Breaking News

ಬೆಳ್ಳಿ ರಥದಲ್ಲಿ..ಭಾರತ ರತ್ನದ ಕಿರಣ…!!

ಬೆಳಗಾವಿ- ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಾರುವ ಭವ್ಯ ಮೆರವಣಗೆಗೆ ಚಾಲನೆ ನೀಡಿದರು.

ನಗರದ ಸಂಬಾಜಿ ವೃತ್ತದಲ್ಲಿ ಅದ್ದೂರಿ ಮೆರವಣಿಗೆಗೆ ಅವರು ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಮ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯದ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್, ಶಾಸಕ ಫಿರೋಜ್ ಸೇಠ್, ಶಂಕರ್ ಮುನವಳ್ಳಿ, ಮಲ್ಲೇಶ ಚೌಗಲೆ, ಸಿಇಓ ಆರ್. ರಾಮಚಂದ್ರನ್ ಸೇರಿದಂತೆ ಇದ್ದರು.

ರಥದಲ್ಲಿದ್ದ ಡಾ. ಬಿ.ಆರ್. ಅಂಬೇಡಕರ್ ಅವರ ಪ್ರತಿಮೆಗೆ ಸಚಿವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಅಂಬೇಡಕರ್ ಅವರ ಜೀವನ ಸಾರುವ ಹಲವಾರು ರೂಪಕಗಳು ಹಾಗೂ ತೋಟಗಾರಿಕೆ, ಅಂಬೇಡ್ಕರ್ ಅಭಿವೃದ್ದಿ ನಿಗಮ ವಿವಿದ ಇಲಾಖೆಗಳ ಯೋಜನೆಗಳ ಮಾಹಿತಿ ರೂಪಕಗಳು ಭಾಗವಹಿಸಿದ್ದವು. ವಿಶೆಷವಾಗಿ ಕೊರೆಗಾಂವ ವಿಜಯೋತ್ಸವದ ಸ್ಮಾರಕ ಮನಸೆಳೆಯುವಂತಿತ್ತು.

ಮೆರವಣಿಗೆ ಕಿರ್ಲೊಸ್ಕರ್ ರಸ್ತೆ, ಸಮಾದೆವಿ ಗಲ್ಲಿ ಖಡೇಬಜಾರ್, ಶನಿವಾರ ಕೂಟ, ಕಾಕತಿ ವೇಸ್, ಚನ್ನಮ್ಮ ವೃತ್ತದ ಮೂಲಕ ಅಂಬೇಡ್ಕರ್ ಉದ್ಯಾನವನದಲ್ಲಿ ಸಮಾಪ್ತಿಗೊಳ್ಳಲಿದೆ.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಸಚಿವ ಜಾರಕಿಹೊಳಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಅಂಬೇಡ್ಕರ ಅವರು ಮಹಾ ಮಾನಾವತ ವಾದಿ ಸಂವಿದಾನದ ಮೂಲಕ ಸಮಾಜದಲ್ಲಿ ಸಮಾನತೆ ತಂದು ಜಾತ್ಯಾತೀತ ಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಕಾರಣಿ ಭೂತರಾಗಿದ್ದಾರೆ. ಅವರ ಆದರ್ಶಗಳು ಮತ್ತು ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ‌ನೀಡಿದರು.

ಬೆಳಗಾವಿ ನಗರದ ಕೋಟೆ ಕೆರೆಯಲ್ಲಿ ಭಗವಾನ್ ಬುದ್ದರ ವಿಶಾಲವಾದ ವಿಗ್ರಹ ನಿರ್ಮಾಣಕ್ಕೆ ೧ ಕೋಟಿಗೂ ಅಧಿಕ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅಲ್ಲದೆ ಪಾಲಿಕೆ ಆವರಣದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್ ಮೂರ್ತಿ ಉದ್ಘಾಟನೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಆಮಂತ್ರಿಸಲಾಗಿದ್ದು ಶೀಘ್ರದಲ್ಲಿಯೇ ದಿನಾಂಕವನ್ನು ನಿಗದಿ ಮಾಡಲಾಗುವದು ಎಂದು ಸಚಿವರು ತಿಳಿಸಿದರು

 

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *