ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಅನಾವರಣಗೊಳ್ಳಲಿರುವ,ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಅತೀ ಎತ್ತರದ ಕಂಚಿನ ಪುತ್ಥಳಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಗೆ ತರಲಾಯಿತು
ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಮೇಯರ್ ಸಂಜೋತಾ ಬಾಂಧೇಕರ ಉಪ ಮೇಯರ್ ನಾಗೇಶ ಮಂಡೋಳ್ಕರ್ ಮಾಜಿ ಮಹಾಪೌರ ಕಿರಣ ಸೈನಾಯಕ ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಹಲವಾರು ಜನ ಗಣ್ಯರು ಮೂರ್ತಿಗೆ ಪೂಜೆ ನೆರವೇರಿಸಿ ಪುಷ್ಪ ಗೌರವ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು
ಬೆಳಗಾವಿಯ ಪ್ರಸಿದ್ಧ ಮೂರ್ತಿ ಕಾರ ಸಂಜಯ ಕಿಲ್ಲೇಕರ ಅವರು ಈ ಆಕರ್ಷಕ ಮೂರ್ತಿಯನ್ನು ನಿರ್ಮಿಸಿದ್ದಾರೆ ಮೂರ್ತಿ 15 ಅಡಿ ಎತ್ತರವಾಗಿದೆ 29 ಲಕ್ಷ ರೂ ವೆಚ್ಚದಲ್ಲಿ ಮೂರ್ತಿಯನ್ನು ನಿರ್ಮಿಸಲಾಗಿದೆ ಪಾಲಿಕೆ ಆವರಣದಲ್ಲಿ 15 ಅಡಿ ಎತ್ತರದ ಫೌಂಡೇಶನ್ ನಿರ್ಮಿಸಲಾಗಿದೆ ಒಟ್ಟಾರೆ ಡಾ ಬಾಬಾ ಸಾಹೇಬರ ಮೂರ್ತಿ ಒಟ್ಟು 30 ಅಡಿ ಎತ್ತರದಲ್ಲಿ ರಾರಾಜಿಸಲಿದೆ
ಬಾಬಾಸಾಹೇಬರ ಜಯಂತಿ ಉತ್ಸವದ ದಿನ ಈ ಮೂರ್ತಿ ಅನಾವರಣಗೊಳ್ಳಲಿದೆ ಎಂದು ಮೂರ್ತಿ ಪ್ರತಿಷ್ಠಾಪನೆಯ ರೂವಾರಿ ಅರ್ಜುನ್ ದೇಮಟ್ಟಿ ತಿಳಿಸಿದ್ದಾರೆ