Breaking News

ಶೀಘ್ರದಲ್ಲಿಯೇ ರಾಜ್ಯದಲ್ಲಿ ನರ್ಸಿಂಗ್ ಯುನಿವರ್ಸಿಟಿ ಸ್ಥಾಪನೆ – ಡಿಕೆ ಶಿವಕುಮಾರ್

ಬೆಳಗಾವಿ- ರಾಜ್ಯದಲ್ಲಿ ನರ್ಸಿಂಗ್ ವಿಶ್ವ ವಿದ್ಯಾಲಯ ಸ್ಫಾಪಿಸುವ ನಿಟ್ಟಿನಲ್ಲಿ ಕಾನೂನು ಸಲಹೆ ಪಡೆದು ತಜ್ಞರ ಅಭಿಪ್ರಾಯ ಪಡೆದು ರಾಜೀವ ಗಾಂಧಿ ಯುನಿವರ್ಸಿಟಿ ಜೊತೆ ಸಮಾಲೋಚನೆ ಮುಂದುವರೆದಿದ್ದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವದು ಎಂದು ಜಲಸಂಪನ್ಮೂಲ ,ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಭರವಸೆ ನೀಡಿದ್ದಾರೆ

ಬೆಳಗಾವಿಯಲ್ಲಿ ಕೆಎಲ್ಈ ಸಂಸ್ಥೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ನರ್ಸಿಂಗ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ನರ್ಸಿಂಗ್ ಯುನಿವರ್ಸಿಟಿ ಆರಂಭಿಸುವ ಆಲೋಚನೆಯನ್ನು ಮುಂದಿಟ್ಟಾಗ ಕೆಲವರು ಅದಕ್ಕೆ ವಿರೋಧ ಮಾಡಿದರು ಇದನ್ನು ಲೆಕ್ಕಿಸದೇ ನರ್ಸಿಂಗ್ ಸೇವೆಗೆ ಹೊಸ ಆಯಾಮ ನೀಡುವ ಉದ್ದೇಶದಿಂದ ನರ್ಸಿಂಗ್ ಯುನಿವರ್ಸಿಟಿ ಆರಂಭಿಸುವ ತೀರ್ಮಾ ಕೈಗೊಂಡಿದ್ದೇನೆ ಎಂದರು

ನರ್ಸಿಂಗ್ ಕ್ಷೇತ್ರ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹಲವಾರು ಸಮಸ್ಯೆಗಳಿವೆ ನಾನೂ ಎರಡು ನರ್ಸಿಂಗ್ ಕೇಂದ್ರಗಳನ್ನು ನಡೆಸುತ್ತಿದ್ದೇನೆ ಈ ಕ್ಷೇತ್ರದ ಬಗ್ಗೆ ನನಗೆ ಅನುಭವ ಇದೆ ಅಂತರಾಷ್ಟ್ರೀಯ ನರ್ಸಿಂಗ್ ಸಮ್ಮೇಳನದಲ್ಲಿ ಈ ಕ್ಷೇತ್ರದ ಜಾಗತಿಕ ಪ್ರತಿನಿಧಿಗಳು ಒಂದು ಕಡೆ ಸೇರಿ ಚರ್ಚೆ ಮಾಡುತ್ತಿರುವದು ಸಂತೋಷದ ಸಂಗತಿ ಈ ಸಮ್ಮೇಳನದಲ್ಲಿ ಕ್ಷೇತ್ರದ ಬೆಳವಣಿಗೆ ಕುರಿತು ಚಿಂತನೆ ನಡೆಯಲಿ ಸಮ್ಮೇಳನದಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಒಬ್ಬ ವೈದ್ಯಕೀಯ ಶಿಕ್ಷಣ ಸಚಿವನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದರು

ರಾಜ್ಯಸಭಾ ಸದಸ್ಯ ಹಾಗೂ ಕೆಎಲ್ಈ ಸಂಸ್ಥೆ ಯ ಚೇರಮನ್ ಪ್ರಭಾಕರ ಕೋರೆ ಮಾತನಾಡಿ ನರ್ಸಿಂಗ್ ಸೇವೆ ಜಾಗತಿಕ ಮಟ್ಟದಲ್ಲಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ ಉತ್ತಮ ನರ್ಸಿಂಗ್ ಸೇವೆಯಿಂದಾಗಿ ವೈದ್ಯರ ಮೇಲಿನ ಒತ್ತಡ ಕಡಿಮೆಯಾಗಿದೆ ವೈದ್ಯರೇ ಚಿಕಿತ್ಸೆ ಕೊಡಬೇಕು,ವೈದ್ಯರೇ ತಪಾಸಣೆ ಮಾಡಬೇಕು ಎಲ್ಲವನ್ನು ವೈದ್ಯರೇ ಮಾಡಬೇಕು ಎನ್ನುವ ಪ್ರತೀತಿ ಇದೆ ಇದು ಹೋಗಬೇಕು ಎಂದು ಪ್ರಭಾಕರ ಕೋರೆ ಹೇಳಿದರು

ನರ್ಸಿಂಗ್ ಶಿಕ್ಷಣದ ಪಠ್ಯ ಅತ್ಯಂತ ಹಳೇಯದಾಗಿದೆ ಇಂದಿನ ಕಾಲಮಾನ ಕ್ಕೆ ತಕ್ಕಂತೆ ಶಿಕ್ಷಣ ಬದಲಾಗಬೇಕು ಈ ಬಗ್ಗೆ ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾ ಕ್ರಮ ಕೈಗೊಳ್ಳಬೇಕು ,ಬೆಳಗಾವಿಯಲ್ಲೇ ನರ್ಸಿಂಗ್ ಯುನಿವರ್ಸಿಟಿ ಆರಂಭಿಸಬೇಕು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ ಎಂದರು
ಶಿವಾನಂದ ಕೌಜಲಗಿ, ಡಾ ವಿಡಿ ಪಾಟೀಲ ಮಹಾಂತೇಶ ಕವಟಗಿಮಠ ಸೇರಿದಂತೆ ವಿವಿಧ ದೇಶಗಳ 1300 ಕ್ಕೂ ಹೆಚ್ವು ಪ್ರತಿನಿಧಿಗಳು ಸಮ್ಮೇಳನ ದಲ್ಲಿ ಭಾಗವಹಿಸಿದ್ದರು

Check Also

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.