದಲಿಂದಲೂ ಎಂತಹ ಸಂದರ್ಭದಲ್ಲಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ.ಧರ್ಮಸಿಂಗ್ ಸರ್ಕಾರದಲ್ಲಿ ಧಮ್ ತಡೆದುಕೊಂಡು ತ್ಯಾಗ ಮಾಡಿಕೊಂಡು ಬಂದಿದ್ದೇನೆ.ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲೂ ತ್ಯಾಗ ಮಾಡಿಕೊಂಡು ಬಂದಿದ್ದೇನೆ,ಪಕ್ಷ ಮುಖ್ಯ, ಪಕ್ಷದಿಂದಲೇ ಬೆಳೆದಿದ್ದೇನೆ.ತ್ಯಾಗ ಮಾಡಿಕೊಂಡೇ ಬರ್ತಿದೀನಿ ಇದರಿಂದ ಜನಕ್ಕೆ ಒಳ್ಳೆಯದಾಗುತ್ತೆ ಅಷ್ಟು ಸಾಕು ಎಂದು ಡಿಕೆ ಶಿವಕುಮಾರ್ ಹೇಳಿದ್ರು