ಚಿಕ್ಕೋಡಿ-ಮದುವೆಯಾಗಿ ಕೇವಲ ಮೂರು ತಿಂಗಳಲ್ಲಿ ಪತ್ನಿ ತನ್ನ ಲವರ್ ಜೊತೆಗೆ ಓಡಿ ಹೋಗಿ ಮದುವೆಯಾಗಿದ್ದಳು.ಇದರಿಂದ ಕೆರಳಿದ ಮೊದಲ ಪತಿ ತನ್ನ ಪತ್ನಿ ಮತ್ತು ಆಕೆಯ ಲವರ್ ಎರಡನೇಯ ಗಂಡನನ್ನು ಖಲ್ಲಾಸ್ ಮಾಡಿದ ಘಟನೆ ಅಥಣಿ ತಾಲ್ಲೂಕಿನ ಕೋಕಟನೂರ ಗ್ರಾಮದಲ್ಲಿ ನಡೆದಿದೆ.
ಮದುವೆಯಾಗಿ ಕೈ ಕೊಟ್ಟ ಪತ್ನಿ, ಪತ್ನಿ ಹಾಗೂ ಪ್ರಿಯತಮನನ್ನ ಕೊಚ್ಚಿ ಕೊಲೆ ಮಾಡಿದ ಮಾಜಿ ಪತಿ..!
ಚಿಕ್ಕೋಡಿ: ಮದುವೆಯಾಗಿ ಕೈ ಕೊಟ್ಟ ಪತ್ನಿ ಹಾಗೂ ಪ್ರಿಯತಮನನ್ನ ಮಾಜಿ ಪತಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಯಾಸಿನ ಬಾಗೊಡೆ 21,
ಹೀನಾಕೌಸರ್ ಸುದಾರಾಣೆ 19 ಕೊಲೆಯಾದ ದುರ್ದೈವಿಗಳು. ಮಾಜಿ ಪತಿ ತೌಫಿಕ್ ಕ್ಯಾಡಿ 24 ಕೊಲೆ ಮಾಡಿದ ಆರೋಪಿ. ಹಲ್ಲೆ ವೇಳೆ ಬಿಡಿಸಲು ಬಂದಿದ್ದ ಮೃತ ಯುವಕ ಯಾಸೀನಿನ ತಾಯಿ ಹಾಗೂ ಮಾವನ ಮೇಲೂ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಇಬ್ಬರನ್ನು ಮಿರಜ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.4 ತಿಂಗಳ ಹಿಂದೆ ಹೀನಾ ಹಾಗೂ ತೌಫಿಕ್ ನಡುವೆ ಮದುವೆಯಾಗಿತ್ತು.
ಮದುವೆಯಾಗಿ ಒಂದೇ ತಿಂಗಳಿಗೆ ಮೃತ ಯಾಸಿನ ಜೊತೆ ಪ್ರೀತಿಸಿ ಹೀನಾ ಓಡಿ ಹೋಗಿದ್ದಳು. ಒಂದುವರೆ ತಿಂಗಳ ಬಳಿಕ ಸಮಾಜದ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದ ಗ್ರಾಮಸ್ಥರು ಮಾಜಿ ಪತಿ ತೌಫಿಕ ಜೊತೆ ವಿವಾಹ ಮುರಿದಿದ್ದಳು. ಬಳಿಕ ಯಾಸಿನ್ ಜೊತೆ ಹೀನಾ ಬಾಡಿಗೆ ಮನೆ ಮಾಡಿ ವಾಸವಾಗಿದ್ದಳು. ಇಂದು ಸಂಜೆ ಕೋಪದಲ್ಲಿ ಪ್ರಿಯತಮ ಯಾಸಿನ್ ಹಾಗೂ ಹೀನಾಕೌಸರ ಮನೆಗೆ ತೆರಳಿ ತೌಫಿಕ್ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿ ತೌಫಿಕ್ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಐಗಳಿ ಪೊಲೀಸರ ಭೇಟಿ ನೀಡಿ ಆರೋಪಿ ತೌಫಿಕಗಾಗಿ ಎರಡೂ ತಂಡಗಳನ್ನು ರಚನೆ ಮಾಡಿ ಹುಡುಕಾಟ ನಡೆಸಿದ್ದಾರೆ. ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ