ರೈತರ ನೆರವಿಗೆ ಕೇಂದ್ರ,ರಾಜ್ಯ ಸರ್ಕಾರಗಳು ಧಾವಿಸಲಿ- ದೇವೆಗೌಡ

ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲವಿದೆ ರೈತ ಸಮುದಾಯ ಸಂಕಷ್ಟದಲ್ಲಿದೆ ಜನ ಜಾನುವಾರಗಳು ನೀರು ಮತ್ತು ಮೇವಿಗಾಗಿ ಪರದಾಡುತ್ತಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಕ್ರೋಶ ವ್ಯೆಕ್ತಪಡಿಸಿದ್ದಾರೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೆ ಇನ್ನೊಬ್ಬರು ಹೊಣೆ ಹೊರಿಸಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ ಎಂದು ದೇವೆಗೌಡರು ಆರೋಪಿಸಿದರು

ರೈತರು ಸಂಕಷ್ಟದಲ್ಲಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿ ನಿಭಾಯಿಸಬೇಕು ರೈತರ ಸಾಲ ಮನ್ನಾ ಮಾಡಬೇಕು ರಾಜ್ಯದಲ್ಲಿ ಸಮರ್ಪಕವಾಗಿ ಬರ ಪರಿಹಾರ ಕಾಮಗಾರಿಗಳನ್ನು ನಡೆಸಬೇಕು ಎಂದು ದೇವೇಗೌಡರು ಒತ್ತಾಯಿಸಿದರು

ಗೋವಾದಲ್ಲಿ ಲಂಬಾನಿ ಸಮಾಜದವರನ್ನು ಒಕ್ಕಲೆಬ್ಬಿಸುತ್ತಿರುವದು ಸರಿಯಲ್ಲ ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಗಣಿಸಬೇಕು ಗೋವಾ ಕನ್ನಡಿಗರಿಗೆ ರಕ್ಷಣೆ ಒದಗಿಸಬೇಕು ಎಂದು ದೇವೇಗೌಡರು ಹೇಳಿದರು

Check Also

ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ವರ್ಗಾವಣೆ

ಬೆಳಗಾವಿ -ಕಳೆದ ಎರಡು ವರ್ಷಗಳಿಂದ ಬೆಳಗಾವಿ ಡಿಸಿಪಿ ( ಕಾ.ಸೂ) ಯಾಗಿ ಕರ್ತವ್ಯ ನಿಭಾಯಿಸಿದ ರೋಹನ್ ಜಗದೀಶ್ ಅವರ ವರ್ಗಾವಣೆಯಾಗಿದ್ದು …

Leave a Reply

Your email address will not be published. Required fields are marked *