ಖಾನಾಪೂರ ಬಸ್ ನಿಲ್ಧಾಣ ಶಂಕು ಸ್ಥಾಪನೆ ವಿಚಾರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದೆ.ಇದರ ನಡುವೆ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಬೆಂಬಲಿಗರೊಂದಿಗೆ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.
2020 ರಲ್ಲಿ ಖಾನಾಪೂರ ಬಸ್ ನಿಲ್ಧಾಣದ ಕಾಮಗಾರಿಗೆ 7.35 ಕೋಟಿ ಹಣ ಮಂಜೂರಾಗಿತ್ತು 2022 ಜನೇವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆ ದಾರನಿಗೆ ವರ್ಕ್ ಆರ್ಡರ್ ಕೊಡಲಾಗಿತ್ತು.ಆದ್ರೆ ಕಾಮಗಾರಿ ಶುರು ಮಾಡಿರಲಿಲ್ಲ.
ಇವತ್ತು ಕಾಮಗಾರಿಗೆ ಚಾಲನೆ ನೀಡಲು ಭೂಮಿ ಪೂಜೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು ಆದ್ರೆ ಇವತ್ತು ಬೆಳಿಗ್ಗೆ ಮತ್ತೆ ರಾಜಕೀಯ ಮೇಲಾಟ ನಡೆದು ಜಿಲ್ಲಾಡಳಿತ ಕಾರ್ಯಕ್ರವನ್ನು ಏಕಾಏಕಿ ಮುಂದೂಡಿತು. ಇದಕ್ಕೆ ಕ್ಯಾರೆ ಅನ್ನದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಬೆಂಬಲಿಗರೊಂದಿಗೆ ಸೇರಿ ಬಸ್ ನಿಲ್ಧಾಣದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.
ಬೆಳಗಾವಿ ಸುದ್ದಿ ಡಾಟ್ ಕಾಮ್ ಜೊತೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ,ಖಾನಾಪೂರ ಬಸ್ ನಿಲ್ಧಾಣದ ಅಭಿವೃದ್ಧಿ ಪಡೆಸುವ ಸಂಕಲ್ಪ ಮಾಡಿದ್ದೇನೆ.ಈ ವಿಚಾರದಲ್ಲಿ ಕಳೆದ ಮೂರು ವರ್ಷಗಳಿಂದ ಸಂಘರ್ಷ ಮಾಡುತ್ತಿದ್ದೇನೆ.ಜನೇವರಿ ತಿಂಗಳಲ್ಲಿ ಕಾಮಗಾರಿಗೆ ವರ್ಕ್ ಆರ್ಡರ್ ಸಿಕ್ಕಿದೆ.ಇವತ್ತು ಕಾಮಗಾರಿಗೆ ಚಾಲನೆ ಕೊಟ್ಡಿದ್ದೇನೆ. 2023 ರ ಜನೇವರಿ ಹೊತ್ತಿಗೆ ಕಾಮಗಾರಿ ಮುಗಿಯುತ್ತದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೇ ಅಭಿವೃದ್ಧಿಗೊಂಡ ಬಸ್ ನಿಲ್ಧಾಣವನ್ನು ಉದ್ಘಾಟಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.
ಖಾನಾಪೂರ ಮಾಜಿ ಎಂಈಎಸ್ ಶಾಸಕ ಅರವಿಂದ ಪಾಟೀಲ ಈಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ,ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರವೇ ಇರುವದರಿಂದ ಹಾಲಿ- ಮಾಜಿ ಶಾಸಕರ ನಡುವೆ ರಾಜಕೀಯ ಸಂಘರ್ಷ ನಡೆಯುವದರಲ್ಲಿ ಸಂದೇಹವೇ ಇಲ್ಲ.