ಬೆಳಗಾವಿ- ಬೀದಿ ನಾಯಿಗಳ ಹಾವಳಿಗೆ ಎರಡು ವರ್ಷದ ಮಗುವೊಂದು ಬಲಿಯಾದ ಹಿನ್ನಲೆಯಲ್ಲಿ
ಬೀದಿ ನಾಯಿಗಳ ಮೇಲೆ ಗ್ರಾಮಸ್ಥರ ಅಟ್ಯಾಕ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ
ಬೀದಿನಾಯಿ ದಾಳಿಯಿಂದ ಎರಡು ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊಚ್ಚಿಗೆದ್ದ ಗ್ರಾಮಸ್ಥರಿಂದ ಬೀದಿನಾಯಿಗಳನ್ನು ಸಿಕ್ಕ ಸಿಕ್ಕಲ್ಲಿ ಓಡೊಡಿ ಹೊಡೆದು ಕೊಲ್ಲುತ್ತಿದ್ದಾರೆ. ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದ ಎರಡು ವರ್ಷದ ಬಾಲಕ ಅಬ್ಬಾಸ್ ಅಲಿ ಬೀದಿ ನಾಯಿ ದಾಳಿಯಿಂದ ನಿನ್ನೆ ಮೃತಪಟ್ಟಿದ್ದರು. ಇದರಿಂದ ಗ್ರಾಮಸ್ಥರು ರೊಚ್ಚಿಗೆದ್ದು ಬೀದಿ ನಾಯಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ದೊಣ್ಣೆ ಕೋಲುಗಳಿಂದ ಬೀದಿ ನಾಯಿಗಳ ಮೇಲೆ ದಾಳಿ ನಡೆಸಿದ್ದಾರೆ..
ಗ್ರಾಮದ ಬೀದಿ, ಕಬ್ಬಿನ ಗದ್ದೆಗಳಲ್ಲಿ ಎಲ್ಲೆಂದರಲ್ಲಿ ನುಗ್ಗಿ ಹೊಡೆಯುತ್ತಿದ್ದಾರೆ. ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ೩ ಕ್ಕೂ ಹೆಚ್ಚು ನಾಯಿಗಳನ್ನು ಗ್ರಾಮಸ್ಥರು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಬೀದಿ ನಾಯುಗಳೂ ಎಲ್ಲಯೂ ಕಾನಿಸಿಕೊಳ್ಳುತ್ತಿಲ್ಲ.
ಇಂದು ಬೆಳಿಗ್ಗೆಯಿಂದಲೇ ಗ್ರಾಮಸ್ಥರು ತಂಡೋಪ ತಂಡವಾಗಿ ಕೈಯಲ್ಲಿ ಕೋಲು ಹಿಡಿದು ನಾಯಿಗಳ ಮೇಲೆ ಸಾಮೂಹಿಕ ದಾಳಿ ಮಾಡಿದ್ದಾರೆ