ಬೆಳಗಾವಿ – ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಡಾ.ಶಾಲಿನಿ ರಜನೀಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ನಾಳೆ ಬೆಳಗಾವಿಗೆ ಬರುತ್ತಿದ್ದಾರೆ.
ನಾಳೆ ಸೋಮವಾರ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು ಸಿಎಂ ಜೊತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಂತ್ರಿಗಳು ಬೆಳಗಾವಿಗೆ ಬರುತ್ತಿದ್ದು ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಂಡಿರುವ ಶಾಲಿನಿ ರಜನೀಶ್ ಸಿಎಂ ಜೊತೆ ಬೆಳಗಾವಿಗೆ ಬರುತ್ತಿದ್ದಾರೆ.
ಶಾಲಿನಿ ರಜನೀಶ್ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೃಷ್ಣಾ ನದಿಗೆ ಪ್ರವಾಹ ಎದುರಾಗಿತ್ತು ಆ ಸಂಧರ್ಭದಲ್ಲಿ ಪ್ರಕಾಶ್ ಹುಕ್ಕೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಪ್ರವಾಹ ಹಾನಿಯ ಬಗ್ಗೆ ಸಮರ್ಪಕವಾದ ಪ್ರಸ್ತಾವೆ ಸಲ್ಲಿಸಿ ಶಾಲಿನಿ ರಜನೀಶ್ ಅವರು ಬೆಳಗಾವಿ ಜಿಲ್ಲೆಗೆ ಕೇಂದ್ರದಿಂದ 300 ಕೋಟಿಗೂ ಹೆಚ್ಚು ಅನುದಾನ ಬೆಳಗಾವಿ ಜಿಲ್ಲೆಗೆ ದೊರಕಿಸಿಕೊಡುವಲ್ಲಿ ಶಾಲಿನಿ ರಜನೀಶ್ ಯಶಸ್ವಿಯಾಗಿದ್ದರು.ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಶಾಲಿನಿ ರಜನೀಶ್ ಅವರಿಗೆ ಅಪಾರ ಅನುಭವ ಇದೆ. ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರುವ ಶಾಲಿನಿ ರಜನೀಶ್ ಅವರೇ ಬೆಳಗಾವಿಯ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲಿದ್ದಾರೆ.