ಬೆಳಗಾವಿ-
ಬೆಳಗಾವಿಯಲ್ಲಿ ಇಂದು ಹಾಡ ಹಗಲೇ ಜೋಡಿ ಕೊಲೆ ನಡೆದಿದೆ. ಹಿರಿಯ ಸಹೋದರನಿಂದಲೇ ಇಬ್ಬರು ಕಿರಿಯ ಸಹೋದರರ ಭೀಕರ ಹತ್ಯೆ ನಡೆದಿದೆ. ಬೆಳಗವಿ ತಾಲೂಕಿನ ಅಲರವಾಡ ಗ್ರಾಮದ ರಸೂಲ್ ಮುಲ್ಲಾ ಇಬ್ಬರು ಸಹೋದರನ್ನು ಕೊಂದ ಆರೋಪಿ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಇಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಮುಲ್ಲಾ ಹಾಗೂ ಆರೋಪಿ ರಸೂಲ್ ಮುಲ್ಲಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ಹೋಗಿದ್ದು ಕೈಯಲ್ಲಿದ್ದ ಕುಡುಗೋಲಿನಿಂದ ರಸೂಲ್ ಮುಲ್ಲಾ ಸಹೋದರ ಮಹಮ್ಮದ್ ಮುಲ್ಲಾನನ್ನು ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಇದನ್ನು ನೋಡಿದ ಮತ್ತೊಬ್ಬ ಸಹೋದರ ಗೌಸ್ ಮುಲ್ಲಾ ಮಹಮ್ಮದ್ ಮುಲ್ಲಾ ಆಸ್ಪತ್ರೆಗೆ ಸಾಗಿಸಲು ಹೊರಟ್ಟಿದ್ದಾರೆ. ಬೆಳಗಾವಿ ಸಮೀಪದ ಎನ್ ಎಚ್ 4 ಬಳಿ ಬರುತ್ತಿದ್ದಂತೆ ವಾಹನ ನಡೆದ ರಸೂಲ್ ಮುಲ್ಲಾ ಗೌಸ್ ಮುಲ್ಲಾ ನನ್ನು ಸಹ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿ ರಸೂಲ್ ಮುಲ್ಲಾ ಪೊಲೀಸರ ವಶದಲ್ಲಿದ್ದಾನೆ. ಇನ್ನೂ ಮೃತರ ಇಬ್ಬರು ಸಹೋದರರ ಮರಣೋತ್ತರ ಪರೀಕ್ಷೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆ. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಇನ್ನೂ ಈ ಬಗ್ಗೆ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಡಿಸಿಪಿ ಸೀಮಾ ಲಾಟಕರ್ ಹಾಗೂ ಅಮರನಾಥ ರೆಡ್ಡಿ ಭೇಟಿ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ