
ಬೆಳಗಾವಿ-ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನಮಾನ ನೀಡಿದ್ದಾರೆ.
ಕೆಪಿಸಿಸಿ ವಕ್ತಾರರನ್ನಾಗಿ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ನೇಮಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಖಾನಾಪೂರ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕ್ರಮಗಳಿಂದಾಗಿ,ಕ್ಷೇತ್ರದಲ್ಲಿ ಅಂಜಲಿತಾಯಿ ಎಂದೇ ಗುರುತಿಸಿಕೊಂಡಿರುವ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಪಕ್ಷದಲ್ಲೂ ರಾಜ್ಯಮಟ್ಟದ ಗಮನ ಸೆಳೆದಿದ್ದಾರೆ.
ಅಪಾರ ಸಾಮಾಜಿಕ ಕಳಕಳಿ ಹೊಂದಿರುವ,MBBS ಪದವೀಧರೆಯಾಗಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಈಗ ಕೆಪಿಸಿಸಿ ವಕ್ತಾರ್ ಆಗಿ ನೇಮಕಗೊಳ್ಳುವ ಮೂಲಕ ರಾಜ್ಯ ಮಟ್ಟದ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ