ಬೆಳಗಾವಿ- ಮುಖಕ್ಜೆ ಮಾಸ್ಕ ಹಾಕಿಕೊಂಡು ನೂರಾರು ವಿಧ್ಯಾರ್ಥಿಗಳ ಜೊತೆ ಬೆಳಗಾವಿ ಬಸ್ ನಿಲ್ದಾಣ ಪ್ರವೇಶಿಸಿದ ಪ್ರಭಾಕರ ಕೋರೆ ಅವರು ಅಲ್ಲಿಯ ಪರಿಸ್ಥಿತಿ ನೋಡಿ ದಂಗಾದರು ಕೂಡಲೇ ಮ್ಯಾನೇಜರನನ್ನು ಕರೆಯಿಸು ಸ್ವಚ್ಛತೆ ಕಾಪಾಡಲು ನಿನಗೇನು ಧಾಡಿ.. ನಿನ್ನ ಮನೆ ಹೀಗೆ ಇಟ್ಕೊಳ್ಳತಿಯಾ? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು
ಬಸ್ ನಿಲ್ದಾಣದ ದ್ವಾರ ಬಾಗಿಲಲ್ಲಿಯೇ ಕಸದ ರಾಶಿ ಬಿದ್ದಿದೆ ಇದರಿಂದ ನಗರದ ಮಾನ ಹೋಗುತ್ತಿದೆ,ವಾರದಲ್ಲಿ ಇಲ್ಲಿಯ ಪರಿಸ್ಥಿತಿ ಬದಲಾಗ ಬೇಕು ನಿಲ್ದಾಣದ ಆವರಣದಲ್ಲಿ ಇನ್ನಷ್ಟು ಶೌಚಾಲಯಗಳ ನಿರ್ಮಾಣ ಮಾಡಬೇಕು ಸಂಸ್ಥೆಯಿಂದ ನೀನು ಹೊಟ್ಟೆ ತುಂಬಸ್ತಿಯಾ ಸಂಸ್ಥೆಯ ಗೌರವ ಹೆಚ್ಚಿಸಲು ನಿಯತ್ತಿನಿಂದ ದುಡಿಯುವ ಮನೋಭಾವ ಬೆಳೆಸಿಕೋ ಎಂದು ಕೋರೆ ಸಾಹೇಬರು ಮ್ಯಾನೇಜರನನ್ನು ತರಾಟೆಗೆ ತೆಗೆದುಕೊಂಡರು
ಇದಾದ ಬಳಿಕ ನಗರದ ಬೀಡಾ ಅಂಗಡಿಗಳಲ್ಲಿ ಗುಟಕಾ ಮಾರಾಟಕ್ಕೆ ಇಟ್ಟಿದನ್ನು ಗಮನಿಸಿದ ಅವರು ಅಂಗಡೀಕಾರರುಗೆ ಬುದ್ದಿವಾದ ಹೇಳಿದರು ದಯವುಟ್ಟು ಮಕ್ಜಳಿಗೆ ಗುಟಕಾ ಸಿಗರೇಟ್ ಕೊಡಬೇಡಿ ಗುಟಕಾ ಸೇವನೆಯಿಂದ ಮಕ್ಕಳ ಆರೋಗ್ಯ ಹದಗೆಡುತ್ತಿದೆ ಎಂದು ಸುಮಾರು ೨೦ ಕ್ಕೂ ಹೆಚ್ಚು ಅಂಗಡಿಗಳಿಗೆ ಭೇಟಿ ನೀಡಿ ಕೋರೆ ಸಾಹೇಬರು ಬುದ್ಧಿವಾದ ಹೇಳಿದ್ದು ವಿಶೇಷವಾಗಿತ್ತು