ಡಿ ಕೆ ಶಿವಕುಮಾರ್ ಸಂದಾನ ಸಫಲ ಪ್ರತಿಭಟನೆ ಕೈಬಿಟ್ಟ ರೈತರು

ಬೆಳಗಾವಿ- ಎಫ್ ಆರ್ ಪಿ ದರ ನಿಗದಿ ಕಬ್ಬಿನ ಬಾಕಿ ಬಿಲ್ ಗಾಗಿ ಹಲವಾರು ದಿನಗಳಿಂದ ಬೆಳಗಾವಿ ರೈತರು ನಡೆಸುತ್ತಿದ್ದ ರೈತರ ಅಹೋ ರಾತ್ರಿ ಧರಣಿ ಅಂತ್ಯಗೊಂಡಿದೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರೈತರ ಜೊತೆ ನಡೆಸಿದ ಸಂಧಾನ ಸಫಲವಾಗಿದೆ

ಡಿಸಿ ಕಚೇರಿ ಎದುರು ರೈತರು ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಿ ಕೆ ಶಿವಕುಮಾರ್ ರಾಜ್ಯ ಸರ್ಕಾರ ರೈತರ ಪರವಾಗಿದೆ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಈಗಾಗಲೇ ರೈತ ಮುಖಂಡರ ,ಕಾರ್ಖಾನೆ ಮಾಲೀಕರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು ರೈತರು ಧೈರ್ಯ ಕಳೆದುಕೊಳ್ಳಬಾರದು ಸರ್ಕಾರ ರೈತರ ಜೊತೆಗಿದೆ ಎಂದು ಡಿಕೆಶಿ ರೈತರಿಗೆ ಭರವಸೆ ನೀಡಿದರು

ರೈತರ ಕಬ್ಬಿನ ಬಾಕಿ ಉಳಿಸಿಕೊಂಡವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ ರೈತರು ಧೈರ್ಯವಾಗಿರಬೇಕು ಸರ್ಕಾರದ ಜೊತೆ ಸಹಕರಿಸಬೇಕು ರೈತರಿಗೆ ಅನ್ಯಾಯವಾಗಲು ಸರ್ಕಾರ ಬಿಡುವದಿಲ್ಲ ಎಂದು ಡಿಕೆಶಿ ರೈತರಿಗೆ ಭರವಸೆ ನೀಡಿದರು

ಆಮರಣ ಸತ್ಯಾಗ್ರಹ ನಡೆದುತ್ತಿದ್ದ ರೈತರಿಗೆ ತಂಪು ಪಾನೀಯ ಕುಡಿಸಿದರು ರೈತರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *