ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ರೋಹನ್ ರೆಸಡೆನ್ಸಿ ಮೇಲೆ ದಾಳಿ ಮಾಡಿರುವ ಪೋಲೀಸರು ಹಳೆಯ ಐದನೂರು ಹಾಗು ಸಾವಿರ ಮುಖ ಬೆಲೆಯ ಮೂರು ಕೋಟಿ ಹನ್ನೊಂದು ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ
ಹಳೆಯ ಐದು ನೂರು ಹಾಗು ಸಾವಿರ ರೂ ಮುಖ ಬೆಲೆಯ ನೋಟು ಕೊಟ್ಟರೆ ಹೊಸ ನೋಟು ಕೊಡುವದಾಗಿ ವಂಚನೆ ಮಾಡುತ್ತಿದ್ದ ಒಟ್ಟು ಆರು ಜನರನ್ನು ಪೋಲೀಸರು ಬಂಧಿಸಿದರು
ಖಚಿತ ಮಾಹಿತಿ ಮೇರೆಗೆ ರೋಹನ್ ರೆಸಡೆನ್ಸಿ ಮೇಲೆ ದಾಳಿ ಮಾಡಿದ ಸಿಸಿಬಿ CPI ಗಡ್ಡೇಕರ ನೇತ್ರತ್ವದ ತಂಡ ದಾಳಿ ಮಾಡಿ ಆರೋಪಿತರಾದ ಅರವಿಂದ ಪುಂಡಲೀಕ ತಳವಾರ,ಸುಹಾಸ ಅಶೋಕ ಪಾಟೀಲ,ರಾಮಾ ಬೈರೂ ಪಾಟೀಲ,ಸದ್ದಾಮ ಹುಸೇನ ಶೇಖ,ಅನೀಲ ಪಟೇಲ್,ಅಬ್ದುಲ್ ನಾಸೀರ ಮಹ್ಮದ ಪಾಷಾ ಸೇರಿಂದತೆ ಒಟ್ಟು ಆರು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ
ಈ ಎಲ್ಲ ಆರೋಪಿಗಳು ನಮಗೆ ಆರ್ ಬಿಐ ಬ್ಯಾಂಕಿನ ಅಧಿಕಾರಿಗಳ ಜೊತೆ ನೆಂಟಿದೆ ಹಳೆಯ ನೋಟುಗಳನ್ನು ಬದಲಾಯಿಸಿ ಕೊಡುತ್ತೇವೆ ಎಂದು ಬರೋಬ್ಬರಿ ಮೂರು ಕೋಟಿ ಹನ್ನೊಂದು ಲಕ್ಷ ರೂ ಗಳನ್ನು ರೋಹನ್ ರೆಸಡೆನ್ಸಿ ಯಲ್ಲಿ ಕೂಡಿಟ್ಟ ಸಂಧರ್ಭದಲ್ಲಿ ದಾಳಿ ಮಾಡಿರುವ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ
ಕಾರ್ಯಾಚರಣೆ ನಡೆಸಿದ ಪೋಲೀಸ್ ತಂಡಕ್ಕೆ ವಿಶೇಷ ಬಹುಮಾನ ಕೊಡುವದಾಗಿ ಡಿಸಿಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ
Check Also
ಬೆಳಗಾವಿಯ ದಿವ್ಯಾ ಗಾಣಿಗೇರ ರಾಜ್ಯಕ್ಕೆ ಪ್ರಥಮ
ಬೆಂಗಳೂರು-ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ …