ಬೆಳಗಾವಿ- ಅಧಿಕಾರ ಇರಲಿ ಬಿಡಲಿ ಅವರು ಯಾವತ್ತೂ ಜನರ ಮದ್ಯ ಇರ್ತಾರೆ,ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತಾರೆ, ಉದ್ಯಾನವನಗಳಲ್ಲಿ ಏಕಾಂಗಿಯಾಗಿ ಸ್ವಚ್ಚತಾ ಕಾರ್ಯಕ್ರಮ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿರುವ ಬೆಳಗಾವಿಯ ಸಮಾಜ ಸೇವಕ, ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಡಾಕ್ಟರ್ ದಿನೇಶ್ ನಾಶಿಪುಡಿ ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.
2022 ಎಪ್ರೀಲನಲ್ಲಿ ರಾಜ್ಯಸರ್ಕಾರ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ತಲಾ ಎರಡು ಸಾವಿರ ರೂ ಸಂಕಷ್ಟ ಭತ್ತೆಯನ್ನು ಕೊಡಬೇಕೆಂದು ಆದೇಶ ಹೊರಡಿಸಿತ್ತು ಆದ್ರೆ ಪಾಲಿಕೆ ಅಧಿಕಾರಿಗಳು ಈ ಆದೇಶವನ್ನು ಮೂರು ವರ್ಷದಿಂದ ಅನುಷ್ಠಾನ ಮಾಡದೇ ಇರುವದನ್ನು ಗಮನಿಸಿದ ಪಾಲಿಕೆ ಸದಸ್ಯ ಡಾ. ದಿನೇಶ್ ನಾಶಿಪುಡಿ ಕಳೆದ ಮೂರು ತಿಂಗಳ ಹಿಂದೆ ಪೌರಕಾರ್ಮಿಕರಿಗೆ ಸಂಕಷ್ಟ ಭತ್ತೆಯನ್ನು ಕೊಡಬೇಕೆಂದು ಹೋರಾಟ ಆರಂಭಿಸಿದರು ಪಾಲಿಕೆ ಆಯುಕ್ತರಾಗಿದ್ದ ಅಶೋಕ ದುಡಗುಂಟಿ ಅವರಿಗೆ ಮನವಿ ಅರ್ಪಿಸಿದರು ಆದ್ರೆ ಅವರ ವರ್ಗಾವಣೆ ಆಯಿತು ಹೊಸದಾಗಿ ಪಾಲಿಕೆ ಆಯಕ್ತರಾಗಿ ಶುಭಾ ಬಿ ಅಧಿಕಾರ ಸ್ವೀಕರಿಸಿದ ದಿನವೇ ಪೌರಕಾರ್ಮಿಕರಿಗೆ ಸಂಕಷ್ಟ ಭತ್ತೆ ಪಾವತಿಸುವಂತೆ ಸರ್ಕಾರದ ಆದೇಶ ಪ್ರತಿಯೊಂದಿಗೆ ಮನವಿ ಅರ್ಪಿಸಿ ಸಂಕಷ್ಟ ಭತ್ತೆ ಕೊಡದಿದ್ದರೆ ಪಾಲಿಕೆ ಎದುರು ಉಪವಾಸ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದ್ದರು
ಡಾ.ದಿನೇಶ್ ನಾಶಿಪುಡಿ ಅವರ ಮನವಿಯನ್ನು ಗಂಭೀರವಾಗಿ ಪರಗಣಿಸಿದ ಪಾಲಿಕೆ ಆಯುಕ್ತೆ ಶುಭಾ ಬಿ ಅವರು ಕಳೆದ ಮೂರು ವರ್ಷಗಳಿಂದ ಪಾಲಿಕೆ ಕಚೇರಿಯಲ್ಲಿ ಧೂಳು ತಿನ್ನುತ್ತಿದ್ದ ಸರ್ಕಾರದ ಆದೇಶವನ್ನು ಪಾಲಿಸಿ ಮೊದಲನೇಯ ಹಂತದಲ್ಲಿ ಬೆಳಗಾವಿ ಪಾಲಿಕೆಯ ಪೌರಕಾರ್ಮಿಕರಿಗೆ ಒಂಬತ್ತು ತಿಂಗಳ ಸಂಕಷ್ಟ ಭತ್ತೆ ತಲಾ 18 ಸಾವಿರ ರೂಗಳನ್ನು ಪಾವತಿಸಿದ್ದಾರೆ ಪಾಲಿಕೆಯ 257 ಖಾಯಂ ಪೌರ ಕಾರ್ಮಿಕರಿಗೆ 9 ತಿಂಗಳ ಸಂಕಷ್ಟ ಭತ್ತೆ ಪಾವತಿಯಾಗಿದ್ದು ನಗರ ಸೇವಕ ಡಾ. ದಿನೇಶ್ ನಾಶಿಪುಡಿ ಅವರ ಹೋರಾಟದ ಫಲವಾಗಿದೆ
ಡಾ. ದಿನೇಶ್ ನಾಶಿಪುಡಿ ಅವರ ಸಾಮಾಜಿಕ ಕಳಕಳಿ ಮತ್ತು ಸಮಾಜಮುಖಿ ಕಾರ್ಯಗಳನ್ನು ಗಮನಿಸಿ ಸಚಿವ ಸತೀಶ್ ಜಾರಕಿಹೊಳಿ ಅವರು ಡಾ ದಿನೇಶ್ ನಾಶಿಪುಡಿ ಅವರನ್ನು ಪಾಲಿಕೆ ಸದಸ್ಯರನ್ನಾಗಿ ಸರ್ಕಾರದಿಂದ ನಾಮ ನಿರ್ದೇಶನ ಮಾಡಿಸಿದ್ದರು ಅವರ ನೇಮಕ ನಿಜವಾಗಲೂ ಸಾರ್ಥಕವಾಗಿದ್ದು ಬೆಳಗಾವಿ ಪಾಲಿಕೆಯ ಪೌರಕಾರ್ಮಿಕರು ದಿನೇಶ್ ನಾಶಿಪುಡಿ ಅವರ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.