ಬೆಳಗಾವಿ- ಮುಂಬೈಯಲ್ಲಿ ಕರ್ ನಾಟಕ್ ಪಾಲಿಟಿಕ್ಸ ಜೋರಾಗಿಯೇ ನಡೆಯುತ್ತಿದ್ದು ಬಿಜೆಪಿ ಗಾಳಕ್ಕೆ ಪ್ರತಿಗಾಳ ಹಾಕಲು ಕಾಂಗ್ರೆಸ್ಸಿನ ಪವರ್ ಫುಲ್ ಲೀಡರ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಎಂಟ್ರಿ ಹೊಡೆದಿದ್ದಾರೆ
ಇಂದು ಬೆಳಿಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮುಂಬೈಗೆ ದೌಡಾಯಿಸಿರುವ ಡಿಕೆಶಿ ಬಿಜೆಪಿ ನಾಯಕರ ನಿಯಂತ್ರಣದಲ್ಲಿರುವ ಕಾಂಗ್ರೆಸ್ ಶಾಸಕರನ್ನು ಮನವೊಲಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿರಿಯ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದು ಈ ಸ್ಥಾನಗಳನ್ನು ಅತೃಪ್ತ ಶಾಸಕರಿಗೆ ನೀಡಿ ಹೇಗಾದರೂ ಮಾಡಿ ಸರ್ಕಾರ ಉಳಿಸುವಂತೆ ಫರ್ಮಾನು ಹೊರಡಿಸಿದ್ದು ಅತೃಪ್ತ ಶಾಸಕರನ್ನು ಮನವೊಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ
ಬಿಜೆಪಿ ಸರ್ಕಾರ ಉರುಳಿಸಲು ತಂತ್ರ ರೂಪಿಸಿದ್ದರೆ ಸರ್ಕಾರ ಉಳಿಸಲು ಡಿಕೆಶಿ ಪ್ರತಿ ತಂತ್ರದೊಂದಿಗೆ ಮುಂಬೈಗೆ ದೌಡಾಯಿಸಿರುವದರಿಂದ ಬಿಜೆಪಿ ವಲಯದಲ್ಲಿ ಹಲ್ ಚಲ್ ಶುರುವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ
ಕಾಂಗ್ರೆಸ್ ಹೈಕಮಾಂಡ್ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಿ ಅವರ ಇಷ್ಟಾರ್ಥ ಗಳನ್ನು ಪೂರ್ಣಗೊಳಿಸಿ ಬಿಜೆಪಿ ಯ ಆಪರೇಶನ್ ಫೇಲ್ ಮಾಡುವ ಕಸರತ್ತು ಆರಂಭಿಸಿದೆ
ಡಿಕೆಶಿ ಮುಂಬೈ ಎಂಟ್ರಿಯಿಂದ ಬೆಳಗಾಗುವಷ್ಟರಲ್ಲಿ ಲೆಕ್ಕಾಚಾರಗಳು ಬುಡಮೇಲಾಗುವ ಸಾಧ್ಯತೆಗಳು ಹೆಚ್ಚಾಗಿವೆ ದೋಸ್ತಿ ಸರ್ಕಾರಕ್ಕೆ ಸದ್ಯಕ್ಕೆ ಎದುರಾಗಿರುವ ಸಂಕಟ ಶಮನಗೊಳಿದಲು ಕಾಂಗ್ರೆಸ್ ಜೆಡಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಅತೃಪ್ತ ಶಾಸಕರನ್ನು ತಮ್ಮ ತೆಕ್ಕೆಗೆ ಸೆಳೆಯುವ ಮಾಸ್ಟರ್ ಪ್ಲ್ಯಾನ್ ಈಗ ಅನುಷ್ಠನಗೊಳ್ಳುತ್ತಿದೆ
ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ನಿರ್ದೇಶನದ ಆಪರೇಶನ್ ಕಮಲ ಪಿಚ್ವರ್ ಹಿಟ್ ಆಗುತ್ತದೆಯೋ ಅಥವಾ ಬಿಡುಗಡೆಗೆ ಮೊದಲೇ ಠುಸ್ಸಾಗುತ್ತದೆಯೋ ಎನ್ನುವದನ್ನು ಕಾದು ನೋಡಬೇಕಾಗಿದೆ