ಬೆಳಗಾವಿ- ಬಸ್ಸಿನಲ್ಲಿ ಸಂಚರಿಸುವಾಗ ಕಿಟಕಿಯಿಂದ ಕೈ ಹೊರಗೆ ಪರಿಣಾಮ ತುಂಡಾಗಿ ಹೋಗಿದ್ದ ಐದು ವರ್ಷದ ಬಾಲಕಿಯ ಕೈಯನ್ನು ಹತ್ತು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೋಡಣೆ ಮಾಡುವಲ್ಲಿ ಬೆಳಗಾವಿಯ ವಿಜಯಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
12/06/2019 ರಂದು ಕುಮಾರಿ ಆಯಾ ಶೇಖ ಎಂಬ ಐದು ವರ್ಷದ ಚಿಕ್ಕ ಹುಡುಗಿ ಬಸ್ಸಿನಲ್ಲಿ
ಸಂಚರಿಸುತ್ತಿರುವಾಗ ಮಳೆಯ ನೀರನ್ನು ಹಿಡಿಯಲೆಂದು ಕಿಟಕಿಯಿಂದ ಬಲ ಕೈಯನ್ನು ಹೊರಚಾಚಿದಾಗ,
ಎದುರಗಡೆಯಿಂದ ಬರುತ್ತಿರುವ ಇನ್ನೊಂದು ವಾಹನಕ್ಕೆ ಈ ಬಡೆದು ತುಂಡಾಗಿ ಹೋಗಿತ್ತು.
ಆ ಚಿಕ್ಕ ಹುಡುಗಿಯನ್ನು ತಕ್ಷಣ ಪ್ರತಿಷ್ಟಿತ (VOTC24x7) ಆಸ್ಪತ್ರೆಯ ತುರ್ತು
ನಿಭಾ ಘಟಕ್ಕೆ ತರಲಾಯಿತು. ಮುಖ್ಯ ಹಾಗು ಪ್ರಧಾನ ಪ್ಲಾಸ್ಟಿಕ್ ಸರ್ಜನರಾದ ಡಾ. ವಿಜ್ಜಲ ಮಾಲಮಂಡೆ
ಪ್ರಥಮ ಚಿಕಿತ್ಸೆ ಹಾಗು ಸಂಪೂರ್ಣ ತಪಾಸಣೆ ಮಾಡಿದರು. ಖ್ಯಾತ ವೈದ್ಯರಾದ ಡಾ. ರವಿ ಬಿ ಪಾಟೀಲ ಅವರಮಾರ್ಗದರ್ಶನದಲ್ಲಿ ತುಂಡಾದ ಕೈಯನ್ನು ಮರುಜೋಡನೆ ಮಾಡಬಹುದು ಎಂದು ತಿರ್ಮಾನಿಸಲಾಯಿತು.
ಸುದೀರ್ಘ ಹತ್ತು ಘಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಪ್ರಧಾನ ಪ್ಲಾಸ್ಟಿಕ್ ಸರ್ಜನರಾದ ಡಾ ಎಚ್ಚಲ
ಮಾಲಮಂಡೆ, ಡಾ ಶುಭ ದೆಸಾಯಿ ( ಪ್ಲಾಸ್ಟಿಕ್ ಸರ್ಜನ), ಡಾ ಆರದಿಂದ ಹಂಪಣ್ಣವರ (ಚಿಕ್ಕ ಮಕ್ಕಳ
ವಿರುವ ಕಿಳು ತಜ್ಞರು), ಡಾ ಶ್ರೀಧರ ಕಟದಳ ಹಾಗೂ ಶ್ರೀಧರ ಕಲಕೇರಿ ಯವರನ್ನು ಒಳಗೊಂಡ
ತಂಡದೊಂದಿಗೆ ತುಂಡಾದ ಕೃಯನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡಲಾಗಿದೆ ಎಂದು ಡಾ. ರವಿ ಪಾಟೀಲ ಹೇಳಿದರು.
ಕುಮಾರಿ ಶೇಖಳನ್ನು ಒಂದು ವಾರದ ಚಿಕಿತ್ಸೆಯ ನಂತರ ಡಿಸ್ಟಾರ್ಜ ಮಾಡಲಾಯಿತು. ಒಂದು ವರ್ಷ
ಸತತ ಮರು ತಪಾಸಣೆ ಹಾಗೂ ಚಿಕಿತ್ಸೆ ಕೊಡಲಾಯಿತು. ಈ ಸತತ ಹಾಗೂ ಸೂಕ್ಷ್ಮ ಚಿಕಿತ್ಸೆಯಿಂದಾಗಿ ಒಂದು
ವರ್ಷದ ಬಳಿಕ ತನ್ನ ತುಂಡಾದ ಕೈ ಹಾಗೂ ಬೆರೆಳುಗಳನ್ನು ಸಂಪುರ್ಣವಾಗಿ ಕ್ರಿಯಾಶೀಲವಾಗಿವೆ,ಮೊದಲಿನಂತೆ ಈ ಬಾಲಕಿ ತನ್ನ ಕೈ ಮತ್ತು ಬೆರಳುಗಳನ್ನು ಉಪಯೋಗಿಸುತ್ತಿದ್ದಾಳೆ ನಮ್ಮ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಡಾ. ರವಿ ಪಾಟೀಲ ಹೇಳಿದರು.
ಈ ತರದ ತುಂಡಾದ ಹಂಗಾಂಗಗಳನ್ನು ಮರುಜೋಡಣೆ ಮಾಡುವ ಸಕಲ ಸೌಕರ್ಯ ಹಾಗೂ
ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಘಟಕ ಹೊಂದಿದ್ದು, ಜನಸೇವೆಗೆ ಸಮರ್ಪಿಸಲಾಗಿದೆ,ಎಂದು
ಡಾ ರವಿ ಪಾಟೀಲ ಹೇಳಿದರು. ಈ ತರಹ ಅಹಿತಕರ ಘಟನೆಯಲ್ಲಿ ತುಂಡಾದ ಕೈ ಕಾಲಗಳನ್ನು
ಶೀಥಲ ವ್ಯವಸ್ಥೆಯಲ್ಲಿ ಮೂರು ತಾಸಿನ ವಳಗಡೆ ಆಸ್ಪತ್ರೆಗೆ ತಂದಲ್ಲಿ ಮರುಜೋಡಣೆ ಮಾಡುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಕೈಗೊಳ್ಳಬಹುದು.ಎಂದು ಡಾ.ರವಿ ಪಾಟೀಲ ಹೇಳಿದರು..