ಬೆಳಗಾವಿ:ದಂಪತಿಗಳಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಕ್ಕೇರಿ ತಾಲೂಕಿನ ಮಾವನೂರಿನ ಗಜೇಂದ್ರ ಈರಪ್ಪ ಹುನ್ನೂರಿ(60) ಹಾಗೂ ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ(45) ಹತ್ಯೆಗೀಡಾದ ದಂಪತಿ.
ಮಾವನೂರಿನಲ್ಲಿನ ಮನೆಯಲ್ಲಿ ದಂಪತಿಗಳಿಬ್ಬರನ್ನು ಮಾರಕಾಸ್ತ್ರಗಳಿಂದ ಮುಖ ಮತ್ತು ತಲೆಗೆ ಹಲ್ಲೆ ನಡೆಯಿಸಿ ಶುಕ್ರವಾರ ಕೊಲೆಗೈಯಲಾಗಿದೆ.
ದಂಪತಿಗೆ ಓರ್ವ ಮಗಳಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಮನೆಯಲ್ಲಿ ದಂಪತಿ ಮಾತ್ರವೇ ವಾಸಗಿದ್ದು, ಶುಕ್ರವಾರವೇ ಯಾರೋ ಮಾರಕಾಸ್ತ್ರಗಳಿಂದ ಕೊಚ್ಚಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಕ್ಕಪಕ್ಕದವರು ಭಾನುವಾರ ಬೆಳಗ್ಗೆ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ