Breaking News

ಶಬರಿಮಲೆ ತೀರ್ಪು ಮರು ಪರಶೀಲನೆಗೆ ಅಯ್ಯಪ್ಪನ ಭಕ್ತರ ಆಗ್ರಹ

ಬೆಳಗಾವಿ : ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವಂತೆ ನೀಡಿರುವ ಸುಪ್ರಿಂ ತೀರ್ಪುನ್ನು ಮರುಪರಿಶೀಲನೆ ನಡೆಸುವಂತೆ ಒತ್ತಾಯಿಸಿ ಹಿಂದೂಪರ ವಿವಿಧ ಸಂಘಟನೆಗಳು ಹಾಗೂ ಬೆಳಗಾವಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ನೇತೃತ್ವದಲ್ಲಿ  ಶನಿವಾರ  ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಮನವಿ ಸಲ್ಲಿಸಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ಶಬರಿಮಲೆ ದೇವಸ್ಥಾನದಲ್ಲಿ 10ರ ವಯಸ್ಸಿನೊಳಗೆ ಹಾಗೂ 50 ವಯಸ್ಸು ಮೇಲ್ಪಟ್ಟ ಮಹಿಳರನ್ನು ಹೊರತುಪಡಿಸಿ,  ಮಹಿಳೆಯರಿಗೆ ಪ್ರವೇಶ ನಿಷೇಧಿಸಿದರುವುದು ಪಾರಂಪರಿಕವಾಗಿದೆ. ಆದರೆ ರಾಜಕೀಯ ದುರುದ್ದೇಶದಿಂದ ಕೇರಳ ಸರ್ಕಾರ ಸೇರಿದಂತೆ ಇನ್ನಿತರರು ಕೋರ್ಟ್ ಮೊರೆ ಹೋಗಿದ್ದರಿಂದ ಮಹಿಳೆಯರಿಗೆ ಪ್ರವೇಶ ಮಾಡುವಂತೆ ತೀರ್ಪು ನೀಡಿದೆ. ಇದರಿಂದ ಹಿಂದೂ ಭಾವನೆಗಳಿಗೆ ತೀವೃ ಘಾಸಿ ಮಾಡಿದೆ. ಆದ್ದರಿಂದ ಸುಪ್ರಿಂ ತೀರ್ಪು ಮರುಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಸದ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ,  ಸುರೇಂದ್ರ ಗುರುಸ್ವಾಮಿ, ಸಿದ್ದನಕೊಳ್ಳದ ಗಂಗಾಧರ ಸ್ವಾಮೀಜಿ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ರಣಗಟ್ಟಿಮಠ,   ಶ್ರೀಕಾಂತ ಕದಮ, ಕೃಷ್ಣ ಭಟ್, ನಾಗಾನಾಥ ಸ್ವಾಮೀಜಿ,  ಗಜಾನನ ರಾಯಕರ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *