Breaking News

ಅಮೇರಿಕ, ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ

ಬೆಳಗಾವಿ: ಕೆಎಲ್ ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಅಮೆರಿಕದ ಫಿಲಾಡೆಲ್ಫಿಯಾದಲ್ಲಿರುವ ಥಾಮಸ್ ಜೆಫರಸನ್ ವಿವಿಯ ಮೇ 25ರ ಘಟಿಕೋತ್ಸವ ಸಮಾರಂಭದಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿ ಪ್ರಧಾನ ಮಾಡಲಾಯಿತು.

ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಪ್ರಭಾಕರ್ ಕೋರೆ ಪಾತ್ರರಾಗಿದ್ದಾರೆ.

ಡಾ.ಪ್ರಭಾಕರ್ ಕೋರೆಯವರ ಬಯೋಡೆಟಾ ನೀಡಿ ಡಾಕ್ಟರೇಟ್ ನೀಡುತ್ತಿಲ್ಲ. ಡಾ.ಪ್ರಭಾಕರ್ ಕೋರೆ ಮಾಡಿದ ಕಾರ್ಯ ಖುದ್ದು ನೋಡಿ ಡಾಕ್ಟರೇಟ್ ನೀಡಲಾಗುತ್ತಿದೆ. ಶಿಕ್ಷಣ, ವೈದ್ಯಕೀಯ ಸೇವೆ, ಸಂಶೋಧನೆ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ ಎಂದು ಕೆಎಲ್‌ಇ ಯೂನಿವರ್ಸಿಟಿ ಸಂಶೋಧಕ ನಿರ್ದೇಶಕ ಡಾ.ಶಿವಪ್ರಸಾದ್ ಗೌಡರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಮೆರಿಕದ ಪ್ರತಿಷ್ಠಿತ ವಿವಿಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಜೆಫರಸನ್ ವಿಶ್ವವಿದ್ಯಾಲಯ ಒಂದಾಗಿದೆ.
ಘಟಿಕೋತ್ಸವ ಸಮಾರಂಭದಲ್ಲಿ ‘ಇಂಡಿಯಾ ಸೆಂಟರ್ ಫಾರ್‌ ಸ್ಟಡೀಸ್’ ಘಟಕವನ್ನೂ ಉದ್ಘಾಟಿಸಲಾಯಿತು. ಇಟಲಿ, ಐರ್ಲೆಂಡ್, ಇಸ್ರೇಲ್ ಬಳಿಕ ನಾಲ್ಕನೇ ವಿದೇಶಿ ಅಧ್ಯಯನ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿದೆ.
ಅಧ್ಯಯನ ಕೇಂದ್ರದ ಉದ್ಘಾಟನೆಗೆ ಸಂಯುಕ್ತ ಅಮೆರಿಕದ ಭಾರತೀಯ ರಾಯಬಾರಿಗೆ ಆಹ್ವಾನ ನೀಡಲಾಗಿತ್ತು.
ಥಾಮಸ್ ಜೆಫರಸನ್ ವಿವಿ ಹಾಗೂ ಕೆಎಲ್‌ಇ ಮಧ್ಯೆ ಶೈಕ್ಷಣಿಕ, ಸಂಶೋಧನಾ ಸಹಯೋಗವಿದೆ. ಕೆಎಲ್‌ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ವಿದ್ಯಾಲಯ, ನರ್ಸಿಂಗ್, ಫಿಸಿಯೋಥೆರಪಿ ಸೇರಿ ವಿವಿಧ ಕಾಲೇಜುಗಳ ಜೊತೆ ಥಾಮಸ್ ಜೆಫರಸನ್ ವಿವಿ ಒಪ್ಪಂದ ಮಾಡಿಕೊಂಡಿವೆ.

ತಾಯಿ ಮತ್ತು ನವಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ಸಂಶೋಧನೆ ಜಂಟಿ ಸಂಶೋಧನೆ ನಡೆಸುತ್ತಿವೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆ ಮನ್ನಣೆ ಪಡೆದಿದೆ.
ಆರೋಗ್ಯ ನೀತಿ ಮತ್ತು ಮಾರ್ಗಸೂಚಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಈ ಆರೋಗ್ಯ ನೀತಿ & ಮಾರ್ಗಸೂಚಿಗಳನ್ನು WHO, ICMR ಸೇರಿ 54 ರಾಷ್ಟ್ರಗಳ ಆರೋಗ್ಯ ಸಚಿವಾಲಯ ಅಳವಡಿಸಿಕೊಂಡಿವೆ. ಇದಕ್ಕೆ ಡಾ‌‌.ಪ್ರಭಾಕರ್ ಕೋರೆ ನಿರಂತರ ಸಲಹೆ, ಮಾರ್ಗದರ್ಶನ, ಬೆಂಬಲ ಪ್ರೋತ್ಸಾಹ ಕಾರಣ ಎಂದು ಎಂದು ಅವರು ತಿಳಿಸಿದರು.

ಕೆಎಲ್ ಇ ಥಾಮಸ್ ಜೆಫರಸನ್ ವಿವಿ ಜೊತೆಗೂಡಿ ಹಲವು ಸಂಶೋಧನೆಗಳನ್ನು ನಡೆಸಿವೆ. ತಾಯಿ ಮತ್ತು ಶಿಶು ಆರೋಗ್ಯ ಸಂಶೋಧನೆ, ಮೂತ್ರ ಶಾಸ್ತ್ರ, ನರವಿಜ್ಞಾನ, ವಿಕಿರಣಶಾಸ್ತ್ರ, ಮನೋವೈದ್ಯಶಾಸ್ತ್ರ, ಸಾರ್ವಜನಿಕ ಆರೋಗ್ಯ, ಭೌತಿಕ ಚಿಕಿತ್ಸೆ, ಶುಶ್ರೂಷಾ ವಿಜ್ಞಾನ, ಸಮಗ್ರ ಆರೋಗ್ಯ ಸೇರಿ ಮುಂತಾದ ಕುರಿತಾಗಿ ಸಂಶೋಧನೆ ಸಹಯೋಗ ನೀಡಿವೆ.

ಥಾಮಸ್ ಜೆಫರಸನ್ ವಿವಿ 1824ರಲ್ಲಿ ಸ್ಥಾಪಿತವಾದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದ್ದು, ಅಮೆರಿಕದ ಪ್ರಮುಖ 10 ವಿವಿಗಳಲ್ಲಿ ಸ್ಥಾನ ಪಡೆದಿದೆ. ಕೆಎಲ್‌ಇ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಶಿಕ್ಷಣ ಪಡೆಯುವ ಯೋಜನೆಯೂ ಇದೆ. ಥಾಮಸ್ ಜೆಫರಸನ್ ವಿವಿ ಗ್ಲೋಬಲ್ ಅಫೆರ್ಸ್ ಮುಖ್ಯಸ್ಥ ಡಾ‌‌.ರಿಚರ್ಡ್ ಡರ್ಮನ್ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *