ಬೆಳಗಾವಿ 362 ಪ್ರಶಿಕ್ಷಣಾರ್ಥಿಗಳು 40 ಕ್ಕೂ ಹೆಚ್ಚು ಮಹಿಳೆಯರು 9 ತಿಂಗಳು ತರಬೇತಿ ಪಡೆದು ಸೇವೆಗೆ ಸಿದ್ಧರಾಗಿರುವದು ಪ್ರಮುಖ ವಾಗಿದ್ದು ಎಲ್ಲ ಸವಾಲುಗಳನ್ನು ಎದುರಿಸಲು ಸನ್ನಧ್ಧರಾಗಬೇಕೆಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು
ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ.
ಯಾವುದೇ ಸಂದರ್ಭದಲ್ಲಿ ರಾಜ್ಯದ ನಾಡು, ನುಡಿ, ಜಲದ ಹಿತ ಕಾಪಾಡುವುದರಲ್ಲಿ ಕರ್ನಾಟಕ ಪೊಲೀಸ್ ಬಹಳ ಸಾಧನೆ ಮಾಡಿದೆ. ಪ್ರಶಿಕ್ಷಣಾರ್ಥಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಕಲ ತರಬೇತಿ ನೀಡಿದ್ದಾರೆ. ಈ ತರಬೇತಿ ರಾಜ್ಯಕ್ಕೆ ಅನಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.
ಆಧುನಿಕವಾಗಿರುವ ಪೊಲೀಸ್ ಆಗಬೇಕು. ಹೊಸ ಹೊಸ ಸವಾಲು ಬರುತ್ತಿವೆ. ಅದಕ್ಕೆ ಸಮರ್ಕವಾದ ವಿದ್ಯಾಹರ್ತೆ ಬೇಕಾಗುತ್ತದೆ. ತರಬೇತಿಯಲ್ಲಿ ಆಧುನಿಕವಾದ
ಸೈಬರ್ ಕ್ರೈಮ್ ನಿಂದ ಇಡೀ ಪ್ರಪಂಚದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಗಮನಿಸಿ ಬೆಂಗಳೂರಿನಲ್ಲಿ 22 ಕೋಟಿ ರು. ವೆಚ್ಚದಲ್ಲಿ ಇನ್ಫೋಸಿಸ್ ಸಹಾಯದಿಂದ ಸೈಬರ್ ಕ್ರೈಮ್ ಕುರಿತಾಗಿ ಪೊಲೀಸ್ ಅಧಿಕಾರಿಗೆ ತರಬೇತಿ ಕೊಡುವಲ್ಲಿ ಸರಕಾರ ಚಿಂತನೆ ನಡೆಸಿದೆ ಎಂದರು.
ಸಂವಿಧಾನದ ಚೌಕಟ್ಟಿನಲ್ಲಿ ಶಾಂತಿಯನ್ನ ಕಾಪಾಡುವ ಜವಾಬ್ದಾರಿ ಪೊಲೀಸರ ಮೇಲೆ ಇರುತ್ತದೆ. ಧರ್ಮ ಹಾಗೂ ಜಾತಿಯಲ್ಲಿ ಸಾಕಷ್ಟು ಸಂಘರ್ಷಗಳು ನಡೆಯುತ್ತಿವೆ. ಮುಂದೆ ಸೇವೆಗೆ ಅಣಿಯಾಗುತ್ತಿರುವ ಪ್ರಶಿಕ್ಷಣಾರ್ಥಿಗಳು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ವಿನಂತಿಸಿಕೊಂಡರು.
ಕನ್ನಡ ನಾಡು ಶಾಂತಿಯ ತೋಟವಾಗಿರಬೇಕಾದರೆ.
ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಗೃಹದಲ್ಲಿ 11ಸಾವಿರ ಕಟ್ಟಡ ನಿರ್ಮಿಸಿ ಅನೇಕ ಕಡೆಗಳಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಅದೇ ರೀತಿ ಪೊಲೀಸ್ ಗೃಹ 2 ರಲ್ಲಿ ಇನಷ್ಟು ಮನೆಗಳನ್ನು ನಿರ್ಮಿಸಲಾಗುತ್ತಿದೆ. 1ಲಕ್ಷ 6 ಸಾವರ ಸಿಬ್ಬಂದಿಗಳಿಗೆ ಮನೆ ನೀಡುವ ಚಿಂತನೆ ನಡೆಸಲಾಗಿದೆ.
ಕಳೆದ ವರ್ಷ 23, ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಈ ವರ್ಷ ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಲಿದ್ದೇವೆ. ಮುಂದಿನ ಐದು ವರ್ಷದಲ್ಲಿ 20 ಸಾವಿರಕ್ಕೂ ಅಧಿಕ ಹುದ್ದೆಯನ್ನು ಭರ್ತಿ ಮಾಡಲಿದ್ದೇವೆ ಎಂದರು.
ಶನಿವಾರ ಬಿ.ಕೆ.ಕಂಗ್ರಾಳಿಯ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮಹಿಳಾ ಮತ್ತು ಪುರುಷ ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದರು.
ಶಾಸಕರಾದ ಅಂಜಲಿ ನಿಂಬಾಳ್ಕರ್, ಶ್ರೀಮಂತ ಪಾಟೀಲ, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ಕೆಎಸ್ ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ , ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಎಸ್ಪಿ ಸುಧೀರಕುಮಾರ ರೆಡ್ಡಿ, ಡಿಸಿಪಿಗಳಾದ ಸೀಮಾ ಲಾಟ್ಕರ್, ಮಹಾನಿಂಗ ನಂದಗಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.