ಬೆಳಗಾವಿ-ಡಾ. ಪ್ರಭಾಕರ ಕೋರೆ ಅಂದ್ರೆ ಯಾರಿಗೆ ಗೊತ್ತಿಲ್ಲ,ಅವರೊಬ್ಬ ಗ್ಲೋಬಲ್ ವ್ಯಕ್ತಿ,ಲಿಂಗಾಯತ ಸಮಾಜದ ಪವರ್ ಫುಲ್ ಲೀಡರ್ ಅವರು ಅಗಸ್ಟ್ 1 ರಂದು ಜನುಮ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಸಿದ್ರಾಮಯ್ಯ ಅಗಸ್ಟ್ 3 ರಂದು ದಾವಣಗೇರೆಯಲ್ಲಿ ಜನುಮ ದಿನವನ್ನು ಉತ್ಸವವನ್ನಾಗಿ ಆಚರಿಸಿಕೊಳ್ಳುತ್ತಿದ್ದರೆ, ನಮ್ಮ ಪ್ರಭಾಕರ ಕೋರೆ ಅವರು ಬೃಹತ್ ಉಚಿತ ತಪಾಸಣೆ ಶಿಬಿರ ಆಯೋಜಿಸಿ ಜನುಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ, ಕೋವಿಡ ಹಾಗೂ ಹೆಪಾಟೈಟಿಸ್ ಬಿ ಮತ್ತು ಸಿ ವ್ಯಾಕ್ಸಿನ, ಪೈಬ್ರೋ ಸ್ಕಾö್ಯನ ಬೋನ್ ಡೆನ್ಸಿಟಿ ತಪಾಸಣಾ ಶಿಬಿರವನ್ನು ಇದೇ ದಿ. 1 ಅಗಷ್ಟ 2022ರಂದು ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಎಲಬು ಕೀಲು ವಿಭಾಗದಲ್ಲಿ ಬೋನ್ ಡೆನ್ಸಿಟಿ, ಗ್ಯಾಸ್ಟೊçÃಎಂಟ್ರಾಲಜಿ ಹೆಪಾಟೈಟಿಸ ಬಿ, ಸಿ ತಪಾಸಣೆ ಮತ್ತು ವ್ಯಾಕ್ಸಿನ ನೀಡಿದರೆ, ಕೋವಿಡನ ಕೋವಿಶೀಲ್ಡ್ ವ್ಯಾಕ್ಸಿನ್, ಶುಗರ ತಪಾಸಣೆ, ಇಸಿಜಿ ಉಚಿತವಾಗಿ ಮಾಡಲಾಗುತ್ತದೆ. ಮೆಡಿಸಿನ್, ಶಸ್ತçಚಿಕಿತ್ಸೆ, ಎಲಬು ಕೀಲು, ಚಿಕ್ಕಮಕ್ಕಳ, ಹೆರಿಗೆ ಮತ್ತು ಸ್ತಿçÃರೋಗ, ಕಣ್ಣು, ಕವಿ, ಮೂಗು, ಗಂಟಲು, ಚರ್ಮ ವಿಭಾಗದಲ್ಲಿ ಉಚಿತ ತಪಾಸಣೆ ನಡೆಸಲಾಗುತ್ತದೆ.ಹೆ
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಜನಸಂಪರ್ಕ ವಿಭಾಗ ದೂ. 0831-2551116/7 ಸಂಪರ್ಕಿಸಿ. ಆಸಕ್ತರು ಈ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಿಸಿಕೊಂಡು, ಉಚಿತ ವ್ಯಾಕ್ಸಿನ ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಕೋರಿದ್ದಾರೆ.